ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಯ ಅಪಹರಣ ಮತ್ತು ಹತ್ಯೆ ಪ್ರಕರಣದ 11ನೇ ಆರೋಪಿ ಹಾಗೂ 2ನೇ ಆರೋಪಿ ಮತ್ತು ನಟ ದರ್ಶನ್ನ ಬಲಗೈಬಂಟನಂತಿದ್ದ ನಾಗರಾಜ್ಗೆ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಲಾಗಿದೆ.
ನಾಗರಾಜ್ ಪತ್ನಿಗೆ ತೀವ್ರ ಅನಾರೋಗ್ಯ ಹಿನ್ನೆಲೆಯಲ್ಲಿ ಕೊಲೆ ಆರೋಪಿ ನಾಗರಾಜ್ಗೆ 10 ದಿನ ಮಧ್ಯಂತರ ಜಾಮೀನನ್ನು ಇಂದು ಕೋರ್ಟ್ ಮಂಜೂರು ಮಾಡಿದೆ. ನ್ಯಾಯಾಲಯ ಮಧ್ಯಂತರ ಬೇಲ್ ನೀಡಿದ್ದಲ್ಲದೇ, ಪ್ರತಿನಿತ್ಯ ಬೆಳಗ್ಗೆ 8ಕ್ಕೆ ಮತ್ತು ರಾತ್ರಿ 7ಗಂಟೆಗೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಸಹಿ ಹಾಕುವಂತೆ ಆರೋಪಿಗೆ ಕೋರ್ಟ್ ಷರತ್ತು ವಿಧಿಸಿದೆ.
ನಾಗರಾಜ್ ನಟ ದರ್ಶನ್ ಜೊತೆ ಕಳೆದ 15 ವರ್ಷಗಳಿಂದ ಗುರುತಿಸಿಕೊಂಡಿದ್ದು, ದರ್ಶನ್ಗೆ ನಾಗರಾಜ್ ಭಾರೀ ಆಪ್ತ ಹಾಗೂ ಬಲಗೈ ಬಂಟನಂತಿದ್ದ ಎನ್ನಲಾಗಿದೆ.ನಾಗರಾಜ್, ದರ್ಶನ್ ಪರಿಚಯಕ್ಕೂ ಮೊದಲು ಪೆಟ್ರೋಲ್ ಬಂಕ್ನಲ್ಲಿ ಕೆಲಸ ಮಾಡುತ್ತಿದ್ದನಂತೆ. ದರ್ಶನ್ನ ಪರಿಚಯವಾದ ನಂತರದ ದಿನಗಳಲ್ಲಿ ನಾಗರಾಜ್, ಡಿಬಾಸ್ನ ವಿಶ್ವಾಸ ಗಳಿಸಿ ರೈಟ್ ಹ್ಯಾಂಡ್ ಎಂಬಂತೆ ‘ಡಿ’ ಗ್ಯಾಂಗ್ ಬಳಗದಲ್ಲಿ ಗುರುತಿಸಿಕೊಂಡಿದ್ದ.




