in ,

ರಾವತ್ ಬೆಂಗಳೂರಿಗೆ ಹಲವು ಬಾರಿ ಬಂದಿದ್ದರು : ಸಿಎಂ ಬೊಮ್ಮಾಯಿ

suddione whatsapp group join

ಬೆಂಗಳೂರು: ನಿನ್ನೆ ಹುತಾತ್ಮರಾದ ಬಿಪಿನ್ ರಾವತ್ ಅವರಿಗೆ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಇಂದು ಸಂತಾಪ ಸೂಚಿಸಿ, ಪುಷ್ಪ ನಮನ ಸಲ್ಲಿಸಿದ್ದಾರೆ. ಕರ್ನಾಟಕದ ಜೊತೆಗೆ ಅವರಿಗಿದ್ದ ನಂಟನ್ನ ತಿಳಿಸಿದ್ದಾರೆ.

ವಿಧಾನಸೌಧ ಬ್ಯಾಂಕ್ವೆಟ್ ಹಾಲ್ ನಲ್ಲಿ ಆಯೋಜಿಸಿದ್ದ @DRDO_India ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ನಿನ್ನೆ ಅಪಘಾತದಲ್ಲಿ ನಿಧನರಾದ ದೇಶದ ಸೇನಾ ಮುಖ್ಯಸ್ಥರಾಗಿದ್ದ ಜನರಲ್‌ ಬಿಪಿನ್ ರಾವತ್ ಅವರಿಗೆ ಪುಷ್ಪ ನಮನ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು ಎಂದು ಟ್ವೀಟ್ ಕೂಡ ಮಾಡಿದ್ದಾರೆ.

ಕಾರ್ಯಕ್ರಮದ ಬಳಿಕ ಮಾತನಾಡಿದ ಅವರು, ರಾವತ್ ಬೆಂಗಳೂರಿಗೆ ಸಾಕಷ್ಟು ಬಾರಿ ಬಂದಿದ್ದರು. ಅವರು ಕರ್ನಾಟಕದೊಂದಿಗೆ ಅಷ್ಟು ಅವಿನಾಭಾವ ಸಂಬಂಧ ಹೊಂದಿದ್ದರು. ಅಷ್ಟೆ ಅಲ್ಲ ಕೊಡಗಿನ ಜೊತೆಯೂ ಅವಿನಾಭಾವ ಸಂಬಂಧ ಹೊಂದಿದ್ದರು. ಅವರ ದೇಶ ಪ್ರೇಮವನ್ನ ಇಂದಿನ ಪೀಳಿಗೆ ಅನುಸರಿಸಬೇಕು. ಬಿಪಿನ್ ರಾವತ್ ನಿಧನದಿಂದ ಇಡೀ ದೇಶವೇ ದುಃಖದಲ್ಲಿದೆ ಎಂದಿದ್ದಾರೆ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಸೇನಾ ಸಿಬ್ಬಂದಿ ಪಾರ್ಥಿವ ಶರೀರ ರವಾನಿಸುತ್ತಿದ್ದ ಅಂಬುಲೆನ್ಸ್ ಅಪಘಾತ..!

ಬಿಪಿನ್ ರಾವತ್ ಬಗ್ಗೆ ಕೆಟ್ಟದಾಗಿ ಮಾತಾಡಿದ್ದವ ಅರೆಸ್ಟ್..!