ವರದಿ ಮತ್ತು ಫೋಟೋ ಕೃಪೆ
ಕೆ.ಎಂ. ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 10 : ಕೆಳಗೋಟೆ ಸಿ.ಕೆ.ಪುರದಲ್ಲಿರುವ ಶ್ರೀ ಚನ್ನಕೇಶವ ಸ್ವಾಮಿಯ ರಥೋತ್ಸವ ಹಾಗೂ ಕಲ್ಯಾಣೋತ್ಸವ ಫೆಬ್ರವರಿ 11 ಮತ್ತು 12 ರಂದು ನಡೆಯಲಿದೆ.
ಮಂಗಳವಾರ ಬೆಳಿಗ್ಗೆ 9 ಗಂಟೆಯಿಂದ ಅಂಕುರಾರ್ಪಣ, ಧ್ವಜಾರೋಹಣ, ಕಲಶ ಸ್ಥಾಪನೆ, ನವಗ್ರಹ ಪೂಜೆ, ಹೋಮ, ವಾಸ್ತು ಶಾಂತಿ ಹೋಮ, ರಾಕ್ಷೋಘ್ನ ಹೋಮ, ಮಧ್ಯಾಹ್ನ 3-30 ರಿಂದ 5-30 ರವರೆಗೆ ಕೆಳಗೋಟೆ ಸಿ.ಕೆ.ಪುರ ಬಡಾವಣೆಯ ಪ್ರಮುಖ ಬೀದಿಗಳಲ್ಲಿ ಶ್ರೀದೇವಿ ಭೂದೇವಿ ಸಹಿತ ಚನ್ನಕೇಶವಸ್ವಾಮಿಯ ಅಡ್ಡಪಲ್ಲಕ್ಕಿ ಮೆರವಣಿಗೆ. ಸಂಜೆ 6 ರಿಂದ 8-30 ರತನಕ ಸ್ವಾಮಿಯ ಕಲ್ಯಾಣೋತ್ಸವ ನೆರವೇರಲಿದೆ.
ರಾತ್ರಿ 8-30 ರಿಂದ 9 ಗಂಟೆಯವರೆಗೆ ಚನ್ನಕೇಶವಸ್ವಾಮಿಯ ಅಷ್ಟಾವಧಾನ ಪೂರ್ವಕವಾಗಿ ಉಯ್ಯಾಲೋತ್ಸವ ನಂತರ ಪ್ರಸಾದ ವಿನಿಯೋಗವಿರುತ್ತದೆ.
ಬುಧವಾರ ಮಧ್ಯಾಹ್ನ 11-50 ರಿಂದ 12-20 ರವರೆಗೆ ಶ್ರೀದೇವಿ ಭೂದೇವಿ ಸಹಿತ ಚನ್ನಕೇಶವಸ್ವಾಮಿಯ ರಥೋತ್ಸವ ವಿಜೃಂಭಣೆಯಿಂದ ನಡೆಯಲಿದೆ.
ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗುವಂತೆ ಚನ್ನಕೇಶವಸ್ವಾಮಿ ದೇವಸ್ಥಾನದ ಸಂಚಾಲಕರು ಹಾಗೂ ಹಿರಿಯ ನ್ಯಾಯವಾದಿ ಫಾತ್ಯರಾಜನ್ ವಿನಂತಿಸಿದ್ದಾರೆ.
ಬೆಂಗಳೂರು: ಬಿಜೆಪಿಯಲ್ಲಿ ಬಣ ರಾಜಕೀಯ ಜೋರಾಗಿತ್ತು. ವಿಜಯೇಂದ್ರ ಅವರು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಏರಿದಾಗಿನಿಂದಲೂ ಶಾಸಕ ಯತ್ನಾಳ್ ಬಣ ಆಂತರಿಕ ಯುದ್ಧವನ್ನು…
ಸುದ್ದಿಒನ್, ಚಿತ್ರದುರ್ಗ,ಫೆಬ್ರವರಿ.11 : ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಇಂದು (ಮಂಗಳವಾರ, ಫೆಬ್ರವರಿ. 11 ) ಹತ್ತಿ ಮಾರುಕಟ್ಟೆ…
ಮೈಸೂರು: ಕಳೆದ ಕೆಲವು ದಿನಗಳ ಹಿಂದಷ್ಟೇ ದೆಹಲಿಯ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರ ಬಿದ್ದಿದ್ದು, ಬಿಜೆಪಿ ಗೆಲುವು ಕಂಡಿದೆ. ಆದರೆ…
ಬೆಂಗಳೂರು: ಚಿನ್ನದ ದರ ದಿನೇ ದಿನೇ ಏರಿಕೆಯಾಗುತ್ತಲೇ ಇದೆ. ನಿನ್ನೆಯಷ್ಟೇ 35 ರೂಪಾಯಿ ಏರಿಕೆಯಾಗಿತ್ತು. ಇಂದು ನೋಡಿದ್ರೆ 87 ರೂಪಾಯಿ…
ಚಳ್ಳಕೆರೆ : ತಾಲ್ಲೂಕಿನ ತಳಕು ಹೋಬಳಿಯ ಕೋಡಿಹಳ್ಳಿ ಗ್ರಾಮದಲ್ಲಿ ನಡೆದ ಎರಡು ದಿನಗಳ ಕಾರ್ಯಕ್ರಮದಲ್ಲಿ ಗ್ರಾಮಿಣ ಜಾನಪದ ಶೈಲಿಯ ತಮಟೆ…
ಈ ರಾಶಿಯವರಿಗೆ ಅದೃಷ್ಟದ ಯೋಗಗಳ ಸುರಿಮಳೆ, ಮಂಗಳವಾರದ ರಾಶಿ ಭವಿಷ್ಯ 11 ಫೆಬ್ರವರಿ 2025 ಸೂರ್ಯೋದಯ - 6:48 AM…