ರಶ್ಮಿಕಾ ಮಂದಣ್ಣ ನಿಂತ್ರು ಸುದ್ದಿ.. ಕುಂತ್ರು ಸುದ್ದಿ.. ಅದರಲ್ಲೂ ಟ್ರೋಲಿಗರಿಗಂತೂ ಭರಪೂರ ವಸ್ತು ವಿಷಯ. ಇಷ್ಟೆಲ್ಲಾ ಸುದ್ದಿಯಾಗುವುದಕ್ಕೆ ರಶ್ಮಿಕಾ ಕೂಡ ಕಾರಣ. ಮಾತನಾಡುವಾಗ ಟ್ರೋಲ್ ಆಗ್ತಾರೆ, ಹಾಕುವ ಬಟ್ಟೆಗಳು ಟ್ರೋಲ್ ಆಗುತ್ತೆ. ಈ ಬಾರಿಯೂ ಬಟ್ಟೆಯ ವಿಚಾರಕ್ಕೇನೆ ಸುದ್ದಿಯಾಗಿದ್ದಾರೆ.
ರಶ್ಮಿಕಾ ಮಂದಣ್ಣ ಹೈದ್ರಾಬಾದ್ ನಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ. ಈ ವೇಳೆ ಏರ್ಪೋರ್ಟ್ ನಲ್ಲಿ ಕಾಣಿಸಿಕೊಂಡ ಕೊಡಗಿನ ಕುವರಿ, ಎಲ್ಲರಿಗೂ ಕೈ ಬೀಸಿದ್ದಾರೆ. ಆಗ ಹೈಲೇಟ್ ಆಗಿದ್ದೇ ರಶ್ಮಿಕಾ ಮಂದಣ್ಣ ತೊಟ್ಟ ಟೀ ಶರ್ಟ್. ಈ ಟಾಪ್ ಅಷ್ಟು ಇಷ್ಟು ಸಾವಿರದ್ದಲ್ಲ. ಬರೊಬ್ಬರಿ ಎರಡು ಲಕ್ಷ ರೂಪಾಯಿ ಬೆಲೆಯ ಟಾಪ್ ಇದಾಗಿದೆ.
ಅಷ್ಟಕ್ಕೂ ಈ ಟಾಪ್ ಗೆ ಎರಡು ಲಕ್ಷ ಕೊಡುವಷ್ಟು ಅಂತ ಸ್ಪೆಷಲ್ ಏನಿದೆ ಅಂತ ಎಲ್ಲರೂ ಸರ್ಚ್ ಮಾಡುವುದಕ್ಕೆ ಶುರು ಮಾಡಿದ್ದಾರೆ. ಆದ್ರೆ ನೋಡುವುದಕ್ಕೂ ಸಿಕ್ಕಾಪಟ್ಟೆ ಸಿಂಪಲ್ ಆಗಿದೆ. ಈ Dolce & Gabbana ಹೆಸರಿನ ಪರ್ಫೆಕ್ಟ್ ಬೆಲೆ 2 ಲಕ್ಷದ 6 ಸಾವಿರ 336 ರೂಪಾಯಿ. ಇದನ್ನು ಕೇಳಿ ನೆಟ್ಟಿಗರು ಶಾಕ್ ಆಗಿದ್ದಾರೆ.
ಸುದ್ದಿಒನ್, ಚಿತ್ರದುರ್ಗ, ಜನವರಿ. 31 : ಬೆಳ್ಳಂಬೆಳಗ್ಗೆಯೇ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟ ಅಧಿಕಾರಿಗಳಿಗೆ ಚಳಿಯಲ್ಲೂ ಬೆವರುವಂತೆ ಮಾಡಿದ್ದಾರೆ. ಬೆಂಗಳೂರು, ರಾಯಚೂರು,…
ಇಂದಿನಿಂದ ಬಜೆಟ್ ಅಧಿವೇಶನ ಆರಂಭವಾಗಲಿದೆ. ಬೆಳಗ್ಗೆ 11 ಗಂಟೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮಾ ಅವರು ಜಂಟಿ ಅಧಿವೇಶನ ಉದ್ದೇಶಿಸಿ…
ಸುದ್ದಿಒನ್ :ಮಕ್ಕಳಿಗೆ ಟೀ ಮತ್ತು ಕಾಫಿ ಕೊಡುವ ಮೊದಲು ತಿಳಿದುಕೊಳ್ಳಬೇಕಾದ ಕೆಲವು ವಿಷಯಗಳಿವೆ. ಚಿಕ್ಕ ವಯಸ್ಸಿನಲ್ಲಿ ಚಹಾ ಅಥವಾ ಕಾಫಿ…
ಈ ರಾಶಿಯ ದಂಪತಿಗಳಿಗೆ ಅತಿಯಾದ ಕಿರುಕುಳದಿಂದ ಜಿಗುಪ್ಸೆ, ಶುಕ್ರವಾರದ ರಾಶಿ ಭವಿಷ್ಯ 31 ಜನವರಿ 2025 - ಸೂರ್ಯೋದಯ -…
ದಾವಣಗೆರೆ: ಇತ್ತೀಚೆಗೆ ಮೈಕ್ರೋ ಫೈನಾನ್ಸ್ ಕಾಟಕ್ಕೆ ರಾಜ್ಯದಲ್ಲಿ ಜೀವ ಕಳೆದುಕೊಂಡವರು ಅದೆಷ್ಟೋ. ಇದಕ್ಕೆ ಕಡಿವಾಣ ಹಾಕುವುದಕ್ಕೆ ಸರ್ಕಾರ ಕೂಡ ಸಭೆಗಳನ್ನ…
ಚಿತ್ರದುರ್ಗ. ಜ.30: ಮಹಾತ್ಮಾ ಗಾಂಧೀಜಿಯವರು ಹುತಾತ್ಮರಾದ ದಿನವಾದ ಜ. 30 ರಂದು ಸರ್ವೋದಯ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಈ ನಿಮಿತ್ತ ಅಪರ…