Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಭಾಷೆ, ಕೌಶಲ್ಯ ಮತ್ತು ಪ್ರಮಾಣಿಕತೆ ಸ್ಫರ್ಧಾತ್ಮಕ ಪರೀಕ್ಷೆಗೆ ಅನಿವಾರ್ಯ : ಡಾ.ಗುಡದೇಶ್ವರಪ್ಪ

Facebook
Twitter
Telegram
WhatsApp

ವರದಿ ಮತ್ತು ಫೋಟೋ : ಸುರೇಶ್ ಪಟ್ಟಣ್

ಚಿತ್ರದುರ್ಗ,(ಜೂ.30) :  ಭಾಷೆ, ಕೌಶಲ್ಯ ಮತ್ತು ಪ್ರಮಾಣಿಕತೆ ಇಂದಿನ ಸ್ಫರ್ಧಾತ್ಮಕ ಪರೀಕ್ಷೆಗೆ ಅನಿವಾರ್ಯವಾಗಿದೆ, ಇದರ ಬಗ್ಗೆ ಹೆಚ್ಚಿನ ಗಮನವನ್ನು ನೀಡುವಂತೆ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಡಾ.ಗುಡದೇಶ್ವರಪ್ಪ ವಿದ್ಯಾರ್ಥಿನಿಯರಿಗೆ ಕರೆ ನೀಡಿದರು.

ಕಾಲೇಜು ಶಿಕ್ಷಣ ಇಲಾಖೆ, ದಾವಣಗೆರೆ ವಿಶ್ವ ವಿದ್ಯಾನಿಲಯ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ನಗರದ ತರಾಸು ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಸ್ವಾಗತ ಸಮಾರಂಭದ ಸಮಾಗಮ-2022ರ ಆಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ಚಿತ್ರದುರ್ಗ ಕಳೆದ 10 ವರ್ಷದ ಹಿಂದೆ ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆಯಾಗಿತ್ತು ಆದರೆ ಈಗ ಮುಂದುವರೆದ ಜಿಲ್ಲೆಯಾಗಿದೆ. ವಿವಿಧ ರೀತಿಯ ಸರ್ಕಾರಿ ಕಾಲೇಜುಗಳು ಬಂದಿದ್ದು, ಮೆಡಿಕಲ್ ಕಾಲೇಜುಗಳು ಬರುತ್ತಿದೆ. ಇದರೊಂದಿಗೆ ಖಾಸಗಿಯಾಗಿಯೂ ಸಹಾ ಕಾಲೇಜುಗಳು ಇವೆ. ಇವುಗಳಿಂದ ಜಿಲ್ಲೆ ಶೈಕ್ಷಣಿಕವಾಗಿ ಪ್ರಗತಿಯನ್ನು ಹೊಂದಿದೆ ಎಂದರು.

ವಿದ್ಯಾರ್ಥಿಗಳು ಬರೀ ನಾಲ್ಕು ಗೋಡೆಗಳ ಮಧ್ಯೆಯಲ್ಲಿ ಇದ್ದು ತಮ್ಮ ಜ್ಞಾನಾರ್ಜನೆಗೆ ಹೆಚ್ಚಿನ ಒತ್ತು ನೀಡುವುದರೊಂದಿಗೆ ಈ ರೀತಿಯಾದ ಸಾಂಸ್ಕೃತಿಕವಾದ ಕಾರ್ಯಕ್ರಮಗಳಲ್ಲಿಯೂ ಸಹ ಭಾಗವಹಿಸಿ ಪಠ್ಯೇತರ ಚಟುವಟಿಕೆಗಳಲ್ಲಿಯೂ ಸಹಾ ಸಕ್ರಿಯವಾಗಿ ಪಾಲ್ಗೊಳ್ಳಬೇಕಿದೆ. ತಮ್ಮ ಮುಂದಿನ ಜೀವನಕ್ಕೆ ಈ ರೀತಿ ಯಾದ ಕಾರ್ಯಕ್ರಮಗಳು ಅಗತ್ಯವಾಗಿದೆ. ಸರ್ಕಾರ ನಮ್ಮ ಕಾಳೇಜಿಗೆ ಸ್ವಂತವಾದ ಕಟ್ಟಡವನ್ನು ನಿರ್ಮಾಣ ಮಾಡಲು ಆಸಕ್ತಿಯನ್ನು ತೋರಿದ್ದು ಬಾಲಕರ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಸುಮಾರು 3 ಎಕರೆ ಜಮೀನನ್ನು ನೀಡುವುದರೊಂದಿಗೆ 10 ಕೋಟಿ ರೂ.ಗಳನ್ನು ಸಹಾ ನೀಡಲಾಗಿದೆ ಎಂದು ಗುಡದೇಶ್ವರಪ್ಪ ತಿಳಿಸಿದರು.

ಇತ್ತೀಚಿನ ದಿನಮಾನದಲ್ಲಿ ಕಾಲೇಜಿಗೆ ರ್ಯಾಂಕ್‍ಗಳು ಬರುತ್ತಿವೆ. ಇದು ಮುಂದಿನ ದಿನಮಾನದಲ್ಲಿ ಹೆಚ್ಚಾಗಬೇಕಿದೆ. ನಮ್ಮ ವಿದ್ಯಾರ್ಥಿಗಳು ಆಸಕ್ತಿಯಿಂದ ಕಲಿಯಬೇಕಿದೆ. ಇಂದು ರ್ಯಾಂಕ್ ಪಡೆದ ವಿದ್ಯಾರ್ಥಿನಿಯರು ಬೇರೆ ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಿದ್ದಾರೆ. ಜ್ಞಾನಕ್ಕೆ ವಯಸ್ಸಿನ ನಿಭಂಧ ಇಲ್ಲ, ಯಾವ ವಯಸ್ಸಿನಲ್ಲಾದ್ದರೂ ಕಲಿಯಬಹುದಾಗಿದೆ. ದುಶ್ಚಟಗಳಿಂದ ದೂರ ಇರಿ, ವಿದ್ಯಾರ್ಥಿಗಳು ದೇಶ ಆಸ್ತಿ,ಈಗ ಸಿಕ್ಕಿರುವ ಸಮಯವನ್ನು ಸರಿಯಾದ ರೀತಿಯಲ್ಲಿ ಸದುಯೋಗ ಪಡಿಸಿಕೊಳ್ಳಿ, ಇದರಿಂದ ಮುಂದೆ ಅನುಕೂಲವಾಗಲಿದೆ ಎಂದರು.

ವಿದ್ಯಾರ್ಥಿ ದಿಸೆಯಲ್ಲಿ ಸುಖವನ್ನು ಸಾಧ್ಯವಾದಷ್ಟು ದೂರ ಇಡಿ ತಮ್ಮ ಅಭ್ಯಾಸದ ಕಡೆ ಗಮನ ನೀಡಿ, ಪ್ರಮಾಣಿಕತೆ ಶಿಸ್ತನ್ನು ಮೈಗೂಡಿಸಿಕೊಳ್ಳಿ, ಯಾವುದಕ್ಕೂ ಧೃತಿಗಡೆಬೇಡಿ, ಧೈರ್ಯದಿಂದ ಮುನ್ನುಗ್ಗುವ ಮನೋಭಾವ ಬೆಳಸಿಕೊಳ್ಳಿ, ವಿರೋಧಿಗಳಿಗೆ ತೆಲೆಕೆಡಿಸಿಕೊಳ್ಳಬೇಡಿ, ಕನ್ನಡ ಭಾಷೆಯ ಜೊತೆಯ ಸಾಧ್ಯವಾದಷ್ಟು ಇನ್ನೂ ಹಲವಾರು ಭಾಷೆಯನ್ನು ಕಲಿಯುವ ಪ್ರಯತ್ನ ಮಾಡಿ ಏಕೆಂದರೆ ಇದು ಸ್ಪರ್ಧಾತ್ಮಕ ಯುಗವಾಗಿದೆ, ಇಲ್ಲಿ ಕನ್ನಡ ಬಾಷೆಯೊಂದೆ ಸಾಧ್ಯವಾಗುವುದಿಲ್ಲ ಆದ್ದರಿಂದ ಆಂಗ್ಲ ಮತ್ತು ಹಿಂದಿ ಭಾಷೆಯನ್ನು ಕಲಿಯಿರಿ ಎಂದು ಗುಡದೇಶ್ವರಪ್ಪ ವಿದ್ಯಾರ್ಥಿನಿಯರಿಗೆ ಕರೆ ನೀಡಿದರು.

ಬಿ.ಕಾಂ ನಲ್ಲಿ 9ನೇ ರ್ಯಾಂಕ್ ಪಡೆದ ಆರ್.ಎಂ.ವಿದ್ಯುಲ್ಲತಾ ಮಾತನಾಡಿ ನಮ್ಮ ಜಿಲ್ಲೆಯಲ್ಲಿ ಸರ್ಕಾರಿ ಕಾಲೇಜುಗಳು ಖಾಸಗಿ ಕಾಲೇಜುಗಳಿಂತ ಏನು ಕಡಿಮೆ ಇಲ್ಲ ಇಲ್ಲೂ ಸಹಾ ಉತ್ತಮವಾದ ಪ್ರೋ.ಗಳು ಇದ್ದಾರೆ ಉತ್ತಮವಾದ ಭೋದನೆ ಸಿಗುತ್ತದೆ, ಸುಸಜ್ಜಿತವಾದ ಎಲ್ಲಾ ರೀತಿಯ ಸೌಲಭ್ಯಗಳು ಇವೆ. ನಮ್ಮ ಕಾಲೇಜುಗಳಲ್ಲಿಯೂ ರ್ಯಾಂಕ್ ಗಳು ಬರುತ್ತಿವೆ. ಉತ್ತಮವಾದ ವಿದ್ಯಾರ್ಥಿನಿಯರ ಸಂಖ್ಯೆಯೂ ಸಹಾ ಇದೆ ಎಂದರು.

ಪ್ರಾದ್ಯಾಪಕರಾದ ಮಂಜುನಾಥ್ ಮಾತನಾಡಿ, ವಿದ್ಯೆ ಸಾಧಕನ ಸೋತ್ತೇ ವಿನಹ ಸೋಮಾರಿಯ ಸೊತ್ತಲ್ಲ, ವಿದ್ಯಾರ್ಥಿ ಜೀವನದಲ್ಲಿ ಜ್ಞಾನಾರ್ಜನೆ ಹೆಚ್ಚಿನ ಒತ್ತು ನೀಡಬೇಕಿದೆ ಏಕೆಂದರೆ ಇದು ನಿಮ್ಮ ಮುಂದಿನ ಬದುಕಿನ ಗುರಿಯಾಗಿದೆ. ವಿದ್ಯಾವಂತರಿಗೆ ಎಲ್ಲೆ ಹೋದರು ಸಹಾ ಗೌರವ ಸಿಗುತ್ತದೆ. ಶ್ರದ್ದೆ, ಆಸಕ್ತಿ, ಪ್ರಮಾಣಿಕತೆಯಿಂದ ಜ್ಞಾನವನ್ನು ಸಂಪಾದಿಸಿ, ನಡೆ-ನುಡಿ ಅಚಾರ-ವಿಚಾರ ಸಮಸ್ಥಿತಿಯಲ್ಲಿ ಇರಬೇಕಿದೆ. ನೀವುಗಳು ಬೇರೆಯವರಿಗೆ ಆದರ್ಶರಾಗಬೇಕಿದೆ. ಇಂದಿನ ಟೆಷನ್ ಜೀವನ ವಿಲಾಸವಾಗುತ್ತಿದೆ ಅದರೆ ಇದು ವಿಕಾಸವಾಗಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಚನ್ನಕೇಶವ, ಬಸವರಾಜಪ್ಪ, ಬಿ.ಕಾಂ.ನಲ್ಲಿ 10ನೇ ರ್ಯಾಂಕ್ ಪಡೆದ ಸಿರಿಷಾ ಮಾತನಾಡಿದರು. ಇದೆ ಸಂದರ್ಭದಲ್ಲಿ ರ್ಯಾಂಕ್ ಪಡೆದ ಇಬ್ಬರು ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು.

ಪೂಜ ಭಾಗ್ಯಶ್ರೀ ಪ್ರಾರ್ಥಿಸಿದರೆ, ಸಾಯಿಪ್ರಿಯಾ ತಂಡ ನಾಡಗೀತೆ ಗಾಯನ ಮಾಡಿದರು. ಮಮತ ಸ್ವಾಗತಿಸಿದರು. ರಕ್ಷಿತಾ ಪ್ರಸ್ತಾವಿಕವಾಗಿ ಮಾತನಾಡಿದರು. ಉಷಾ ವಂದಿಸಿದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ | ಕ್ರೂಸರ್ ವಾಹನ ಪಲ್ಟಿ  ಓರ್ವ ಸಾವು, 13 ಮಂದಿಗೆ ಗಾಯ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ಮಾರ್ಚ್. 28 : ತಾಲ್ಲೂಕಿನ ತಳಕು ಪೋಲೀಸ್ ಠಾಣೆ ವ್ಯಾಪ್ತಿಯ ರಾಷ್ಟೀಯ ಹೆದ್ದಾರಿ 150 ಎ

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕ್ವಾರಿ ಅಂಡ್ ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಷನ್‍ಗೆ ಶಕ್ತಿ ತುಂಬಬೇಕಾಗಿದೆ : ಅಬ್ದುಲ್ ಮಾಜಿದ್

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,    ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 28  : ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಭೆ ನಡೆಸಿ ಹೊಸ ಅಸೋಸಿಯೇಷನ್‍ಗೆ ಶಕ್ತಿ ತುಂಬಬೇಕಾಗಿದೆ

ಪ್ರಹ್ಲಾದ್ ಜೋಶಿಗೆ ಬೆಂಬಲ ನೀಡಿದ ವಾಲ್ಮೀಕಿ ಸಮಾಜ

ಹುಬ್ಬಳ್ಳಿ: ಧಾರವಾಡದಲ್ಲಿ ಪ್ರಹ್ಲಾದ ಜೋಶಿ ಅವರ ಸ್ಪರ್ಧೆಗೆ ದಿಂಗಾಲೇಶ್ವರ ಶ್ರೀಗಳ ಬೆಂಬಲಿಗರು ವಿರೋಧ ವ್ಯಕ್ತಪಡಿಸುತ್ತಿರುವ ಬೆನ್ನಲ್ಲೇ ಪ್ರಹ್ಲಾದ ಜೋಶಿ ಅವರ ಬೆಂಬಲಕ್ಕೆ ವಾಲ್ಮೀಕಿ ಸಮಾಜದ ಶ್ರೀಗಳು ನಿಂತಿದ್ದಾರೆ. ಇಂದು ಪ್ರಹ್ಲಾದ್ ಜೋಶಿ ಅವರ ಪರವಾಗಿ

error: Content is protected !!