in

6,7,8 ತರಗತಿ ಆರಂಭಕ್ಕೆ ಡೇಟ್ ಫಿಕ್ಸ್

suddione whatsapp group join

ಬೆಂಗಳೂರು: ಶಾಲೆ ಆರಂಭದ ವಿಚಾರವಾಗಿ ಇಂದು ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ಸಭೆ ನಡೆದಿದೆ. ಮಹತ್ವದ ಸಭೆಯಲ್ಲಿ 6,7,8 ನೇ ತರಗತಿ ಆರಂಭದ ತೀರ್ಮಾನ ಮಾಡಲಾಗಿದೆ.

ಈಗಾಗಲೇ 9 ರಿಂದ 12ನೇ ತರಗತಿಯವರೆಗೆ ಶಾಲೆ ಆರಂಭ ಮಾಡಲಾಗಿತ್ತು. ಪರಿಸ್ಥಿತಿ ನೋಡ್ಕೊಂಡು ಮುಂದಿನ ಶಾಲೆಗಳ ಆರಂಭದ ಬಗ್ಗೆ ಯೋಚಿಸಲಾಗುತ್ತೆ ಅಂತ ಸರ್ಕಾರ ಕೂಡ ಹೇಳಿತ್ತು. ಇದೀಗ ಅದರಂತೆ ಸಿಎಂ ನೇತೃತ್ವದಲ್ಲಿ ಸಭೆ ನಡೆದಿದ್ದಿ, ಸೆಪ್ಟೆಂಬರ್ 9 ರಿಂದ 6,7,8ನೇ ತರಗತಿ ಆರಂಭಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ.

ಸಭೆ ಬಳಿಕ ಮಾತನಾಡಿದ ಸಚಿವ ಆರ್ ಅಶೋಕ್, 6,7,8 ತರಗತಿ ತೆರೆಯಲು ಸರ್ಕಾರ ಅನುಮತಿ ನೀಡಿದೆ. ಅರ್ಧ ದಿನ ಮಾತ್ರ ಶಾಲೆಗಳು ಕಾರ್ಯ ನಿರ್ವಹಿಸಲಿವೆ. ಮಕ್ಕಳು ಬ್ಯಾಚ್ ಪ್ರಕಾರ ಶಾಲೆಗೆ ಬರಲು ತಿಳಿಸಲಾಗಿದೆ. ಶೇ.2ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ಶಾಲೆ ಆರಂಭಕ್ಕೆ ಅನುಮತಿ ನೀಡಲಾಗಿದೆ. ಶನಿವಾರ ಮತ್ತು ಭಾನುವಾರ ಕೂಡ ಶಾಲೆ ಆರಂಭವಾಗಲಿವೆ ಎಂದಿದ್ದಾರೆ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಹಿಂದೂ ಮಹಾಗಣಪತಿಗೆ ಸಿದ್ಧತೆ ಆರಂಭ; ಬದಲಾವಣೆಗೊಂಡ ಸ್ಥಳ

ನಂಬರ್ ಬೇರೆ ಬೇರೆ ಕೊಡುತ್ತಿರುವ ಕಾರಣ ಅದರ ಲೆಕ್ಕ ಸಿಕ್ತಾ ಇಲ್ಲ : ಸಚಿವ ಸುಧಾಕರ್