ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಚಿತ್ರದುರ್ಗ, ಫೆ. 05 : ಸೂರ್ಯ ತನ್ನ ದಿಕ್ಕನ್ನ ಬದಲಿಸುವ ಕ್ರಮಕ್ಕೆ ರಥಸಪ್ತಮಿ ಎಂದು. ಈ ಅವಧಿಯಲ್ಲಿ ಸೂರ್ಯ ತನ್ನ ಪ್ರಖರತೆಯನ್ನು ಹೆಚ್ಚಿಸುವ ಕಾರಣ ಶಾಖ ಹೆಚ್ಚಾಗಿರುತ್ತದೆ. ಈ ಕಾರಣ ರಥಸಪ್ತಮಿಗೆ ವೈಜ್ಞಾನಿಕ ಜತೆಗೆ ಪುರಾಣಗಳ ಉಲ್ಲೇಖಗಳು ಉಂಟು ಎಂದು ಯೋಗಾಚಾರ್ಯ ಎಲ್.ಎಸ್ .ಚಿನ್ಮಯಾನಂದ ಅಭಿಪ್ರಾಯಪಟ್ಟರು.
ಜಿಲ್ಲಾ ಯೋಗ ಸಂಸ್ಥೆ ,ಚಿತ್ರದುರ್ಗ, ಚಿತ್ರದುರ್ಗ ರೋಟರಿ ಕ್ಲಬ್ ಫೋರ್ಟ್ ,ಇನ್ನರ್ವಿಲ್ ಕ್ಲಬ್ ಚಿತ್ರದುರ್ಗ ಫೋರ್ಟ್ ಹಾಗೂ ಚಿತ್ರದುರ್ಗ ವೀರಶೈವ ಸಮಾಜ ಇವರುಗಳ ಸಂಯುಕ್ತಾಶ್ರಯದಲ್ಲಿ ನಗರದ ನೀಲಕಂಠೇಶ್ವರ ಸ್ವಾಮಿ ಸಮುದಾಯವನಲ್ಲಿ ಇಂದು ಬೆಳಗ್ಗೆ ರಥಸಪ್ತಮಿ ಪ್ರಯುಕ್ತ 108 ಸೂರ್ಯ ನಮಸ್ಕಾರವನ್ನು ಹಮ್ಮಿಕೊಂಡಿದ್ದ ಸಂದರ್ಭದಲ್ಲಿ ಪ್ರಸ್ತುತ ದಿನದ ವಿಷಯ ಕುರಿತು ಮಾತನಾಡುತ್ತಾ ರಥಸಪ್ತಮಿಯನ್ನು ಅಚಲ ಸಪ್ತಮಿ, ಮಾಘಸಪ್ತಮಿ ಅಥವಾ ಸೂರ್ಯ ಸಪ್ತಮಿ ಎಂದು ಕರೆಯುವರು. ಬಹು ಹಿಂದಿನಿಂದ ಆಚರಿಸಿಕೊಂಡು ಬಂದಿರುವುದು ಒಂದು ವಿಶೇಷ. ನಮ್ಮ ರಾಷ್ಟ್ರದಲ್ಲಿ ಅಲ್ಲದೆ ಜಗತ್ತಿನ ಅನೇಕ ಭಾಗಗಳಲ್ಲಿಯೂ ರಥಸಪ್ತಮಿಯನ್ನು ಆಚರಿಸುವರು. 108 ನಾಮ ಜಪ ಅಲ್ಲದೆ ವಿಶೇಷವಾಗಿ ಯೋಗ ಸಾಧಕರು 108 ಸೂರ್ಯ ನಮಸ್ಕಾರಗಳನ್ನು ಸಾಮೂಹಿಕವಾಗಿ ಆಚರಿಸುತ್ತಾರೆ.ಸೂರ್ಯನು ಆರೋಗ್ಯದಾತ ಎಂದು ವೇದ ಅಲ್ಲದೆ ಪುರಾಣಗಳು ಸಹ ಸೂರ್ಯನನ್ನು ರೋಗನಿವಾರಕನೆಂದು ಸಾರಿವೆ. ಸರ್ವವ್ಯಾಧಿಗಳು, ಮಹಾವ್ಯಾಧಿಗಳು ನಿವಾರಣೆಯಾಗುತ್ತದೆ ಎಂದು ಜನರಲ್ಲಿ ನಂಬಿಕೆ .ಸೂರ್ಯ ನಮಸ್ಕಾರಗಳಿಂದಬಲಸಂವರ್ಧನೆ ,ಆರೋಗ್ಯ, ಆಯುಷ್ಯಾಭಿವೃದ್ದಿ. ಮನಃಶಕ್ತಿಸಂಚಯ, ಪ್ರಸನ್ನತೆ, ಉತ್ಸಾಹ, ಉಲ್ಲಾಸ ಮನಸ್ಸಿಗೆ ಆಗುತ್ತದೆ ಎಂಬುದಾಗಿ ತಿಳಿಸಿದರು.
ಚಿತ್ರದುರ್ಗ ಜಿಲ್ಲಾ ಯೋಗ ಸಂಸ್ಥೆಯ ಅಧ್ಯಕ್ಷರಾದ ಎಸ್.ಜಿ .ರಂಗನಾಥ್ ಮಾತನಾಡಿ ನಮ್ಮಲ್ಲಿನ ಅಂತಃಶಕ್ತಿಯನ್ನು ಅರಿಯಲು,ಉದ್ದೀಪನಗೊಳಿಸಲು ಯೋಗ ಸಹಕಾರಿ. ಈ ಬಗ್ಗೆ ಇನ್ನೂ ಹೆಚ್ಚಿನ ಅರಿವನ್ನು ತಿಳಿಯಲು ನಾನು ಅಭ್ಯಾಸ ಮಾಡುತ್ತಿರುವುದಾಗಿ ಈ ಸಂದರ್ಭದಲ್ಲಿ ಹೇಳಿದರು.
ಇನ್ನರ್ ವೀಲ್ ಕ್ಲಬ್ ಪೋರ್ಟ್‍ನ ಅಧ್ಯಕ್ಷಿಣಿ ಶ್ರೀಮತಿ ಲಕ್ಷ್ಮಿ ಮಹೇಶ್ ಸಂದರ್ಭ ಕುರಿತು ಮಾತನಾಡಿದರು.ಚಿತ್ರದುರ್ಗ ನಗರದ ವಿವಿಧ ಬಡಾವಣೆಯ ಯೋಗ ತರಬೇತುದಾರರು ಮತ್ತು ಯೋಗಭ್ಯಾಸಿಗಳು ಸೇರಿದಂತೆ ನೂರಾರು ಜನ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ 108 ನಮಸ್ಕಾರಗಳನ್ನು 45 ನಿಮಿಷದಲ್ಲಿ ಮುಗಿಸಿದವರು ಹಲವರು. ಅವರಲ್ಲಿ ವಿಮಲಾಕ್ಷಿ, ರುಕ್ಮಿಣಿ ,ಹೇಮಲತಾ ,ಅನುಸೂಯ, ವೀರಭದ್ರಸ್ವಾಮಿ, ಸಂಪತ್ ಕುಮಾರ್, ವಿನಾಯಕ, ದಿವ್ಯಾ, ವೆಂಕಟೇಶ್, ನೇತ್ರಾ, ಅವನಿ, ಶ್ರೀದೇವಿ, ನಿರ್ಮಲ, ಪರಶುರಾಮ್, ತನುಜಾ ,ಲಕ್ಷ್ಮಿ ,ವನಜಾಕ್ಷಿ ,ಭಾಗ್ಯಮ್ಮ ,ಮೋಹನ್, ವಿಜಯಕುಮಾರ್, ಕುಸುಮ ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ಜನ ಮಾಡಿದ್ದು ವಿಶೇಷವಾಗಿತ್ತು.
ಶಂಭುಲಿಂಗಪ್ಪ ಪ್ರಾರ್ಥಿಸಿದರೆ ಶಿಕ್ಷಣ ಇಲಾಖೆಯ ಸಂಪತ್ ಕುಮಾರ್ ಸ್ವಾಗತಿಸಿದರು. ಶಿಕ್ಷಕಿ ನಳಿನಾಕ್ಷಿ ಕಾರ್ಯಕ್ರಮ ನಿರ್ವಹಿಸಿದರು. ರೊಟೇರಿಯನ್ ಟಿ. ವೀರಭದ್ರಸ್ವಾಮಿ ವಂದಿಸಿದರು.
ಚಿತ್ರದುರ್ಗ.ಫೆ.05: ಜಿಲ್ಲಾಸ್ಪತ್ರೆಗೆ ಆಗಮಿಸುವ ರೋಗಿಗಳಿಗೆ ಆಯುಷ್ಮಾನ್ ಭಾರತ ಆರೋಗ್ಯ ಯೋಜನೆಯಡಿ ಸೂಕ್ತ ಚಿಕಿತ್ಸೆ ನೀಡಬೇಕು. ಆಸ್ಪತ್ರೆಯಲ್ಲಿ ಎಲ್ಲ ರೀತಿಯ ಮೂಲಭೂತ…
ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.…
ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.…
ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ಬಿವೈ ವಿಜಯೇಂದ್ರ ಅವರನ್ನು ಕೆಳಗೆ ಇಳಿಸಬೇಕೆಂದು ಯತ್ನಾಳ್ ಬಣ ಪ್ರಯತ್ನ ಪಡುತ್ತಿದೆ. ಇದರ ನಡುವೆ…
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ, ಫೆ.…
ಚಿತ್ರದುರ್ಗ ಫೆ. 05 : ಉತ್ತಮ ಪೋಷಕಾಂಶಗಳುಳ್ಳ ಸಮತೋಲನ ಆಹಾರ ಸೇವನೆಯಿಂದ ಉತ್ತಮ ಸದೃಡ ಆರೋಗ್ಯವಂತರಾಗಬಹುದು ಎಂದು ಬುದ್ಧನಗರ ಆರೋಗ್ಯ…