Connect with us

Hi, what are you looking for?

ಕ್ರೀಡಾ ಸುದ್ದಿ

ಆರ್ ಸಿಬಿ ಔಟ್….ಕೊಹ್ಲಿ ಎಮೋಷನಲ್ ಟ್ವೀಟ್…!

ಅಬು ಧಾಬಿ: ಐಪಿಎಲ್‌ 13 ನೇ ಸೀಜನ್ ನ ಮೊದಲಾರ್ಧ ಭಾಗದಲ್ಲಿ ಅದ್ಬುತ ಗೆಲುವುಗಳನ್ನು ಸಾಧಿಸಿದ ರಾಯಲ್ ಚಾಲೆಂಜರ್ಸ್ ತಂಡ ಇದೀಗ ಐಪಿಎಲ್‌ 13 ನೇ ಸೀಜನ್ ನಿಂದ ಹೊರನಡೆದಿದ್ದಾರೆ.

ಶುಕ್ರವಾರ ನಡೆದ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ಸೋತು ಟೂರ್ನಿಯಿಂದ ನಿರ್ಗಮಿಸಿದೆ. ಈ ಸಂದರ್ಭವಾಗಿ ಆರ್‌ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಟ್ವಿಟರ್‌ನಲ್ಲಿ ಭಾವನಾತ್ಮಕ ವಿದಾಯ ಸಂದೇಶ ನೀಡಿದ್ದಾರೆ. ಐಪಿಎಲ್ 2020 ಯಲ್ಲಿ ತಂಡದ ಎಲ್ಲಾ ಸದಸ್ಯರು ಉತ್ತಮ ಪ್ರದರ್ಶನ ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ.

ಆದರೆ, ಆರ್‌ಸಿಬಿಗೆ ಕೆಲವು ಪರಿಸ್ಥಿತಿಗಳು ಅನುಕೂಲಕರವಾಗಿರಲಿಲ್ಲ ಎಂದು ಕೊಹ್ಲಿ ವಿಷಾದ ವ್ಯಕ್ತಪಡಿಸಿದರು. ಆದರೆ, ತಂಡದ ಸದಸ್ಯರು ಮತ್ತು ಸಿಬ್ಬಂದಿಗಳ ಸಹಕಾರವನ್ನು ಎಂದಿಗೂ ಮರೆಯಲಾಗದು. ಅಭಿಮಾನಿಗಳು ನೀಡಿದ ಬೆಂಬಲಕ್ಕೆ ಕೊಹ್ಲಿ ಧನ್ಯವಾದ ತಿಳಿಸಿದ್ದಾರೆ. ಅಭಿಮಾನಿಗಳ ಬೆಂಬಲದೊಂದಿಗೆ ಮತ್ತಷ್ಟು ಹೆಚ್ಚಿನ ಶಕ್ತಿಯನ್ನು ಪಡೆದು ಮತ್ತೆ ಬರುವುದಾಗಿ ಹೇಳಿದ್ದಾರೆ.

ತಂಡದ ಸದಸ್ಯರು ಮತ್ತು ಸಹಾಯಕ ಸಿಬ್ಬಂದಿಯ ಫೋಟೋವನ್ನು ಕೊಹ್ಲಿ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಆದರೆ ಉತ್ತಮ ಆಟಗಾರರೊಂದಿಗೆ ಬಲಶಾಲಿಯಾಗಿರುವ ಆರ್‌ಸಿಬಿ ತಂಡವು ಈವರೆಗೂ ಐಪಿಎಲ್ ಕಪ್‌ ಗೆದ್ದಿಲ್ಲ.

Click to comment

Leave a Reply

Your email address will not be published. Required fields are marked *

You May Also Like

ಕ್ರೀಡಾ ಸುದ್ದಿ

ಟೀಂ ಇಂಡಿಯಾ ನಾಯಕ ವಿರಾಟ್ ಕೋಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ತಮ್ಮ ಮಗಳ ನಾಮಕರಣ ಮಾಡಿದ್ದಾರೆ. ತಮ್ಮ‌ ಮಗಳಿಗೆ ದುರ್ಗೆಯ ಹೆಸರನ್ನು ಇಟ್ಟಿದ್ದಾರೆ. https://www.instagram.com/p/CKvOEpOpEG_/?utm_source=ig_embed&ig_mid=AD4D3FC0-8CD0-418C-BBD1-A20F55D23BCD ಹೆಣ್ಣು ಮಗು ಹುಟ್ಟಿದಾಕ್ಷಣ ವಿರುಷ್ಕಾ...

ಪ್ರಮುಖ ಸುದ್ದಿ

ನವದೆಹಲಿ : ಅನುಷ್ಕಾ ಶರ್ಮಾ ಸದ್ಯ ತುಂಬು ಗರ್ಭೀಣಿ. ಜನವರಿಯಲ್ಲಿ ಮಗುವಾಗುವ ನಿರೀಕ್ಷೆ ಇದೆ. ವೈದ್ಯರು ಆ ತಿಂಗಳಿಗೆ ಡೇಟ್ ಕೊಟ್ಟಿದ್ದಾರೆ ಎನ್ನಲಾಗಿದೆ. ತುಂಬು ಗರ್ಭಿಣಿಯಾದರು ಅನುಷ್ಕಾ ಶರ್ಮಾ ತುಂಬಾ ಚಟುವಟಿಕೆಯಿಂದ ಇದ್ದಾರೆ....

ಕ್ರೀಡಾ ಸುದ್ದಿ

ದುಬೈ, ಸುದ್ದಿಒನ್,( ಸೆ.20) : ಐಪಿಎಲ್‌ನ 13 ನೇ ಆವೃತ್ತಿ ಅಂಗವಾಗಿ ಕಿಂಗ್ಸ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿಲವಿಲ ಒದ್ದಾಡುತ್ತಿದೆ.ಕೇವಲ 13 ರನ್‌ಗಳಿಗೆ ಮೂರು ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ....

ಕ್ರೀಡಾ ಸುದ್ದಿ

ಮುಂಬೈ:  ಮುಂಬರುವ ಐಪಿಎಲ್ 2020 ರ ಸಮಯದಲ್ಲಿ ರಿಲಯನ್ಸ್ ಜಿಯೋ ಕ್ರಿಕೆಟ್ ಪ್ರಿಯರಿಗಾಗಿ ಎರಡು ಹೊಸ ಪ್ರಿಪೇಯ್ಡ್ ಯೋಜನೆಗಳನ್ನು ಪ್ರಕಟಿಸಿದೆ. ಜಿಯೋ ಕ್ರಿಕೆಟ್ ಪ್ಲಾನ್ ಹೆಸರಿನಲ್ಲಿ 499 ಮತ್ತು 777 ರೂ ಪ್ಯಾಕ್‌ಗಳನ್ನು...

error: Content is protected !!