Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಡಾ.ಬಿ.ಆರ್.ಅಂಬೇಡ್ಕರ್ ನ್ಯಾಷನಲ್ ಫೆಲೋಶಿಪ್ ಪ್ರಶಸ್ತಿಗೆ ಸಂಶೋಧನಾ ವಿದ್ಯಾರ್ಥಿ ಈಶ್ವರ್ ಆಯ್ಕೆ

Facebook
Twitter
Telegram
WhatsApp

ಬೆಂಗಳೂರು : ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ದೆಹಲಿ ಇವರು ಪ್ರಸಕ್ತ 2022 ನೇ ಸಾಲಿನ ಡಾ.ಬಿ.ಆರ್. ಅಂಬೇಡ್ಕರ್ ನ್ಯಾಷನಲ್ ಫೆಲೋಶಿಪ್ ಪ್ರಶಸ್ತಿಯನ್ನು ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಸಿರಿಗೇರಿ ಗ್ರಾಮದ ನಿವಾಸಿ ಹಾಗೂ ಪ್ರಸ್ತುತ ಬೆಂಗಳೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರಾದ ಪ್ರೊ. ಡಾ

ಬಿ.ಕೆ. ರವಿ ರವರ ಮಾರ್ಗದರ್ಶನದಲ್ಲಿ ಪೂರ್ಣಾವಧಿಯ (ಪಿಎಚ್‌.ಡಿ) ಸಂಶೋಧನಾ ವಿದ್ಯಾರ್ಥಿಯಾಗಿ  ಅಧ್ಯಯನ ಮಾಡುತ್ತಿದ್ದು, ಈಶ್ವರ್ ಅವರನ್ನು  ಪತ್ರಿಕಾ ಕ್ಷೇತ್ರದಿಂದ ಪರಿಗಣಿಸಿ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ದೆಹಲಿ ರಾಷ್ಟ್ರೀಯ ಅಧ್ಯಕ್ಷರಾದ ಡಾ. ಎಸ್. ಪಿ. ಸುಮನಾಕ್ಷರ್ ಅವರು ಆಯ್ಕೆ ಮಾಡಿ ಆದೇಶಿಸಿದ್ದಾರೆ.

ಈಶ್ವರ್ ಅವರು ಹಲವಾರು ವರ್ಷಗಳಿಂದ  ಹಿಂದುಳಿದ ವರ್ಗಗಳ,  ಶೋಷಿತ ಸಮುದಾಯದ ಅಭಿವೃದ್ಧಿಗಾಗಿ ಸಾಕಷ್ಟು ಹೋರಾಟ, ಬರವಣಿಗೆಯ ಮೂಲಕ ಪತ್ರಿಕೋದ್ಯಮ ರಂಗದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ರವರ ವಿಚಾರಧಾರೆಗಳನ್ನು ಪ್ರಚುರಪಡಿಸುವಲ್ಲಿ ಹಾಗೂ ಸಮಾಜ ಸೇವೆ ಮಾಡುವುದರ ಮೂಲಕ ವಿವಿಧ ಕ್ಷೇತ್ರದಲ್ಲಿನ ತಮ್ಮನ್ನು ತಾವು ತೊಡಗಿಸಿ ಕೊಂಡಿದ್ದಾರೆ.

ಡಿಎಸ್ಎಸ್ ನ ಅಂಗಸಂಸ್ಥೆಗಳಲ್ಲಿ ನಾನಾ ದಲಿತ ವಿದ್ಯಾರ್ಥಿ ಒಕ್ಕೂಟ, ಬಿ.ವಿಎಸ್. ಹಾಗೂ ವಿದ್ಯಾರ್ಥಿ ಪರಿಷತ್ತುಗಳಲ್ಲಿ ಸಕ್ರಿಯ ಕಾರ್ಯಕರ್ತರಾಗಿ ದಲಿತ, ಶೋಷಿತ, ಹಿಂದುಳಿದ, ಅಲ್ಪಸಂಖ್ಯಾತ
ಸಮುದಾಯದಗಳ ಪರವಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಸಮಸ್ಯೆಗಳನ್ನು ಬಗೆ ಹರಿಸುವುದರ ಜತೆಗೆ ರಾಜ್ಯದ ಹಲವಾರು ವಸತಿ ನಿಲಯಗಳ ಮೂಲಭೂತ ಸೌಕರ್ಯವನ್ನು ಒದಗಿಸಲು ಹಲವಾರು ರೀತಿಯ ಹೋರಾಟದ, ಬರವಣಿಗೆಯ ಮೂಲಕ ಪತ್ರಿಕೆಯ ರೂಪದಲ್ಲಿ ಬೆಳಕು ಚೆಲ್ಲುವ ಪ್ರಯತ್ನವನ್ನು ಮಾಡಿದ್ದಾರೆ. ಹಾಗೆಯೇ ವೃತ್ತಿ ಜೀವನದ ಸಮಯದಲ್ಲಿನ ಕೇಂದ್ರ- ರಾಜ್ಯ ಸರ್ಕಾರಗಳು ಮತ್ತು ರಾಜಕಾರಣಿ ವ್ಯಕ್ತಿಗಳ, ಅಧಿಕಾರಗಳ ನಡುವೆ ಗಮನ ಸೆಳೆದು ಸಮಸ್ತ ವಿದ್ಯಾರ್ಥಿಗಳ ಬಳಗಕ್ಕೆ ಅಧ್ಯಯನ ದೃಷ್ಟಿಯಿಂದ ವ್ಯಾಸಂಗ ಮಾಡಲು ಪೂರಕವಾದ ವಾತಾವರಣ ಸೃಷ್ಟಿಸಿ ಅದರಲ್ಲೂ ದಲಿತ ಸಮುದಾಯದ ವಿದ್ಯಾರ್ಥಿಗಳ ಪರವಾಗಿ ಹಾಗೂ ಸರ್ಕಾರದ ಸೌಲಭ್ಯಗಳನ್ನು ಮಾಹಿತಿಗಳನ್ನು ಪ್ರಚಾರ ಮಾಡುವಲ್ಲಿ ಹಾಗೂ ಸೌಲಭ್ಯ ವಂಚಿತ ಜನವರ್ಗದವರಿಗೆ ಧ್ವನಿಯಾಗಿ ಯಶಸ್ಸು ಸಾಧಿಸುವಲ್ಲಿ ಹೊರಹೊಮ್ಮಿದ್ದಾರೆ.

ಪತ್ರಿಕಾ ವೃತ್ತಿಗೂ ಸೈ ಹಾಗೂ ಸಮಾಜ ಸೇವೆಗೂ ಸೈ: ರಾಜ್ಯದ ಸಮಸ್ತ ಶೋಷಿತ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದೆಂದು ಉದ್ದೇಶದಿಂದ ತಮ್ಮ ಬಿಡುವಿನ ವೇಳೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿದ್ಯಾರ್ಥಿಗಳ ಗೋಸ್ಕರ ಇರುವ ವಿದ್ಯಾರ್ಥಿ ವೇತನ ಮತ್ತು ವಸತಿ ಸೌಲಭ್ಯಗಳು, ಇತರೆ ಸೌಲಭ್ಯಗಳ ಪ್ರಚಾರ, ಅಧಿಕಾರಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸೌಲಭ್ಯಗಳನ್ನು ಕಾರ್ಯಾಗತಗೊಳಿಸುವಲ್ಲಿ ಶ್ರಮಿಸಿದ್ದಾರೆ. ಇನ್ನು ಅಧಿಕಾರಿ ವರ್ಗದವರ ಮೂಲಕ ವಿದ್ಯಾರ್ಥಿ ಯುವ ಸಮುದಾಯದಕ್ಕೆ ಮಾದರಿಯಾಗಿದ್ದಾರೆ.

ಪ್ರಸ್ತುತ ಸಾಲಿನಲ್ಲಿ ಕೇಂದ್ರ- ರಾಜ್ಯ ಸರ್ಕಾರದ ಹಲವಾರು ಯೋಜನೆಗಳಲ್ಲಿ ಅದರಲ್ಲೂ ಶೈಕ್ಷಣಿಕ, ಆರ್ಥಿಕ ವಲಯದಲ್ಲಿ ಮುನ್ನಲೆಗೆ ಬರಲು ಪ್ರಮುಖ ಈ ಯೋಜನೆಗಳನ್ನು ಕೊಡಿಸುವಲ್ಲಿ ದಲಿತ ಸಮುದಾಯದ ಪರವಾಗಿ ರಾಜ್ಯ ವ್ಯಾಪ್ತಿಯಲ್ಲಿ ಸಮಸ್ತ ದಲಿತ ಸಮುದಾಯದ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಪರಿಹರಿಸಲು ಮುಚೋಣಿಯಲ್ಲಿದ್ದಾರೆ.

ದಲಿತ ಸಮುದಾಯದಗಳ ಅಸಮಾನತೆಯನ್ನು ಮೇಲು, ಕೀಳು, ಭೇದಭಾವ ಇತರೆ ಸಮಸ್ಯೆಗಳನ್ನು ಹೋಗಲಾಡಿಸುವಲ್ಲಿ ಇವರು ಶ್ರಮಿಸುತ್ತಿದ್ದಾರೆ. ಹೀಗೆ ಹಲವಾರು ಬಗೆಯ ನಾನಾ ಕೆಲಸಗಳನ್ನು ಮಾಡುತ್ತಾ ಈಶ್ವರ್ ರವರು ಪತ್ರಿಕೋದ್ಯಮ (ವೃತ್ತಿ ಧರ್ಮದ) ಬರವಣಿಗೆಯ ಮೂಲಕ ಬೆಳಕು ಚೆಲುವ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದನ್ನು ಕಂಡು ಹಾಗೂ ಸಮಾಜಮುಖಿ ಸೇವೆಯನ್ನು ಮಾಡಲು ಹೋರಾಟ ಮನೋಭಾವವನ್ನು ಗಮನಿಸಿದ ಇವರನ್ನು ಪತ್ರಿಕಾ ಕ್ಷೇತ್ರದಿಂದ ಪರಿಗಣಿಸಿ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ದೆಹಲಿ ಇವರು ಇದೇ ಡಿಸೆಂಬರ್ 11ರಂದು ದೆಹಲಿಯ ಪಂಚಶೀಲ ಆಶ್ರಮದಲ್ಲಿ ಜರುಗುವ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿಯ
37ನೇ ರಾಷ್ಟ್ರೀಯ ಸಮ್ಮೇಳನದಲ್ಲಿ ಗಣ್ಯಾತಿ ಗಣ್ಯರ ಸಮ್ಮುಖದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ನ್ಯಾಷನಲ್ ಫೆಲೋಶಿಪ್ ಪ್ರಶಸ್ತಿಯನ್ನು  ರಾಷ್ಟ್ರೀಯ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.

ಆದಕಾರಣ ಈಶ್ವರ್ ರವರು ಈ ಸಮ್ಮೇಳನದಲ್ಲಿ ಭಾಗಿಯಾಗಿ ಅಕಾಡೆಮಿಯ ವತಿಯಿಂದ  ಕೊಡಮಾಡುವ ಪ್ರಶಸ್ತಿಯನ್ನು ಸ್ವೀಕರಿಸಬೇಕೆಂದು ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ದೆಹಲಿಯ ಪರವಾಗಿ (ಬಿಡಿಎಸ್ಎ) ಕರ್ನಾಟಕ ರಾಜ್ಯ ಘಟಕ ರಾಜ್ಯಾಧ್ಯಕ್ಷರಾದ ಶ್ರೀ ಚೆಲುವರಾಜು ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಗೋವಿಂದ ಕಾರಜೋಳರವರನ್ನು ಎರಡು ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ : ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ,ಏಪ್ರಿಲ್. 16 : ತಾಯಿಯ ಅಂತ್ಯ ಸಂಸ್ಕಾರ ನಡೆಸಿ ಅಂದೇ ಕೆಲಸದಲ್ಲಿ ನಿರತರಾದ ನರೇಂದ್ರಮೋದಿ ಮೂರನೆ ಬಾರಿಗೆ

ಅಭ್ಯರ್ಥಿ ಗೆಲುವಿಗೆ ಶಕ್ತಿ ಕೇಂದ್ರದ ಪ್ರಮುಖರು ಹಗಲು-ರಾತ್ರಿ ಪ್ರಾಮಾಣಿಕವಾಗಿ ಕೆಲಸ ಮಾಡಿ : ಸಂತೋಷ್‍ ಜಿ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ,ಏಪ್ರಿಲ್. 16  : ಕಾಂಗ್ರೆಸ್ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವುದು ಕಾಂಗ್ರೆಸ್‍ನವರಿಗೆ ಬೇಕಿಲ್ಲ. ಅವರವರ ಕುರ್ಚಿ ಉಳಿಕೊಳ್ಳುವುದೇ

ವಾಣಿ ವಿಲಾಸ ಸಾಗರ ಜಲಾಶಯದ ನೀರನ್ನ ಖಾಲಿ ಮಾಡಲು ಹುನ್ನಾರ :  ರೈತ ಮುಖಂಡ  ರಮೇಶ್ ಆರೋಪ

ಸುದ್ದಿಒನ್, ಹಿರಿಯೂರು, ಏಪ್ರಿಲ್. 16 : ತಾಲೂಕಿನ ವಾಣಿವಿಲಾಸ ಸಾಗರ ಜಲಾಶಯದ ನೀರು ಖಾಲಿ ಮಾಡಲು ಹುನ್ನಾರ ನಡೆಸಲಾಗಿದೆ ಎಂಬುದಾಗಿ  ರೈತ ಮುಖಂಡ ಹಾಗೂವಾಣಿವಿಲಾಸ ಸಾಗರ  ಹಾಗೂ  ಭದ್ರಾ ಮೇಲ್ದಂಡೆ ಅಚುಕಟ್ಟುದಾರ ರೈತಹಿತ ರಕ್ಷಣಾ

error: Content is protected !!