in ,

ಶಿಕ್ಷಕರುಗಳನ್ನು ಗೌರವಿಸಿದರೆ ಮಕ್ಕಳ ಜ್ಞಾನಜಾರ್ಜನೆ ವೃದ್ದಿಗೆ ನೆರವು : ಬಿಇಓ ಈಶ್ವರಪ್ಪ

suddione whatsapp group join

ಚಿತ್ರದುರ್ಗ, (ಸೆ.11): ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳವರು ಸರ್ಕಾರಿ ಶಾಲೆಯ ಶಿಕ್ಷಕರುಗಳನ್ನು ಗೌರವಿಸಿದರೆ ಮಕ್ಕಳ ಜ್ಞಾನಜಾರ್ಜನೆ ವೃದ್ದಿಗೆ ನೆರವು ನೀಡಿದಂತಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಈಶ್ವರಪ್ಪ ಹೇಳಿದರು.

ಇಲ್ಲಿನ ಆಜಾದ್‍ನಗರದಲ್ಲಿರುವ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿನ ಅತ್ಯುತ್ತಮ ಶಿಕ್ಷಕಿಯರಿಗೆ ಜಿಲ್ಲಾ ಜಾನಪದ ಜಾಗೃತಿ ಪರಿಷತ್ ವತಿಯಿಂದ ಶನಿವಾರ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಕೋವಿಡ್‍ನಿಂದಾಗಿ ಕಳೆದ ಹದಿನೆಂಟು ತಿಂಗಳಿನಿಂದ ಶಾಲೆಗಳು ಆರಂಭವಾಗಿರಲಿಲ್ಲ. ಇಂತಹ ಸಂಕಷ್ಟದ ಸಮಯದಲ್ಲಿ ಈ ಶಾಲೆಯಲ್ಲಿನ ಶಿಕ್ಷಕಿಯರು ಸಮಯವನ್ನು ವ್ಯರ್ಥ ಮಾಡದೆ ಮಕ್ಕಳ ಕಲಿಕೆಗೆ ಪೂರಕವಾಗಿರುವ ವಾತಾವರಣವನ್ನು ಶಾಲೆಯಲ್ಲಿ ನಿರ್ಮಿಸಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ. ವಿಜ್ಞಾನಕ್ಕೆ ಸಂಬಂಧಿಸಿದ ಚಿತ್ರಗಳು.

ಸಾಕು ಪ್ರಾಣಿ, ಪಕ್ಷಿ, ಪರಿಸರ, ಕನ್ನಡ ಹಾಗೂ ಇಂಗ್ಲಿಷ್ ಅಕ್ಷರಗಳುಳ್ಳು ಚಿತ್ರಗಳನ್ನು ಸಿದ್ದಪಡಿಸಿ ಇರುವ ಚಿಕ್ಕಜಾಗದಲ್ಲಿಯೇ ಶಾಲೆಯನ್ನು ಸ್ವಚ್ಚವಾಗಿ ಅಚ್ಚುಕಟ್ಟಿನಿಂದಿರಿಸಿಕೊಂಡಿರುವುದು ಇಲಾಖೆಗೆ ಕೀರ್ತಿ ತಂದಿದೆ. ಮುಂದಿನ ದಿನಗಳಲ್ಲಿ ಈ ಶಾಲೆಯನ್ನು ಉತ್ತಮ ಶಾಲೆ ಪ್ರಶಸ್ತಿಗೆ ಶಿಫಾರಸ್ಸು ಮಾಡುವುದಾಗಿ ಭರವಸೆ ನೀಡಿದರು.

ಇಲಾಖೆಯ ಅಪೇಕ್ಷೆಯಿಲ್ಲದೆ ಶಿಕ್ಷಕಿಯರುಗಳೆಲ್ಲಾ ಸೇರಿಕೊಂಡು ಸ್ವಂತ ಖರ್ಚಿನಿಂದ ಮಕ್ಕಳಿಗೆ ಬ್ಯಾಗ್, ನೋಟ್‍ಬುಕ್, ಪೆನ್ನು ನೀಡಿದ್ದಾರೆ. ಕೋವಿಡ್ ಆನ್‍ಲೈನ್ ಕ್ಲಾಸ್ ನಂತರ ಉಳಿದ ಸಮಯವನ್ನು ಮಕ್ಕಳ ಶೈಕ್ಷಣಿಕ ಚಟುವಟಿಕೆಗೆ ಬಳಸಿರುವುದು ಮಕ್ಕಳ ಭವಿಷ್ಯದ ಬಗ್ಗೆ ಶಿಕ್ಷಕಿಯರಲ್ಲಿರುವ ಕಾಳಜಿಯನ್ನು ತೋರಿಸುತ್ತದೆ.

ಕಸದಲ್ಲಿಯೂ ರಸ ತೆಗೆಯುವ ಶಿಕ್ಷಕಿಯರುಗಳು ಈ ಶಾಲೆಯಲ್ಲಿದ್ದಾರೆ. ಜಿಲ್ಲಾ ಜಾನಪದ ಜಾಗೃತಿ ಪರಿಷತ್‍ನವರು ಇಂತಹ ಶಿಕ್ಷಕಿಯರುಗಳಿಗೆ ಆದರ್ಶ ಶಿಕ್ಷಕಿ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ನಿಜಕ್ಕೂ ಸ್ತುತ್ಯಾರ್ಹ ಎಂದು ಗುಣಗಾನ ಮಾಡಿದರು.

ಜಿಲ್ಲಾ ಜಾನಪದ ಜಾಗೃತಿ ಪರಿಷತ್ ರಾಜ್ಯಾಧ್ಯಕ್ಷ ಹೆಚ್.ಪ್ಯಾರೇಜಾನ್ ಮಾತನಾಡಿ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯನ್ನು ಖಾಸಗಿ ಶಾಲೆಯ ರೀತಿಯಲ್ಲಿ ನಿರ್ವಹಣೆ ಮಾಡುತ್ತಿರುವ ಇಲ್ಲಿನ ಶಿಕ್ಷಕಿಯರ ಶ್ರಮ ಅಪಾರವಾದುದು. ಇದರಿಂದ ಮಕ್ಕಳ ಕಲಿಕೆಗೆ ಪೂರಕ ವಾತಾವರಣ ರೂಪಿಸಿದಂತಾಗುತ್ತದೆ. ಇದಕ್ಕೆ ಪೋಷಕರು ಹಾಗೂ ಎಸ್.ಡಿ.ಎಂ.ಸಿ.ಯವರ ಸಹಕಾರವೂ ಅತಿ ಮುಖ್ಯ. ಈ ಶಾಲೆಯ ಶಿಕ್ಷಕಿಯರುಗಳನ್ನು ಗುರುತಿಸಿ ಅಭಿನಂದಿಸುತ್ತಿರುವುದು ಬೇರೆ ಶಿಕ್ಷಕರಿಗೆ ಪ್ರೋತ್ಸಾಹಿಸಿದಂತಾಗುತ್ತದೆ ಎಂದು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಉರ್ದು ಶಿಕ್ಷಣ ಸಂಯೋಜಕಿ ಸಮೀರ ಮಾತನಾಡಿ ಇಲಾಖೆಯಿಂದ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದ ಶಿಕ್ಷಕಿಯರುಗಳೆ ಎಲ್ಲರೂ ಹಣ ಹಾಕಿಕೊಂಡು ಸ್ವಂತ ಖರ್ಚಿನಿಂದ ಶಾಲೆಯನ್ನು ಸುಂದರವಾಗಿರಿಸಿಕೊಂಡು ಮಕ್ಕಳಿಗೆ ಮನ ಮುಟ್ಟುವ ರೀತಿಯಲ್ಲಿ ಕಲಿಕೆಗೆ ವಾತಾವರಣ ರೂಪಿಸಿರುವುದು ನಿಜಕ್ಕೂ ಸಂತೋಷದ ಸಂಗತಿ. ಇದೇ ರೀತಿ ಮುಂದುವರೆಯಲಿ ಎಂದು ಹಾರೈಸಿದರು.

ಜಿಲ್ಲಾ ಜಾನಪದ ಜಾಗೃತಿ ಪರಿಷತ್‍ನ ಕಲಾವಿದರುಗಳಾದ ಶಿವಕುಮಾರ್, ಸಂತೋಷ್, ಹರ್ಷದ, ನೂರಿ, ಶಫಿ, ಸೈಫುಲ್ಲಾ ವೇದಿಕೆಯಲ್ಲಿದ್ದರು. ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಫರ್ಹಾತ್ ಉನ್ನೀಸ, ಸಹ ಶಿಕ್ಷಕಿಯರುಗಳಾದ ಜಿ.ಸರೋಜಮ್ಮ, ತಬ್ರೇಜ್, ಫರ್ವಿನ್, ಸಾಹಿರಾಭಾನು ಇವರುಗಳನ್ನು ಅಭಿನಂದಿಸಲಾಯಿತು. ಶಿಕ್ಷಕಿಯರುಗಳ ಸ್ವಂತ ಖರ್ಚಿನಲ್ಲಿ ಮಕ್ಕಳಿಗೆ ಬ್ಯಾಗ್‍ಗಳನ್ನು ವಿತರಿಸಲಾಯಿತು.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಶಿವತಾಂಡವ ನೃತ್ಯ ರೂಪಿಯಲ್ಲಿ ಬಂದ ಏಕತಾ ಹಿಂದು ಮಹಾಗಣಪತಿ

ವಿಶ್ವಕರ್ಮ ಯುವಕ ಸಂಘದ ಅಧ್ಯಕ್ಷರಾಗಿ ಆರ್.ಡಿ.ಸಂಜಯ್ ನೇಮಕ