Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಶಿಷ್ಠಾಚಾರ ಹಾಗೂ ಚುನಾವಣೆ ಕೆಲಸ ನಿರ್ವಹಣೆಯಲ್ಲಿ ಕಂದಾಯ ಇಲಾಖೆ ನೌಕರರು ಬೆಸ್ಟ್ : ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ

Facebook
Twitter
Telegram
WhatsApp

ಚಿತ್ರದರ್ಗ,(ಜು.01): ಕಂದಾಯ ಇಲಾಖೆ ಸರ್ಕಾರದ ಎಲ್ಲಾ ಇಲಾಖೆಗಳ ಮಾತೃ ಇಲಾಖೆಯಾಗಿದೆ. ಶಿಷ್ಠಾಚಾರ ಹಾಗೂ ಚುನಾವಣೆ ಕೆಲಸ ನಿರ್ವಹಣೆಯಲ್ಲಿ ಕಂದಾಯ ಇಲಾಖೆ ನೌಕರರು ಬೆಸ್ಟ್ ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಹೇಳಿದರು.

ನಗರದ ತರಾಸು ರಂಗಮಂದಿರದಲ್ಲಿ ಶುಕ್ರವಾರ ಕಂದಾಯ ಇಲಾಖೆ‌ ಹಾಗೂ ಕಂದಾಯ ಇಲಾಖೆ, ಚಿತ್ರದುರ್ಗ ತಹಶೀಲ್ದಾರ್ ಕಚೇರಿ, ಕಂದಾಯ ಇಲಾಖೆ ನೌಕರರ ಸಂಘ ವತಿಯಿಂದ ಆಯೋಜಿಸಲಾದ ಕಂದಾಯ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅದೃಷ್ಟವಂತರಿಗೆ ಮಾತ್ರ ಕಂದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಅವಕಾಶ ದೊರೆಯುತ್ತದೆ. ಜನನದಿಂದ ಮರಣದವರೆಗೂ, ಮರಣದ ತರಯವಾಯ ಹೂಳಲು ಸ್ಮಶಾನ ಸಹ ಮಂಜೂರು ಮಾಡುವ ಕೆಲಸ ಕಂದಾಯ ಇಲಾಖೆಯದ್ದಾಗಿದೆ. ಜನಸಾಮಾನ್ಯರು, ವಿದ್ಯಾರ್ಥಿಗಳು, ರೈತರು, ಬಡವರು ನಿರ್ಗತಿಕರು, ಸೇವೆಯನ್ನು ಕಂದಾಯ ಇಲಾಖೆ ಮಾಡುತ್ತದೆ. ಉಪ ವಿಭಾಗಾಧಿಕಾರಿಯಾಗಿ, ಅಪರ ಜಿಲ್ಲಾಧಿಕಾರಿಯಾಗಿ ಇಲಾಖೆಯಲ್ಲಿ ಕೆಲಸ ಮಾಡಿ ಅನುಭವವಿದೆ. ನೌಕರರು ಬೇಜವಬ್ದಾರಿಯಿಂದ ಕೆಲಸ ಮಾಡಬೇಡಿ.
ಒಗಟ್ಟಿನಿಂದ ಕೆಲಸ ನಿರ್ವಹಿಸಿ. ಖಾಯಂ ಉದ್ಯೋಗ ಸಿಗುವುದು ಕಷ್ಟಕರವಾಗಿದೆ. ಕಂದಾಯ ಇಲಾಖೆಯಲ್ಲಿ ಕೆಲಸ ಪಡೆಯಲು ಪೂರ್ವಜನ್ಮದ ಪುಣ್ಯ ಮಾಡಿರಬೇಕು. ಇಂಜಿನಿಯರಿಂಗ್ ಪದವಿ ಪಡೆದವರು ಸಹ ಗ್ರೂಪ್ ಡಿ ನೌಕರಿಗೆ ಅರ್ಜಿ ಸಲ್ಲಿಸುತ್ತಿದ್ದಾರೆ. ಲಭಿಸಿದ ಕೆಲಸಕ್ಕೆ ಕುತ್ತು ತಂದುಕೊಳ್ಳಬೇಡಿ. ನೌಕರರ ಮೇಲೆ ಶಿಸ್ತುಕ್ರಮ ಕೈಗೊಳ್ಳಲು ಯಾರಿಗೂ ಮನಸ್ಸಾಗುವುದಿಲ್ಲ.

ಅನಿವಾರ್ಯತೆ ಇದ್ದಾಗ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ. ಶಾಲಾ ಮಕ್ಕಳ ಜಾತಿ ಮತ್ತು ಆದಾಯ ಪ್ರಮಾಣ ವಿತರಣೆಯಲ್ಲಿ ಉದಾಸೀನ ಮಾಡಬೇಡಿ. ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಗ್ರಾಮ ಸಹಾಯಕರ ಪಾತ್ರವೂ ಹಿರಿದಿದೆ. ಕಂದಾಯ ಇಲಾಖೆಯಲ್ಲಿ ವೈಯಕ್ತಿಕ ಕೆಲಸಗಳಿಗೆ ಸಮಯ ಸಾಲುವುದಿಲ್ಲ. ಆದರೂ ಇಲಾಖೆಯಲ್ಲಿ ಬಹಳ ಪ್ರತಿಭಾವಂತರು ಇದ್ದಾರೆ. ಈ ಪ್ರತಿಭೆಗಳು ಅನಾವರಣಗೊಳ್ಳಬೇಕು‌‌. ಕೆಲಸದ ಮಧ್ಯ ಇತರೆ ಮನೋರಂಜನಾ ಚಟುವಟಿಕೆಗೆ ಅವಕಾಶ ನೀಡಿ. ಯುದ್ಧ ಮಾಡದೇ ನಟ ಪುನೀತ್ ರಾಜಕುಮಾರ್ ನಾಡಿನ ಕೋಟಿ ಕೋಟಿ ಜನರ ಮನಗೆದ್ದಿದ್ದಾರೆ. ಅವರನ್ನೇ ಸ್ಪೂರ್ತಿಯಾಗಿ ತೆಗೆದುಕೊಳ್ಳಿ. ಕಂದಾಯ ಇಲಾಖೆಯಲ್ಲಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸಿದರೆ ಜನರು ಪ್ರೀತಿಯನ್ನು ನೀಡುತ್ತಾರೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ ಹೇಳಿದರು.

ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ ಮಾತನಾಡಿ, ಕಂದಾಯ ಇಲಾಖೆ ವಿಶಾಲ ವ್ಯಾಪ್ತಿ ಹೊಂದಿದೆ. ಚಿಕ್ಕಂದಿನಲ್ಲಿ ಇಲಾಖೆಯ ಗ್ರಾಮ ಸಹಾಯಕರೇ ನಮಗೆ ಆಶಾದಾಯಕಾಗಿ ಕಾಣುತ್ತಿದ್ದರು. ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆಯಲು ಅವರ ದುಂಬಾಲು ಬೀಳುತ್ತಿದ್ದೆ. ಆಗಿನ ಉಪವಿಭಾಗಾಧಿಕಾರಿಗಳನ್ನು ನೋಡಿ ಸ್ಪೂರ್ತಿಗೊಂಡು ಇಲಾಖೆ ಸೇರಿಕೊಳ್ಳುವ ಗುರಿ ಹೊಂದಿ, ವಿದ್ಯಾಭ್ಯಾಸ ಮಾಡಿದೆ. ಬಹಳ ವರ್ಷಗಳ ಹಿಂದೆ ಅಬಕಾರಿ, ಅರಣ್ಯ, ಆಹಾರ ಇಲಾಖೆಗಳು ಸಹ ಕಂದಾಯ ಇಲಾಖೆ ಅಡಿ ಬರ್ತಾ ಇದ್ದವು. ಪ್ರವಾಹ, ಬರ, ಚುನಾವಣೆ, ಕೊವಿಡ್ ಹೀಗೆ ಎಲ್ಲಾ ಸಂದರ್ಭದಲ್ಲಿ ಕೆಲಸ ನಿರ್ವಹಿಸುತ್ತವೆ. ಸೇವೆ ಮಾಡುವ ಅವಕಾಶ ಸಿಕ್ಕಿದೆ. ಇದು ಹೆಮ್ಮೆಯ ವಿಷಯ. ನೌಕರರು ಕಾರ್ಯಕ್ಷಮತೆ ಹೆಚ್ಚಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಉಪವಿಭಾಗಧಿಕಾರಿ ಆರ್.ಚಂದ್ರಯ್ಯ ಮಾತನಾಡಿ, ಕಂದಾಯ ಇಲಾಖೆ ಸರ್ಕಾರದ ಯೋಜನೆಗಳನ್ನು ಬಡವರಿಗೆ ತಲುಪಿಸುವ ಕಾರ್ಯ ಮಾಡುತ್ತದೆ. ರಾಜ್ಯದ ಪ್ರತಿ ಆಸ್ತಿ ದಾಖಲೆಗಳ ನಿರ್ವಹಣೆ ಕಂದಾಯ ಇಲಾಖೆ ಮಾಡುತ್ತದೆ. ಎಲ್ಲ ವರ್ಗದ ಜನರ ಸೇವೆ ಮಾಡುತ್ತೇವೆ. ನಮ್ಮ ಇಲಾಖೆ ನಮ್ಮ ಹೆಮ್ಮೆ. ಚಳಿ,‌ಮಳೆ, ಪ್ರವಾಹ, ಚುನಾವಣೆ ಹೀಗೆ 24 ತಾಸು ಸೇವೆ ಮಾಡುವವನೇ ಕಂದಾಯ ಇಲಾಖೆ ನೌಕರ. ಜನರ ಸೇವೆಗೆ ಸಾದ ಸಿದ್ದವಾಗಿರಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ತಹಶೀಲ್ದಾರ್ ಜಿ.ಹೆಚ್.ಸತ್ಯನಾರಾಯಣ, ರೈತರು ಹಾಗೂ ಸಾರ್ವಜನಿಕರ ಸಮಸ್ಯೆಗಳನ್ನು ಸ್ಥಳದಲ್ಲೇ ಆಲಿಸಿ, ಬಗೆಹರಿಸುವ ಸಾಮರ್ಥ್ಯ ಕಂದಾಯ ಇಲಾಖೆಯಿದೆ. ತಾಲೂಕು ವ್ಯಾಪ್ತಿಯಲ್ಲಿ ಆಂದೋಲನ ಮಾದರಿಯಲ್ಲಿ ಪಿಂಚಣಿ, ಪೌತಿ ಖಾತೆಗಳ ಕಾರ್ಯ ನಿರ್ವಹಿಸಲಾಗುತ್ತಿದೆ. ಪ್ರಕೃತಿ ವಿಕೋಪ, ತುರ್ತು ಸಂದರ್ಭಗಳಲ್ಲಿ ತಕ್ಷಣ ಸ್ಪಂದಿಸಿ ಕಾರ್ಯ ನಿರ್ವಹಿಸುತ್ತಿದ್ದೇವೆ. ಇದಕ್ಕೆ ಜಿಲ್ಲಾಧಿಕಾರಿ, ಅಪರ ಜಿಲ್ಲಾಧಿಕಾರಿ, ಉವಿಭಾಗಧಿಕಾರಿಗಳ ಮಾರ್ಗದರ್ಶನ ಸಹಕಾರಿಯಾಗಿದೆ ಎಂದರು.

*ಬಡ ಮಕ್ಕಳಿಗೆ ಸಹಾಯಧನ ವಿತರಣೆ*

ಕಾರ್ಯಕ್ರಮದಲ್ಲಿ ಆಯ್ದ ಬಡ ವಿದ್ಯಾರ್ಥಿಗಳಲಾದ ಶಾಲಿನಿ ಕೆ.ವಿ, ಸಹನ.ಜೆ.ಡಿ, ಕುಸುಮಾ, ಎನ್.ನಯನ, ಕವನ, ವೆಂಕಟೇಶ್ವರ, ಪ್ರವೀಣ್ ಜಿ, ಮಂಜುನಾಥ. ಹೆಚ್, ಅಜಯ್ ಕೆ.ಹೆಚ್, ಮನು.ಬಿ.ಎನ್. ಮೋಹನ್.ಎಂ. ಸಯದ್ ಸಫಿಯನ್, ಅವರಿಗೆ ವಿದ್ಯಾಭ್ಯಾಸದ ಅನುಕೂಲಕ್ಕಾಗಿ ಪ್ರೋತ್ಸಾಹ ಧನವನ್ನು ವಿತರಿಸಲಾಯಿತು.

*ನಿವೃತ್ತ ಸಿಬ್ಬಂದಿಗೆ ಸನ್ಮಾನ*

ಕಾರ್ಯಕ್ರಮದಲ್ಲಿ ವಯೋ ನಿವೃತ್ತಿ ಹೊಂದಿದ ತಹಶೀಲ್ದಾರ್ ಕಛೇರಿ ದಪೇದಾರ್ ಶಿವಮ್ಮ ಹಾಗೂ ಉಪವಿಭಾಗಾಧಿಕಾರಿ ಕಚೇರಿ ವಾಹನ ಚಾಲಕ ಆರ್.ರಮೇಶ್ ಅವರಿಗೆ ಆತ್ಮೀಯವಾಗಿ ಸನ್ಮಾನಿಸಲಾಯಿತು.

ಕಂದಾಯ ದಿನಾಚರಣೆ ಅಂಗವಾಗಿ ಆಯೋಜಿಸಲಾದ ಕ್ರೀಡಾ ಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವಿಜೇಯರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದ ಆರಂಭಕ್ಕೂ ಮುನ್ನ
ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಕಾರ್ಯಕ್ರಮ, ಗ್ರಾಮ ವಾಸ್ತವ್ಯ ಹಾಗೂ ಕಂದಾಯ ಇಲಾಖೆ ಇತರೆ ಕಾರ್ಯಕ್ರಮಗಳ ವಿಡಿಯೋ ತುಣುಕುಗಳನ್ನು ಪ್ರದರ್ಶಿಸಲಾಯಿತು. ಇದೇ ಸಂದರ್ಭದಲ್ಲಿ ಚಿತ್ರದುರ್ಗ ಜಿಲ್ಲಾ ಕಂದಾಯ ಇಲಾಖೆ ವತಿಯಿಂದ ಅಕಾಲಿಕವಾಗಿ ಮರಣ ಹೊಂದಿದ ಖ್ಯಾತ ನಟ ಪುನಿತ್ ರಾಜಕುಮಾರ್ ಗೌರವರ್ಥ ವಿಡಿಯೋ ತುಣುಕು ಪ್ರದರ್ಶಿಸಲಾಯಿತು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಆರ್.ರವಿಶಂಕರ್ ರೆಡ್ಡಿ, ಕ್ಷೇತ್ರಶಿಕ್ಷಣಾಧಿಕಾರಿ ಎಂ.ಎಸ್.ಬಸವರಾಜಯ್ಯ, ಚಿತ್ರದುರ್ಗ ತಾಲೂಕು ಗ್ರೇಡ್ 1 ತಹಶೀಲ್ದಾರ ಫಾತೀಮ.ಬಿ, ಕಂದಾಯ ಇಲಾಖೆ ವಿವಿಧ ನೌಕರರ ಸಂಘಗಳ ಸದಸ್ಯರಾದ ಪಾಂಡುರಂಗ, ಮಾಲತೇಶ್, ಬಿ.ಬಿನ್.ನಾಗರಾಜ್, ಶರಣ ಬಸವೇಶ್ವರ, ಸಂಪತ ಕುಮಾರ್ ಸೇರಿದಂತೆ ಜಿಲ್ಲೆಯ ಗ್ರಾಮ ಲೆಕ್ಕಾಧಿಕಾರಿಗಳು, ಕಂದಾಯ ನಿರೀಕ್ಷಕರು, ಉಪ ತಹಶಿಲ್ದಾರರು, ತಹಶಿಲ್ದಾರಗಳು ಹಾಗೂ ಕಂದಾಯ ಇಲಾಖೆ ನೌಕರರ ಕುಟುಂಬಸ್ಥರು ಉಪಸ್ಥಿತರಿದ್ದರು.

ಹಿರೇಗುಂಟನೂರು ರಾಜಸ್ವ ನಿರೀಕ್ಷಕರಾದ ಸಿದ್ದೇಶ್.ಜಿ ಸ್ವಾಗತಿಸಿದರು. ಶಿರಸ್ತೇದಾರ್ ವಿನುತಾ ಪ್ರಾಸ್ತಾವಿಕವಾಗಿ ಮಾತನಾಡಿದರು

Facebook
Twitter
Telegram
WhatsApp
suddionenews

suddionenews

Leave a Comment

Top Stories

ಸ್ಥಳೀಯರಿಗೆ ಕೆಲಸ ಕೊಡುವಂತೆ ಒತ್ತಾಯಿಸಿ ಜುಲೈ 24 ರಂದು ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,   ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಜುಲೈ. 21 : ಸಿರಿಗೆರೆಯ ತಣಿಗೆಹಳ್ಳಿ ಸಮೀಪ ಡಿ.ಮದಕರಿಪುರದ ಹತ್ತಿರವಿರುವ ಗಣಿಬಾಧಿತ ಪ್ರದೇಶಗಳ ಜನ ಶನಿವಾರದಿಂದ

ವಿದ್ಯಾರ್ಥಿಗಳು ದೊಡ್ಡ ಗುರಿಯೊಂದಿಗೆ ದೊಡ್ಡ ಕನಸು ಕಾಣಬೇಕು : ಐ.ಎ.ಎಸ್. ಸಾಧಕಿ ಕುಮಾರಿ ಸೌಭಾಗ್ಯ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,   ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಜುಲೈ. 21 :  ಪುಸ್ತಕ ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಓದಿನಿಂದ ಮಾತ್ರ ಜ್ಞಾನ ವೃದ್ದಿಯಾಗಲಿದೆ ಎಂದು

ನೀಲಮ್ಮ ನಿಧನ

  ಸುದ್ದಿಒನ್, ಚಿತ್ರದುರ್ಗ, ಜುಲೈ. 21 : ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಕಲ್ಲೇಶಯ್ಯನವರ ತಾಯಿ ಶ್ರೀಮತಿ ನೀಲಮ್ಮ(89) ಶನಿವಾರ ಮಧ್ಯರಾತ್ರಿ ಗುತ್ತಿನಾಡು ಗ್ರಾಮದಲ್ಲಿರುವ ನಿವಾಸದಲ್ಲಿ ನಿಧನರಾಗಿದ್ದಾರೆ. ಮೃತರು ಇಬ್ಬರು ಪುತ್ರರು, ಓರ್ವ ಪುತ್ರಿ

error: Content is protected !!