ತಾಯಿ ಭಾಷೆಯನ್ನು ಗೌರವಿಸಿ : ಡಾ. ದೊಡ್ಡಮಲ್ಲಯ್ಯ

ಸುದ್ದಿಒನ್, ಹಿರಿಯೂರು, ಮಾರ್ಚ್. 24 : ತಾಯಿ ಭಾಷೆಯಾಗಿರುವ ಕನ್ನಡವನ್ನು ಉಳಿಸಿ ಬೆಳೆಸಲು ಎಲ್ಲರೂ ಕಂಕಣಬದ್ಧರಾಗಿ ದುಡಿಯಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷರಾದ ಡಾ. ದೊಡ್ಡಮಲ್ಲಯ್ಯ ಹೇಳಿದರು.

ನಗರದ ತನ್ಯಾಸಿ ಗೌಂಡರ್ ಕಲ್ಯಾಣ ಮಂಟಪದಲ್ಲಿ ಗಡಾರಿ ಕೃಷ್ಣಪ್ಪ ಮಗಳ ಮದುವೆ ಅಂಗವಾಗಿ ಆಯೋಜಿಸಿದ್ದ ಕವಿಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದರು.

ಸಾಹಿತ್ಯದ ಮೂಲ ಬೇರು ಕಾವ್ಯ. ಕಾವ್ಯಗಳು ಪ್ರಸ್ತುತ ಸಾಮಾಜಿಕ ಆರ್ಥಿಕ ಧಾರ್ಮಿಕ ಹಾಗು ರಾಜಕೀಯ ವಿದ್ಯಮಾನಗಳಿಗೆ ಸ್ಪಂದನೆ ನೀಡಬೇಕು. ಜನರ ನಿರೀಕ್ಷೆಗೆ ತಕ್ಕಂತೆ ಸಾಮಾಜಿಕ ಸಮಸ್ಯೆಗಳಿಗೆ ಇತಿಶ್ರೀ ಹಾಡುವ ಕಾವ್ಯ, ನಾಟಕ, ಕಾದಂಬರಿ, ಕಥೆಗಳು ರಚನೆ ಆಗಬೇಕು ಎಂದು ಹೇಳಿದರು.

ಪ್ರಾಚಾರ್ಯ ಡಾ. ಡಿ. ಧರಣೇಂದ್ರಯ್ಯ ಮಾತನಾಡಿ ಸಮಾಜದಲ್ಲಿ ಸಮಾಜ ಸುಧಾರಕ ತತ್ವಜ್ಞಾನಿ, ದಾರ್ಶನಿಕರಂತೆ, ಕವಿಯ ಹೆಸರು, ಸೂರ್ಯ, ಚಂದ್ರ ಇರುವವರೆಗೂ ಇರುತ್ತದೆ. ಅನುಭವ, ಪರಿಪಕ್ವತೆಯಿಂದ ಹುಟ್ಟಿದ ಕಾವ್ಯ, ದೇಶ ಹಾಗೂ ರಾಜ್ಯದಲ್ಲಿ ಕ್ರಾಂತಿಕಾರಕ ಬದಲಾವಣೆ ತರುತ್ತದೆ. ಸಮಾಜವನ್ನು ಉನ್ನತ ಮಟ್ಟಕ್ಕೆ ತರುವ ಜವಾಬ್ದಾರಿ ಕವಿಗೆ ಮಾತ್ರ ಇದ್ದು, ಇದನ್ನು ಸಕಾರಗೊಳಿಸಲು ಪ್ರಯತ್ನ ಮಾಡಬೇಕು ಎಂದು ಹೇಳಿದರು.

ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಪ್ರೊ. ಎಂ.ಜಿ.ರಂಗಸ್ವಾಮಿ ಮಾತನಾಡಿ, ಈ ಸಮಕಾಲೀನ ದಿನಗಳಲ್ಲಿ ಕವಿಗಳಿಗೆ ಬದ್ಧತೆ, ಪ್ರಾಮಾಣೀಕತೆ ಹಾಗು ಸಾಮಾಜಿಕ ಹೊಣೆಗಾರಿಕೆ ಅಗತ್ಯವಾಗಿದೆ. ಕಥೆ, ಕವನ, ಕಾದಂಬರಿ, ನಾಟಕ, ನೋವುಗಳಿಗೆ ಸಂಕಟಗಳಿಗೆ ಸ್ಪಂದನೆ ನೀಡಬೇಕು. ಜಾಗತಿಕ ಬದಲಾವಣೆಗೆ ತಕ್ಕಂತೆ ಮೂಢನಂಬಿಕೆ, ಕಂದಾಚಾರ, ಜಾತಿ, ಧರ್ಮಗಳಿಗೆ ಅಂಟಿ ಕೊಳ್ಳದೆ ಸಾಮಾಜಿಕ ಬದಲಾವಣೆಗೆ ನಾಂದಿ ಹಾಡುವ ಕಾವ್ಯಗಳನ್ನು ರಚನೆ ಮಾಡಬೇಕು ಎಂದು ಹೇಳಿದರು.

ಕವಿಗೋಷ್ಠಿಯಲ್ಲಿ ಬಬ್ಬೂರು ತಿಪ್ಪೀರನಾಯಕ, ನಿರ್ಮಲ ಮರಡಿಹಳ್ಳಿ, ಬಿ.ಅರ್. ವೇದಮೂರ್ತಿ, ರಾಜು ಸೂಲೇನಹಳ್ಳಿ, ಚಿತ್ರಲಿಂಗಪ್ಪ ಪಿಲ್ಲಹಳ್ಳಿ, ಟಿ.ಶಿವರುದ್ರಪ್ಪ, ಇಂಗಳದಾಳ್ ತಿಮ್ಮಯ್ಯ, ಕೆ.ಹೆಚ್.ಜಯಪ್ರಕಾಶ್, ಬಿ.ಮುರುಳೀಧರ, ಎಂ.ಟಿ.ರವಿರಾಜು, ಭಾಗ್ಯ, ಕಲ್ಯಾಣಕುಮಾರ್, ನರಸಿಂಹಮೂರ್ತಿ, ಹಾಗೂ ಇತರರು ಕವನ ವಾಚನ ಮಾಡಿದರು.

ಕಾರ್ಯಕ್ರಮದಲ್ಲಿ ಕಾದಂಬರಿಕಾರ ಡಿ.ಸಿ.ಪಾಣಿ, ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಎಸ್.ಜಿ.ರಂಗಸ್ವಾಮಿ ಸಕ್ಕರ, ತಾಲ್ಲೂಕು ಕಸಾಪ ನಿಕಟಪೂರ್ವ ಅಧ್ಯಕ್ಷ ಹರ್ತಿಕೋಟೆ ಮಹಾಸ್ವಾಮಿ, ಗಡಾರಿ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಗಡಾರಿ ಕೆ.ಕೃಷ್ಣಪ್ಪ, ನಾಣ್ಯ ಸಂಗ್ರಹಕಾರ ಹನುಮಂತರಾಯ, ನಿರ್ಮಲ, ರಂಗಮ್ಮ ಇತರರಿದ್ದರು.

suddionenews

Recent Posts

ಯುರಿನ್ ಇನ್ಫೆಕ್ಷನ್ ಆಗಿದ್ಯಾ..? ಈ ಮನೆ ಮದ್ದನ್ನ ಟ್ರೈ ಮಾಡಿ

ಸಾಮಾನ್ಯವಾಗಿ ಸಾಕಷ್ಟು ಜನರಿಗೆ ಯುರಿನ್ ಇನ್ಫೆಕ್ಷನ್ ಸಮಸ್ಯೆ ಕಾಡುತ್ತದೆ. ಪಬ್ಲಿಕ್ ಟಾಯ್ಲೆಟ್ ಬಳಸಿದಾಗ ಅಥವಾ ಸ್ವಚ್ಚತೆ ಇಲ್ಲದ ವಾಶ್ ರೂಮ್…

5 hours ago

ಈ ರಾಶಿಯ ಇಂಜಿನಿಯರ್ ಪದವಿ ಪಡೆದವರಿಗೆ ಉದ್ಯೋಗ ಪ್ರಾಪ್ತಿ, ವಿದೇಶ ಯೋಗ

ಈ ರಾಶಿಯ ಇಂಜಿನಿಯರ್ ಪದವಿ ಪಡೆದವರಿಗೆ ಉದ್ಯೋಗ ಪ್ರಾಪ್ತಿ, ವಿದೇಶ ಯೋಗ, ಗುರುವಾರದ ರಾಶಿ ಭವಿಷ್ಯ 27 ಮಾರ್ಚ್ 2025…

7 hours ago

ನಾಳೆಯಿಂದ ಎರಡು ದಿನಗಳ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹೊಳಲ್ಕೆರೆ ಸಜ್ಜು

ಸುದ್ದಿಒನ್, ಹೊಳಲ್ಕೆರೆ, ಮಾರ್ಚ್. 26 : ಗಣಪತಿಯ ಧಾರ್ಮಿಕ ಸ್ಥಳವಾದ ಹೊಳಲ್ಕೆರೆಯಲ್ಲಿ ನಾಳೆಯಿಂದ ( ಗುರುವಾರ) ಎರಡು ದಿನಗಳ ಕಾಲ…

14 hours ago

ನಾಳೆ ಮಾನವ ಹಕ್ಕು ಆಯೋಗದ ಅಧ್ಯಕ್ಷರ ಭೇಟಿ : ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಹಾಗೂ ವಿಚಾರಣೆ

    ಚಿತ್ರದುರ್ಗ. ಮಾರ್ಚ್26 :  ಮಾನವ ಹಕ್ಕುಗಳ ಸಂರಕ್ಷಣೆ ಹಾಗೂ ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣಗಳಲ್ಲಿ ನೊಂದವರಿಗೆ ಸೂಕ್ತ…

15 hours ago

ನಾಗರಾಜ್ ಅವರಿಗೆ ಸಮಾಜ ಸೇವಾ ರತ್ನ ಮತ್ತು ಬಡವರ ಆಶಾಕಿರಣ ಪ್ರಶಸ್ತಿ ಪ್ರದಾನ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮಾರ್ಚ್.…

15 hours ago

6 ವರ್ಷಗಳ ಕಾಲ ಬಿಜೆಪಿಯಿಂದ ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆ..!

  ಸುದ್ದಿಒನ್, ಬೆಂಗಳೂರು, ಮಾರ್ಚ್. 26 :  ಬಿಜೆಪಿಯ ಶಿಸ್ತು ಸಮಿತಿ ಸಾಕಷ್ಟು ಬಾರೀ ಎಚ್ಚರಿಕೆಯನ್ನು ನೀಡಿದರು ಸಹ ಎಚ್ಚೆತ್ತುಕೊಳ್ಳದೆ…

17 hours ago