in ,

ಪ್ರೀತಿಯ ಹೆಸರಲ್ಲಿ ಯುವತಿಯರ ಖಾಸಗಿ ದೃಶ್ಯ ರೆಕಾರ್ಡ್..ಹಣಕ್ಕೆ ಡಿಮ್ಯಾಂಡ್ ಮಾಡುತ್ತಿದ್ದವ ಈಗ ಜೈಲಲ್ಲಿ..!

suddione whatsapp group join

 

ಬೆಂಗಳೂರು: ಯುವತಿಯರಿಗೆ ಬರೀ ಮೋಸದಾಟ ತೋರಿಸಿ, ಪ್ರೀತಿಯ ನಾಟಕವಾಡಿ, ವಿಡಿಯೋ ಮಾಡಿ ಬ್ಲಾಕ್ ಮೇಲ್ ಮಾಡುತ್ತಿದ್ದವ ಈಗ ಪೊಲೀಸರ ಅತಿಥಿಯಾಗಿದ್ದಾನೆ. ರಾಕೇಶ್ ಬಂಧಿತ ಆರೋಪಿ.

ಇದೇ ವಿಚಾರಕ್ಕೆ ಯುವತಿಯೊಬ್ಬಳು ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ದೂರೊಂದನ್ನ ದಾಖಲಿಸಿದ್ದಾರೆ. ಈ ದೂರಿನ ಮೇರೆಗೆ ರಾಕೇಶ್ ನನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. ದೂರು ದಾಖಲಿಸಿರುವ ಯುವತಿ ಫ್ಯಾನ್ಸಿ ಸ್ಟೋರ್ ನಲ್ಲಿ ಕೆಲಸ ಮಾಡುತ್ತಿದ್ದಳು. ಆ ಬಳಿಕ ಆಕೆಯನ್ನ ಪರಿಚಯ ಮಾಡಿಕೊಂಡಿದ್ದ ರಾಕೇಶ್, ಪ್ರೀತಿಯ ನಾಟಕವಾಡಿದ್ದನಂತೆ, ಪ್ರೀತಿ ನಿವೇದನೆ ಕೂಡ ಮಾಡಿಕೊಂಡಿದ್ದನಂತೆ. ಆಕೆಯನ್ನ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ವಿಡಿಯೋ ಮಾಡಿಕೊಂಡಿದ್ದನಂತೆ. ವಿಡಿಯೋ ಸಿಕ್ಕ ಬಳಿಕ ಅಸಲಿ ಆಟ ಶುರು ಮಾಡಿದ್ದನಂತೆ.

ಆ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿದ್ದವ, ಎರಡು ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದನಂತೆ. ಇದರಿಂದ ಗಾಬರಿಯಾಗಿದ್ದ ಯುವತಿ, ಪೊಲೀಸರಿಗೆ ದೂರು ನೀಡಿದ್ದಾಳೆ. ಯುವತಿ ದೂರಿನ ಮೇರೆಗೆ ಪೊಲೀಸರು ರಾಕೇಶ್ ನನ್ನು ಬಂಧಿಸಿ, ವಿಚಾರಣೆ ನಡೆಸಿದ್ದಾರೆ. ಆತನ ಮೊಬೈಲ್ ನ್ನು ವಶಕ್ಕೆ ಪಡೆದಿದ್ದಾರೆ. ಆತನ ಕರಾಳ ಮುಖ ಒಂದೊಂದಾಗಿಯೇ ಬಯಲಾಗುತ್ತಾ ಬಂದಿದೆ. ಅದಾಗಲೇ ಈ ರೀತಿ ಆರು ಜನಕ್ಕೆ ಮೋಸ ಮಾಡಿದ್ದಾನಂತೆ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಹೆರಿಗೆ ಬಳಿಕ ಮಹಿಳೆ ಸಾವು : ಜಿಲ್ಲಾಸ್ಪತ್ರೆ ಮುಂದೆ ಶವವಿಟ್ಟು ಸಂಬಂಧಿಕರ ಆಕ್ರೋಶ

ಮತ್ತೆ ಸಾವಿರ ದಾಟಿದ ಕೊರೊನಾ ಸೋಂಕು..8 ಜನರ ಸಾವು..!