ಸೇಡು, ದ್ವೇಷ, ಕೇಸರೆರಚಾಟ ಯಾರಿಗೂ ಶೋಭೆ ತರುವುದಿಲ್ಲ: ಉಗ್ರಪ್ಪ

suddionenews
2 Min Read

ಬೆಂಗಳೂರು: ರಾಜ್ಯ ರಾಜಕಾರಣ ಕಲುಷಿತಗೊಳ್ಳುತ್ತಿದೆ. ರಾಜಕಾರಣದಲ್ಲಿ ಸಿದ್ಧಾಂತ, ಕಾರ್ಯಕ್ರಮ ಆಧಾರದಲ್ಲಿ ರಾಜಕಾರಣ ಮಾಡಬೇಕು. ಸೇಡು, ದ್ವೇಷ, ಕೇಸರೆರಚಾಟ ಯಾರಿಗೂ ಶೋಭೆ ತರುವುದಿಲ್ಲ ಎಂದು ಮಾಜಿ ಸಂಸದ ಉಗ್ರಪ್ಪ ಹೇಳಿದರು.

ಈ ವೇಳೆ ಕೆಪಿಸಿಸಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಕುಮಾರಸ್ವಾಮಿ ಅವರ ಇತ್ತೀಚಿನ ಕಾರ್ಯವೈಖರಿ ನೋಡಿದರೆ ಅವರು ಹತಾಶರಾಗಿರುವುದು ಕಾಣಬಹುದು. ವೈಯಕ್ತಿಕವಾಗಿ ಅವರ ಬಗ್ಗೆ ಇರುವ ಗೌರವ ಬೇರೆ. ಆದರೆ ಅವರು ರಾಜಕಾರಣದಲ್ಲಿ ಹೋಗುತ್ತಿತ್ತುವ ಹಾದಿ ನೋಡಿದರೆ ಅವರು ಮನಬಂದಂತೆ ಮಾತನಾಡುತ್ತಿದ್ದಾರೆ ಎಂದರು.

ಅವರು ತಮ್ಮ ಕೆಲಸಗಳು, ಸಿದ್ಧಾಂತಗಳ ಹಿನ್ನೆಲೆಯಲ್ಲಿ ಜನತೆ ವಿಶ್ವಾಸ ಗಳಿಸುವ ಪ್ರಯತ್ನ ಸನಡೆಸುತ್ತಿಲ್ಲ. ಬದಲಿಗೆ ಬೇರೆಯವರ ಮೇಲೆ ಆರೋಪ ಮಾಡುತ್ತಿದ್ದಾರೆ.ವಿರೋಧ ಪಕ್ಷದ ನಾಯಕ ಸ್ಥಾನದಲ್ಲಿ ದೇವೇಗೌಡ, ದೇವರಾಜ ಅರಸು, ಬೊಮ್ಮಾಯಿ ಅವರಿದ್ದರು. ಸಿದ್ಧರಾಮಯ್ಯ ಅವರು ಈಗ ಇದ್ದಾರೆ. ಸಿದ್ದರಾಮಯ್ಯ ಅವರ ವಿರುದ್ಧ ಮಾತನಾಡುವ ಸಂದರ್ಭದಲ್ಲಿ ವಿರೋಧ ಪಕ್ಷದ ಸ್ಥಾನದ ಬಗ್ಗೆ ಬಳಸಿರುವ ಪದ ಪ್ರಯೋಗ, ಪ್ರಜಾತಂತ್ರ ವ್ಯವಸ್ಥೆಗೆ, ಸದನಕ್ಕೆ ತೋರುವ ಅಗೌರವ. ವಿರೋಧ ಪಕ್ಷದ ಸ್ಥಾನಕ್ಕಾಗಿ ನನ್ನ ಸರ್ಕಾರ ತೆಗೆದರು. ಇದಕ್ಕೆ ಕಾಂಗ್ರೆಸ್ ಕಾರಣ ಎಂದಿದ್ದಾರೆ.

ಕುಮಾರಸ್ವಾಮಿ ಅವರೇ ನಿಮ್ಮ ಕುಟುಂಬಕ್ಕೆ ಒಂದು ಹಿನ್ನೆಲೆ ಇದೆ. ಹೇಗೆ ಮಾತನಾಡಬೇಕು ಎಂಬುದನ್ನು ನಿಮ್ಮ ತಂದೆ ಅವರಿಂದ ಕಲಿಯಿರಿ. ಆ ಸ್ಥಾನ ಯಾವುದಕ್ಕೋ ಸಮಾನ ಅದಕ್ಕೆ ಆಸೆ ಪಟ್ಟರು ಎಂದರೆ ವಿಧಾನ ಮಂಡಲಕ್ಕೆ ತೋರುವ ಅಗೌರವ.

ಸ್ಪಿಕರ್ ಅವರಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬದ್ಧತೆ ಇದ್ದರೆ, ವಿಧಾನ ಮಂಡಲಕ್ಕೆ ಆಗಿರುವ ಈ ಅಗೌರವವನ್ನು ಸುಮೋಟೋ ಮೂಲಕ ಪ್ರಿವಿಲೇಜ್ ಮೋಷನ್ ಜಾರಿಗೊಳಿಸುವ ನಂಬಿಕೆ ಇದೆ.
ಇನ್ನು ಸರ್ಕಾರ ಬೀಳಲು ಕಾಂಗ್ರೆಸ್, ಸಿದ್ದರಾಮಯ್ಯ ಅವರು ಕಾರಣ ಎಂದು ಹೇಳುತ್ತಾರೆ. ವಿಧಾನಸೌಧದಲ್ಲಿ ಕಡತ ನೋಡಿದರೆ ತಿಳಿಯುತ್ತದೆ. ಸರ್ಕಾರ ಅಲುಗಾಡುವಾಗ ನೀವು ವಿದೇಶಕ್ಕೆ ಹೋಗಿದ್ದೀರಿ. ಸರ್ಕಾರ ಪತನವಾಗುವಾಗ ನಾನು ನಿಭಾಯಿಸುತ್ತೇನೆ ಎಂದು ಹೇಳಿದ್ದೀರಿ. ನಿಮ್ಮ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡಿದಾಗ ವಿಧಾನಸಭೆಯಲ್ಲಿ ನೀವು ಮಾಡಿದ ಭಾಷಣದಲ್ಲಿ ಎಲ್ಲವೂ ಕಡತದಲ್ಲಿದೆ.

ಅಂದು ನೀವು ರಾಜೀನಾಮೆ ನೀಡಿ ಉತ್ತರ ನೀಡುವಾಗ ನನ್ನ ಸರ್ಕಾರ ತೆಗೆಯಲು ಕಾಂಗ್ರೆಸ್ ಕುತಂತ್ರ ಕಾರಣ ಎಂದು ಹೇಳಬಹುದಾಗಿತ್ತು, ಹೇಳಲಿಲ್ಲ ಯಾಕೆ? ಇಡೀ ಆಪರೇಷನ್ ಕಮಲಕ್ಕೆ ಬಿಜೆಪಿ, ಅದರ ರಾಷ್ಟ್ರೀಯ ನಾಯಕತ್ವ ಕಾರಣ ಎಂದು ಹೇಳಿದ್ದೀರಿ.

ಆದರೆ ಈಗ ಕಾಂಗ್ರೆಸ್ ಮೇಲೆ ಆರೋಪಿಸಿ ತೆಗಳುವುದು ಎಷ್ಟು ಸಮಂಜಸ. ಸಿದ್ದರಾಮಯ್ಯ, ಯಡಿಯೂರಪ್ಪ ಅವರು ಭೇಟಿಯಾಗಿ ಬಿಜೆಪಿಗೆ ತೊಂದರೆ ಆಗಬಹುದು ಎಂದು ಹೇಳಿ ಈ ನೀರಾವರಿ ಗುತ್ತಿಗೆದಾರರ ಮೇಲೆ ಐಟಿ ದಾಳಿ ಆಗಿದೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *