Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಚಂದ್ರಪ್ಪನ ಭ್ರಷ್ಟಾಚಾರ ಬಹಿರಂಗ ಚರ್ಚೆಗೆ ಸಿದ್ಧ, ದಿನಾಂಕ, ಸ್ಥಳ ನಿಗದಿ ಮಾಡಲಿ : ಮಾಜಿ ಸಚಿವ ಆಂಜನೇಯ ಪಂಥಾಹ್ವಾನ

Facebook
Twitter
Telegram
WhatsApp

 

ಹೊಳಲ್ಕೆರೆ, (ಮೇ 8) : ಕ್ಷೇತ್ರದಲ್ಲಿ ಕೆರೆ ಹೂಳೆತ್ತುವ ಕಾಮಗಾರಿ, ರಸ್ತೆ ಅಭಿವೃದ್ಧಿ ಹೆಸರಲ್ಲಿ ಆಗಿರುವ ಕೋಟ್ಯಾಂತರ ರೂಪಾಯಿ ಅವ್ಯವಹಾರಕ್ಕೆ ಸಂಬಂಧಪಟ್ಟಂತೆ ದಾಖಲೆಗಳಿದ್ದು, ಈ ಸಂಬಂಧ ಜಿಲ್ಲಾಡಳಿತ ತನಿಖೆ ನಡೆಸಿದರೆ ಇನ್ನಷ್ಟು ಭ್ರಷ್ಟಾಚಾರ ಬಯಲಿಗೆ ಬರಲಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.

ಹೊಳಲ್ಕೆರೆ ಪಟ್ಟಣ ಹಾಗೂ ಸುತ್ತಮುತ್ತಲ ಹಳ್ಳಿಗಳಲ್ಲಿ ಸೋಮವಾರ ಕೊನೇ ದಿನ ಮನೆ ಮನೆ ಭೇಟಿ ನೀಡಿ ಮತಯಾಚನೆ ನಡೆಸಿದ ಸಂದರ್ಭ ಮಾತನಾಡಿದರು.

300 ಕೆರೆ ಅಭಿವೃದ್ಧಿಗೊಳಿಸಿದ್ದೇನೆ ಎಂದು ಪದೇ ಪದೆ ಸುಳ್ಳು ಹೇಳುವ ಚಂದ್ರಪ್ಪ, ಭರಮಸಾಗರ ಕೆರೆಗೆ ಏತನೀರಾವರಿ ಮೂಲಕ ನೀರು ಹರಿಸುವ ಯೋಜನೆ ಜಾರಿ ಹಾಗೂ ಹೊಳಲ್ಕೆರೆ ತಾಲೂಕು ಭದ್ರಾ ಮೇಲ್ದಂಡೆ ಯೋಜನೆ ವ್ಯಾಪ್ತಿಗೆ ಸೇರಿದ್ದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ. ಈ ವಿಷಯದಲ್ಲಿ ಸಿರಿಗೆರೆ ಮಠದ ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳ ಇಚ್ಛಾಶಕ್ತಿ ಪ್ರಮುಖ ಕಾರಣ ಆಗಿದೆ. ಆದರೆ, ಚಂದ್ರಪ್ಪ ಮಾತ್ರ ಎಲ್ಲವನ್ನೂ ನಾನೇ ಮಾಡಿದ್ದೇನೆ ಎಂದು ಸುಳ್ಳು ಹೇಳಿಕೊಂಡು ಪ್ರಚಾರ ಪಡೆಯುತ್ತಿರುವುದು ಸರಿಯಲ್ಲ ಎಂದರು.

ಸಾರಿಗೆ ನಿಗಮದ ಅಧ್ಯಕ್ಷರಾಗಿರುವ ಶಾಸಕ ಚಂದ್ರಪ್ಪ, ಕ್ಷೇತ್ರಕ್ಕೆ ಏನು ಕೊಡುಗೆ ನೀಡಿದ್ದಾರೆ ಎಂಬುದನ್ನು ಸ್ವತಃ ಪ್ರಶ್ನೇ ಮಾಡಿಕೊಳ್ಳಬೇಕು. ನಾನು ಸಚಿವನಾಗಿದ್ದ ಸಂದರ್ಭದಲ್ಲಿ ಹೊಳಲ್ಕೆರೆ ಪಟ್ಟಣದಲ್ಲಿ ಸಾರಿಗೆ ನಿಗಮದ ತರಬೇತಿ ಕೇಂದ್ರ, ಅನೇಕ ಶಿಕ್ಷಣ ಸಂಸ್ಥೆ, ಸಮುದಾಯ ಭವನಗಳನ್ನು ನಿರ್ಮಿಸಲಾಗಿತ್ತು. ನಮ್ಮ ಅವಧಿಯಲ್ಲಿ ಆಗಿದ್ದ ಅಭಿವೃದ್ಧಿ ಕೆಲಸಗಳನ್ನು ಉದ್ಘಾಟಿಸಿರುವುದೇ ಚಂದ್ರಪ್ಪನ ಸಾಧನೆ ಎಂದು ಹೇಳಿದರು.

ನನ್ನ ಹಾಗೂ ಶಾಸಕ ಚಂದ್ರಪ್ಪನ ಅವಧಿಯಲ್ಲಿ ಆಗಿರುವ ಅಭಿವೃದ್ಧಿ ಹಾಗೂ ಅವರ ಕಾಲದಲ್ಲಿ ಆಗಿರುವ ಅವ್ಯವಹಾರ ಕುರಿತು ಬಹಿರಂಗ ಚರ್ಚೆಗೆ ನಾನು ಸಿದ್ಧನಿದ್ದೇನೆ. ಸಮಯ, ದಿನಾಂಕ, ಸ್ಥಳವನ್ನೇ ಅವರೇ ನಿಗದಿ ಮಾಡಲಿ. ಅಂದು ನಾನು ಹಾಜರಾಗುತ್ತೇನೆ ಎಂದು ಸವಾಲು ಹಾಕಿದ ಆಂಜನೇಯ, 2012ರಲ್ಲಿ ತಾಲೂಕು ಕಚೇರಿ ಎದುರು ಶಾಮಿಯಾನ ಹಾಕಿ ಚರ್ಚೆಗೆ ವೇದಿಕೆ ಸಿದ್ಧಪಡಿಸಿದ್ದ ಸಂದರ್ಭ, ಚಂದ್ರಪ್ಪ ಗೈರಾಗಿದ್ದರು. ಆದರೆ, ಈ ಬಾರಿ ಆ ರೀತಿ ಮಾಡದೆ ಜನರಿಗೆ ಸತ್ಯಾಸತ್ಯತೆ ತಿಳಿಸಲು ಚರ್ಚೆಗೆ ಚಂದ್ರಪ್ಪ ಬರಬೇಕು ಎಂದು ಒತ್ತಾಯಿಸಿದರು.

ಮಾಜಿ ಶಾಸಕ ಎ.ವಿ.ಉಮಾಪತಿ ಮಾತನಾಡಿ, ಕಳೆದ ಬಾರಿ ಆಂಜನೇಯ ಅವರ ವಿರುದ್ಧ ಇಲ್ಲ-ಸಲ್ಲದ ಅಪಪ್ರಚಾರ ನಡೆಸಿದ ಚಂದ್ರಪ್ಪ ಗೆದ್ದ ಬಳಿಕವಾದರೂ ಜನರ ಬಳಿ ಆದರೂ ಸುಳ್ಳು ಹೇಳುವುದನ್ನು ನಿಲ್ಲಿಸಬೇಕಿತ್ತು. ಆದರೆ, ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದ್ದರೂ ಸುಳ್ಳು ಹೇಳುತ್ತಿರುವುದು ಕ್ಷೇತ್ರದ ಜನರಿಗೆ ಮಾಡುತ್ತಿರುವ ದ್ರೋಹ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಐದು ವರ್ಷದಲ್ಲಿ ಕೆರೆ, ರಸ್ತೆ ಹೀಗೆ ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ಕುರಿತು ಶ್ವೇತಪತ್ರ ಹೊರಡಿಸುತ್ತೇನೆ ಎಂದು ಹೇಳಿದ್ದ ಚಂದ್ರಪ್ಪ, ಈಗ ತನ್ನ ಸುಳ್ಳು ಬಹಿರಂಗ ಆಗಲಿದೆ ಎಂದು ಶ್ವೇತಪತ್ರ ಹೊರಡಿಸುತ್ತೇನೆ ಎಂದು ಹೇಳಿದ್ದ ಮಾತನ್ನೇ ಮರೆತಿದ್ದಾರೆ. ಜನರು ಕೂಡ ಅವರ ನಡೆಗೆ ಮೇ 10ರಂದು ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ಕಾಡುಗೊಲ್ಲ ಸಮುದಾಯವನ್ನು ಜಾತಿ ಪಟ್ಟಿಗೆ ಸೇರಿಸಲು ಶ್ರಮಿಸಿದ್ದು ಆಂಜನೇಯ ಅವರು. ಜತೆಗೆ ಕಾಡುಗೊಲ್ಲರನ್ನು ಎಸ್‍ಟಿಗೆ ಸೇರಿಲು ಕೇಂದ್ರ ಶಿಫಾರಸ್ಸು, ಕಾಡುಗೊಲ್ಲ ಸಮುದಾಯದ ಕುರಿಗಾಹಿ ಮಹಿಳೆ ಜಯಮ್ಮ ಬಾಲರಾಜ್ ಅವರನ್ನು ಎಂಎಲ್ಸಿ ಮಾಡಿದ್ದು, ಸಮುದಾಯದ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ಹೀಗೆ ಕಾಡುಗೊಲ್ಲ ಸಮುದಾಯಕ್ಕೆ ಹೆಚ್ಚು ಮನ್ನಣೆ ನೀಡಿದ್ದು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮತ್ತು ಆಂಜನೇಯ. ಈ ಋಣವನ್ನು ತೀರಿಸುವ ಸಮಯ ಈಗ ಬಂದಿದ್ದು, ಆಂಜನೇಯ ಅವರನ್ನು ಹೆಚ್ಚು ಮತಗಳ ಅಂತರದಲ್ಲಿ ಗೆಲ್ಲಿಸಬೇಕು ಎಂದರು.

ವಾಲ್ಮೀಕಿ, ಕುಂಚಿಟಿಗ, ಲಿಂಗಾಯತ ಹೀಗೆ ಎಲ್ಲ ಸಮುದಾಯದ ಬಡವರಿಗೆ ಕೊಳವೆಬಾವಿ ಕೊರೆಯಿಸಿ ಅವರ ಜಮೀನುಗಳನ್ನು ತೋಟವನ್ನಾಗಿ ಪರಿವರ್ತಿಸಿದ ಕೀರ್ತಿ ಆಂಜನೇಯ ಅವರಿಗೆ ಸಲ್ಲುತ್ತದೆ. ಜೊತೆಗೆ ಆಂಜನೇಯ ಅವರು ಮಂಜೂರು ಮಾಡಿದ್ದ ಸಾವಿರಾರು ಕೊಳವೆಗಳ ಸೌಲಭ್ಯಕ್ಕೆ ದ್ವೇಷದ ರಾಜಕೀಯ ಕಾರಣಕ್ಕಾಗಿ ತಡೆ ಹಾಕಿ, ಬಡ ಜನರಿಗೆ ಸಮಸ್ಯೆ ಮಾಡಿದ ಕುಖ್ಯಾತಿ ಶಾಸಕ ಚಂದ್ರಪ್ಪನಿಗೆ ಸಲ್ಲುತ್ತದೆ ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಟಿ.ಹನುಮಂತಪ್ಪ, ನಗರ ಘಟಕದ ಅಧ್ಯಕ್ಷ ಮಜರ್ ಉಲ್ಲಾಖಾನ್, ಕಾಂಗ್ರೆಸ್ ಪುರಸಭೆ ಸದಸ್ಯರಾದ ವಸಂತ ರಾಜಪ್ಪ, ವಿಜಯಸಿಂಹ ಖಾಟ್ರೋತ್,  ಮನ್ಸೂರ್, ವಿಜಯ್, ಮುಖಂಡರಾದ ಪುರುಷೋತ್ತಮ್ ಮತಿತರರಿದ್ದರು.

ಕ್ಷೇತ್ರದ ಜನರ ಪ್ರೀತಿಗೆ ಋಣಿ
ಸಚಿವನಾಗಿದ್ದ ಸಂದರ್ಭದಲ್ಲಿ ಎಲ್ಲ ವರ್ಗದ ಬಹಳಷ್ಟು ಜನರಿಗೆ ಸೌಲಭ್ಯ ಕಲ್ಪಿಸಿದ್ದೇ. ಆದರೆ, ಚುನಾವಣೆಯಲ್ಲಿ ಸೋತ ಸಂದರ್ಭ ಬಹಳ ನೊಂದುಕೊಂಡಿದ್ದೇ. ನಾನು ಸೋತ ಬಳಿಕ ಐದು ವರ್ಷ ಚಂದ್ರಪ್ಪನ ದ್ವೇಷದ ರಾಜಕೀಯ ಕಾರಣಕ್ಕೆ ಕ್ಷೇತ್ರದ ಜನರು ಅನುಭವಿಸಿದ ಕಷ್ಟ ನನ್ನಲ್ಲಿ ಬಹಳಷ್ಟು ಕಾಡಿದೆ ಎಂದು ಆಂಜನೇಯ ಹೇಳಿದರು.

ಕಾಂಗ್ರೆಸ್ ಪಕ್ಷದ ಮೊದಲ ಪಟ್ಟಿಯಲ್ಲಿ ನನ್ನ ಹೆಸರಿಲ್ಲದ ಸಂದರ್ಭ ಸ್ವಯಂ ಆಗಿ ಜನ ಸಹಸ್ರಾರು ಸಂಖ್ಯೆಯಲ್ಲಿ ಜಮಾಯಿಸಿ, ನನ್ನ ಮೇಲೆ ತೋರಿದ ಪ್ರೀತಿ ಮರೆಯಲು ಸಾಧ್ಯವಿಲ್ಲ. ಜನರ ಪ್ರೀತಿ ಕಾರಣಕ್ಕೆ ಚುನಾವಣೆ ಕಣಕ್ಕೆ ಧುಮುಕಿದ ಬಳಿಕ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಪರ ಸುನಾಮಿ ರೀತಿ ಅಲೆ ಹೆಚ್ಚಾಗಿದೆ. ಜೊತೆಗೆ ಕ್ಷೇತ್ರದ ಬಹಳಷ್ಟು ಜನರು ಸ್ವಂತ ವೆಚ್ಚ ಮಾಡಿಕೊಂಡು ಚುನಾವಣೆ ಮಾಡುತ್ತಿದ್ದಾರೆ. ಅದರಲ್ಲೂ ಬಡ ವೃದ್ಧೆಯೊಬ್ಬರು ನನ್ನ ಮನೆಗ ಬಂದು 25 ಸಾವಿರ ನನ್ನ ಕೈಯಲ್ಲಿಟ್ಟು, ಸ್ವಾಮಿ ಮಂತ್ರಿ ಆಗಿದ್ದಾಗ ಬೋರ್ ಹಾಕಿಸಿಕೊಟ್ಟಿದ್ರೀ. ಈಗ ಅಡಕೆ ತೋಟ ಆಗೈತೆ, ನಿಮ್ಮ ಋಣ ನಮ್ಮ ಮೇಲಿದೆ ಎಂದಾಗ ನನಗೆ ಗೊತ್ತಿಲ್ಲದೆ ಕಣ್ಣೀರು ಬಂದಿದೆ. ಜನರ ಈ ಪ್ರೀತಿ ನನ್ನ ಜೀವನವನ್ನು ಸಾರ್ಥಕ ಮಾಡಿದೆ. ಅಧಿಕಾರ ಇದ್ದಾಗ ಜನಸೇವೆ ಮಾಡಿದರೆ ಜನ ಸ್ಮರಿಸುವ ಜೊತೆಗೆ ಕೈಯಿಂದ ದುಡ್ಡು ಹಾಕಿಕೊಂಡು ಚುನಾವಣೆ ಮಾಡುತ್ತಾರೆ. ಅಷ್ಟೇ ಅಲ್ಲ ಬಡತನದಲ್ಲೂ ಹಣ ಸಹಾಯ ಮಾಡುವ ಹೃದಯವಂತರನ್ನು ಗಳಿಸಲು ಸಾಧ್ಯ ಎಂಬುದನ್ನು ಈ ಚುನಾವಣೆ ಸಂದರ್ಭ ಪ್ರತಿ ಹೆಜ್ಜೆಯಲ್ಲೂ ಕಂಡಿದ್ದೇನೆ ಎಂದು ಭಾವುಕರಾಗಿ ಮಾತನಾಡಿದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ | ಕ್ರೂಸರ್ ವಾಹನ ಪಲ್ಟಿ  ಓರ್ವ ಸಾವು, 13 ಮಂದಿಗೆ ಗಾಯ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ಮಾರ್ಚ್. 28 : ತಾಲ್ಲೂಕಿನ ತಳಕು ಪೋಲೀಸ್ ಠಾಣೆ ವ್ಯಾಪ್ತಿಯ ರಾಷ್ಟೀಯ ಹೆದ್ದಾರಿ 150 ಎ

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕ್ವಾರಿ ಅಂಡ್ ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಷನ್‍ಗೆ ಶಕ್ತಿ ತುಂಬಬೇಕಾಗಿದೆ : ಅಬ್ದುಲ್ ಮಾಜಿದ್

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,    ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 28  : ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಭೆ ನಡೆಸಿ ಹೊಸ ಅಸೋಸಿಯೇಷನ್‍ಗೆ ಶಕ್ತಿ ತುಂಬಬೇಕಾಗಿದೆ

ಪ್ರಹ್ಲಾದ್ ಜೋಶಿಗೆ ಬೆಂಬಲ ನೀಡಿದ ವಾಲ್ಮೀಕಿ ಸಮಾಜ

ಹುಬ್ಬಳ್ಳಿ: ಧಾರವಾಡದಲ್ಲಿ ಪ್ರಹ್ಲಾದ ಜೋಶಿ ಅವರ ಸ್ಪರ್ಧೆಗೆ ದಿಂಗಾಲೇಶ್ವರ ಶ್ರೀಗಳ ಬೆಂಬಲಿಗರು ವಿರೋಧ ವ್ಯಕ್ತಪಡಿಸುತ್ತಿರುವ ಬೆನ್ನಲ್ಲೇ ಪ್ರಹ್ಲಾದ ಜೋಶಿ ಅವರ ಬೆಂಬಲಕ್ಕೆ ವಾಲ್ಮೀಕಿ ಸಮಾಜದ ಶ್ರೀಗಳು ನಿಂತಿದ್ದಾರೆ. ಇಂದು ಪ್ರಹ್ಲಾದ್ ಜೋಶಿ ಅವರ ಪರವಾಗಿ

error: Content is protected !!