ದೊಡ್ಡಗೌಡರ ಮತ್ತೊಂದು ಕುಡಿ ರಾಜಕೀಯ ಪ್ರವೇಶಕ್ಕೆ ಸಿದ್ಧತೆ..!?

 

 

ಬೆಂಗಳೂರು: ಪರಿಷತ್ ಚುನಾವಣೆಗೆ ದಿನಾಂಕ ಫಿಕ್ಸ್ ಆಗಿದ್ದೆ ತಡ ಎಲ್ಲಾ ರಾಜಕೀಯ ಪಕ್ಷಗಳು ಗರಿಗೆದರೋಕೆ ಶುರು ಮಾಡಿವೆ. ಅಭ್ಯರ್ಥಿಗಳ ಆಯ್ಕೆ, ಟಿಕೆಟ್ ಹಂಚಿಕೆ, ಗೆಲುವಿನ ತಂತ್ರ ಪ್ರತಿತಂತ್ರ ಹೀಗೆ ಎಲ್ಲದನ್ನು ಲೆಕ್ಕಚಾರ ಹಾಕುತ್ತಿದ್ದಾರೆ. ಈ ಮಧ್ಯೆ ದೊಡ್ಡ ಗೌಡರ ಕುಟುಂಬದಲ್ಲಿ ಮತ್ತೊಂದು ಕುಡಿ ರಾಜಕೀಯಕ್ಕೆ ಎಂಟ್ರಿ ಪಡೆಯುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ರೇವಣ್ಣ ಅವರ ಜೇಷ್ಠ ಪುತ್ರ ಸೂರಜ್ ಅವರನ್ನು ಕಣಕ್ಕಿಳಿಸಲು ಫ್ಲ್ಯಾನ್ ನಡೆದಿದೆ ಎನ್ನಲಾಗಿದೆ. ಈ ಸಂಬಂಧ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆಯಂತೆ. ಜಿಲ್ಲೆಯ ಶಾಸಕರ ಸಭೆ ಕರೆದಿರುವ ದೇವೇಗೌಡರು, ಹಾಸನದಲ್ಲಿ ಜೆಡಿಎಸ್ ಸ್ಟ್ರಾಂಗ್ ಅಭ್ಯರ್ಥಿಯ ಕೊರತೆ ಇರುವ ಕಾರಣ ಕುಟುಂಬದವರನ್ನೇ ಕರೆತರಲು ನಿರ್ಧರಿಸಿರುವ ಬಗ್ಗೆ ಚರ್ಚಿಸಿದ್ದಾರಂತೆ.‌

ಈ ಬಾರಿಯ ಸ್ಪರ್ಧೆಯಲ್ಲಿ ಕುಟುಂಬಸ್ಥರೇ ಇಬ್ಬರಿದ್ದಾರೆ. ಕುಟುಂಬ ರಾಜಕಾರಣದ ಪಟ್ಟಿ ಮತ್ತೆ ಕಟ್ಟಿಕೊಳ್ಳುವ ಆತಂಕ ಕೂಡ ದೊಡ್ಡಗೌಡರಿಗೆ ಕಾಡ್ತಾ ಇದೆ. ಅದರಿಂದಲೂ ತಪ್ಪಿಸಿಕೊಳ್ಳಬೇಕು, ಪಕ್ಷವೂ ಗೆಲ್ಲಬೇಕು. ಹೀಗಾಗಿ ಈ ಬಾರಿ ಸೂರಜ್ ಅಥವಾ ಭವಾನಿ ರೇವಣ್ಣ ಅವರಿಗೆ ಟಿಕೆಟ್ ಕೊಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

suddionenews

Recent Posts

ಮೈಕ್ರೋ ಫೈನಾನ್ಸ್ ಸುಗ್ರಿವಾಜ್ಞೆಗೆ ಅಂಕಿತ ಹಾಕದ ರಾಜ್ಯಪಾಲರು : ಸರ್ಕಾರಕ್ಕೆ ಹಿನ್ನಡೆ

ಬೆಂಗಳೂರು: ರಾಜ್ಯಾದ್ಯಂತ ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳ ಹೆಚ್ಚಾಗಿದೆ. ಇದರಿಂದ ಅದೆಷ್ಟೋ ಜನ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಸಾಲ ಕೊಟ್ಟ…

1 hour ago

ಚಿತ್ರದುರ್ಗ APMC | ಶೇಂಗಾ, ಕಡಲೆ ಸೇರಿದಂತೆ ಇತರೆ ಉತ್ಪನ್ನಗಳ ಫೆಬ್ರವರಿ 07 ರ ಮಾರುಕಟ್ಟೆ ಧಾರಣೆ ವಿವಿರ ಇಲ್ಲಿದೆ…!

  ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 07 : ಇಂದಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಶೇಂಗಾ, ಕಡಲೆ, ಮೆಕ್ಕೆಜೋಳ ಸೇರಿದಂತೆ ಇತರೆ…

2 hours ago

ಚಿತ್ರದುರ್ಗದ ಅಳಿಯ ಡಾಲಿ ಮೇಲೆ ದರ್ಶನ್ ಫ್ಯಾನ್ಸ್ ಗರಂ : ಫುಲ್ ಟ್ರೋಲ್..!

ಬೆಂಗಳೂರು: ನಟ ಡಾಲಿ ಧನಂಜಯ್ ಮದುವೆ ಸಂಭ್ರಮದಲ್ಲಿದ್ದಾರೆ. ಚಿತ್ರದುರ್ಗದ ಅಳಿಯ ಬೇರೆ ಆಗ್ತಾ ಇದ್ದಾರೆ. ಧನ್ಯತಾ ಮೂಲತಃ ಚಿತ್ರದುರ್ಗದವರು. ಆದರೆ…

4 hours ago

ಮೂಡಾ ಅಪ್ಡೇಟ್: ಸಿಎಂ ಸಿದ್ದರಾಮಯ್ಯರಿಗೆ ರಿಲೀಫ್ ನೀಡಿದ ಹೈಕೋರ್ಟ್

ಬೆಂಗಳೂರು: ಇಂದು ಹೈಕೋರ್ಟ್ ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದು ಸಿಎಂ ಸಿದ್ದರಾಮಯ್ಯ ಅವರಿಗೆ ಬಿಗ್ ರಿಲೀಫ್ ನೀಡಿದೆ. ಈ…

5 hours ago

ಈ ರಾಶಿಯವರಿಗೆ ಒಳ್ಳೆಯ ಉದ್ಯೋಗ ಅವಕಾಶಗಳು ಒದಗಿ ಬರಲಿವೆ

ಈ ರಾಶಿಯವರಿಗೆ ಒಳ್ಳೆಯ ಉದ್ಯೋಗ ಅವಕಾಶಗಳು ಒದಗಿ ಬರಲಿವೆ, ಈ ರಾಶಿಯವರಿಗೆ ಉತ್ತಮ ಸಂಗಾತಿ ಸಿಗುವರು, ಶುಕ್ರವಾರದ ರಾಶಿ ಭವಿಷ್ಯ…

11 hours ago

ಫೆಬ್ರವರಿ 10ಕ್ಕೆ ಕರ್ನಾಟಕದಲ್ಲಿ ಕುಂಭಮೇಳ : ಹೇಗಿದೆ ತಯಾರಿ..?

  144 ವರ್ಷಗಳಿಗೊಮ್ಮೆ ಬರುವ ಮಹಾಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡಿದರೆ ಕರ್ಮ ಕಳೆಯುತ್ತದೆ ಎಂದು ನಂಬಲಾಗಿದೆ. ಹೀಗಾಗಿ ಕೋಟ್ಯಾಂತರ ಮಂದಿ…

20 hours ago