
ಕಾಂತಾರ ಸಿನಿಮಾ ಬಂದ ಮೇಲೆ ರಿಷಬ್ ಶೆಟ್ಟಿಗೆ ದೇಶದಾದ್ಯಂತ ಫ್ಯಾನ್ ಫಾಲೋವರ್ಸ್ ಆಗಿದ್ದಾರೆ. ಸಿನಿಮಾ ಮಾಡಿದ್ರೆ ಈ ರೀತಿ ಮಾಡಬೇಕು ಎಂಬೆಲ್ಲಾ ಮಾತುಗಳು ಕೇಳಿ ಬಂದಿದೆ. ಕಡಿಮೆ ಬಜೆಟ್ ನಲ್ಲೂ ಜನರನ್ನು ಸೆಳೆಯುವಂತ ಸಿನಿಮಾ ಹೇಗೆ ಮಾಡಬಹುದು ಎಂಬುದನ್ನು ರಿಷಬ್ ನೋಡಿ ಕಲಿಯಬೇಕು ಅಂತೆಲ್ಲಾ ಬಾಲಿವುಡ್ ಮಂದಿ ಕೂಡ ಮಾತನಾಡಿದ್ದಾರೆ. ಸಿನಿಮಾ ಆಸ್ಕರ್ ಅಂಗಳದಲ್ಲೂ ನಲಿದಿತ್ತು. ಇದೀಗ ರಿಷಬ್ ಶೆಟ್ಟಿಗೆ ಸ್ಪೆಷಲ್ ಅವಾರ್ಡ್ ಸಿಕ್ಕಿದೆ.

ಸಿನಿಮಾ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವಾಗಿರುವ ದಾದಾ ಸಾಹೇಬ್ ಫಾಲ್ಕೆ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಅವಾರ್ಡ್ ನಲ್ಲಿ ರಿಷಬ್ ಶೆಟ್ಟಿ ಹೆಸರು ಕಾಣಿಸಿಕೊಂಡಿದೆ. ಭಾರತದ ಚಿತ್ರರಂಗದ ಒಳ್ಳೊಳ್ಳೆ ಚಿತ್ರಗಳು, ಒಳ್ಳೆಯ ನಟರು, ಚಿತ್ರ ತಂತ್ರಜ್ಞರು ಗುರುತಿಸಿ ದಾದಾ ಸಾಹೇಬ್ ಫಾಲ್ಕೆ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಅವಾರ್ಡ್ ನೀಡಲಾಗುತ್ತದೆ. ಈ ಬಾರಿ ರಿಷಬ್ ಶೆಟ್ಟಿ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ದಾದಾ ಸಾಹೇಬ್ ಫಾಲ್ಕೆ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಅವಾರ್ಡ್ ಇದೇ ತಿಂಗಳಲ್ಲಿ ನಡೆಯಲಿದೆ. ಫೆಬ್ರವರಿ 20ರಂದು ಮುಂಬೈನ ತಾಜ್ ವೆಸ್ಟ್ ಎಂಡ್ ಹೊಟೇಲ್ ನಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ʻಮೋಸ್ಟ್ ಪ್ರಾಮಿಸಿಂಗ್ ಆಕ್ಟರ್ʼ ಎಂಬ ಪ್ರಶಸ್ತಿ ಸ್ವೀಕರಿಸಲಿದ್ದಾರೆ.

GIPHY App Key not set. Please check settings