in ,

ಚಿತ್ರದುರ್ಗ ನಗರಸಭೆ ಉಪಾಧ್ಯಕ್ಷೆ ರಾಜೀನಾಮೆ : ಇಂದಿನ ಸಾಮಾನ್ಯ ಸಭೆಯಲ್ಲಿ ನಡೆದಿದ್ದೇನು ?

suddione whatsapp group join

 

ಸುದ್ದಿಒನ್, ಚಿತ್ರದುರ್ಗ, (ಸೆ.24) : ಚಿಕ್ಕಪುಟ್ಟ ಚರ್ಚೆಗಳ ನಡುವೆ ಕೇವಲ 60 ನಿಮಿಷದಲ್ಲಿ 19 ವಿಷಯಗಳಿಗೆ ಸಮ್ಮತಿ ಸೂಚಿಸಿದರು ನಗರಸಭೆ ಸದಸ್ಯರು.

ಜಿಲ್ಲಾ ಪಂಚಾಯತ್ ಸಂಭಾಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ನಗರಸಭೆ ಸಾಮಾನ್ಯ ಸಭೆಯಲ್ಲಿ ಎಂದಿನಂತೆ ನಗರಸಭೆ ಇಂಜಿನಿಯರ್‍ಗಳಿಬ್ಬರು ಸರ್ವ ಸದಸ್ಯರ ಪ್ರಶ್ನೆಗಳಿಗೆ ಉತ್ತರ ರೂಪದ ಸಮಾಜಾಯಿಷಿ ನೀಡುತ್ತಾ ಸಭೆಯನ್ನು ಪೂರ್ಣಗೊಳಿಸಿದರು.

ಪ್ರಾರಂಭದಲ್ಲಿ ನಗರಸಭೆ ಉಪಾಧ್ಯಕ್ಷೆ ಶ್ವೇತಾ ವಿರೇಶ್ ತಮ್ಮ ಉಪಾಧ್ಯಕ್ಷೆ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಜಿಲ್ಲಾಧಿಕಾರಿಗಳು ಅಂಗೀಕರಿಸಿದ್ದಾರೆ ಎಂಬ ಮಾಹಿತಿಯನ್ನು ಪೌರಾಯುಕ್ತರು ಸಭೆಗೆ ತಿಳಿಸಿದರು. ಬಳಿಕ ನಡಾವಳಿಯ ವಿಷಯಗಳನ್ನು ಓದುತ್ತಾ ಕೆಲ ನಿಮಿಷಗಳ ಚರ್ಚೆಯೊಂದಿಗೆ ಸದಸ್ಯರು ಒಪ್ಪಿಗೆ ಸೂಚಿಸಿದರು.

ವಿಪಿ ಬಡಾವಣೆಯ ಪಿವಿಎಸ್ ಆಸ್ಪತ್ರೆ ಸಮೀಪದ ಎರಡು ನಿವೇಶನ ಹರಾಜು, ಶಾಂತಿಸಾಗರ ನೀರು ಪೂರೈಕೆ ಯೋಜನೆಯ ಪ್ಯಾನೇಲ್ ಬೋರ್ಡ್‍ಗಳ ವಾರ್ಷಿಕ ನಿರ್ವಹಣೆ ಹಾಗೂ ಪೈಪ್‍ಲೈನ್ ಸುರಕ್ಷತೆ ಹಾಗೂ ವೀಕ್ಷಣೆಗೆ ಗಸ್ತು ಪಡೆ ರಚಿಸುವ ವಿಚಾರಕ್ಕೆ ನಗರಸಭೆ ಮಾಜಿ ಅಧ್ಯಕ್ಷ ಮಂಜುನಾಥ್‍ಗೊಪ್ಪೆ ಆಪೇಕ್ಷ ವ್ಯಕ್ತಪಡಿಸಿದರು. ಬಳಿಕ ಪೌರಾಯುಕ್ತರು ಹಾಗೂ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀನಿವಾಸ್ ವಿವರಣೆ ನೀಡಿದ ಬಳಿಕ ಸಮ್ಮತಿಸಿದರು.

ಯೂನಿಯನ್ ಪಾರ್ಕ್ ಪ್ರವೇಶಕ್ಕೆ ದರ ನಿಗದಿಗೆ ಕೆಲ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಬಳಿಕ ಸರ್ವ ಸದಸ್ಯರು 10 ರು. ಪ್ರವೇಶ ಶುಲ್ಕಕ್ಕೆ ಸಮ್ಮತಿಸಿದರು. ಜತೆಗೆ ಯೂನಿಯನ್ ಪಾರ್ಕ್‍ನ ಇಂದಿರಾ ಕ್ಯಾಂಟೀನ್ ಅನ್ನು ಜಿಲ್ಲಾಸತ್ರೆ ಮುಂಭಾಗದ ಉದ್ಯಾನವನಕ್ಕೆ ಸ್ಥಳಾಂತರ ಹಾಗೂ ಬಾಲಕಿಯರ ಹಿತದೃಷ್ಟಿಯಿಂದ ಅನೈತಿಕ ಚಟುವಟಿಕೆ ತಾಣವಾಗಿರುವ ಬಾಲಕಿಯರ ಜೂನಿಯರ್ ಕಾಲೇಜು ಹಿಂಭಾಗದ ರಸ್ತೆಯನ್ನು ಬಂದ್‍ಗೊಳಿಸಲು ಸದಸ್ಯರು ಸಮ್ಮತಿಸಿದರು.

ನಗರಸಭೆ ಅಧ್ಯಕ್ಷೆ ತಿಪ್ಪಮ್ಮ, ಪೌರಾಯುಕ್ತರಾದ ಜಿ.ಟಿ. ಹನುಮಂತರಾಜು ಉಪಸ್ಥಿತರಿದ್ದರು.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಗಂಡು ಮಗುವಿಗೆ ಜನ್ಮ ನೀಡಿದ ರೇವತಿ : ದೊಡ್ಡಗೌಡರ ಕುಟುಂಬದಲ್ಲಿ ಸಡಗರ, ಸಂಭ್ರಮ

ಮಾಜಿ ಸಿಎಂ ಯಡಿಯೂರಪ್ಪಗೆ ಸಿಕ್ತು ಅತ್ಯುತ್ತಮ ಶಾಸಕ ಪ್ರಶಸ್ತಿ