in

ಕೊನೆ ಘಳಿಗೆಯಲ್ಲಿ ಅಂತಿಮ ದರ್ಶನ ಪಡೆದ ರಶ್ಮಿಕಾ ಮಂದಣ್ಣ..!

suddione whatsapp group join

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಎಲ್ಲರನ್ನ ಅಗಲಿದ್ದಾರೆ. ಇಡೀ ಕರ್ನಾಟಕ ಜನತೆ ಅವರಿಲ್ಲದ ವಿಚಾರವನ್ನ ಅರಗಿಸಿಕೊಳ್ಳೋದಕ್ಕೂ ಆಗ್ತಿಲ್ಲ. ಆ ವಿಚಾರದಿಂದ ಹೊರ ಬರೋದಕ್ಕೂ ಆಗ್ತಿಲ್ಲ. ಕನ್ನಡ ಇಂಡಸ್ಟ್ರಿ ಮಾತ್ರ ಅಲ್ಲ ಬೇರೆ ಇಂಡಸ್ಟ್ರಿಯವರು ಅಪ್ಪು ಅವರನ್ನ ಎಷ್ಟು ಪ್ರೀತಿಸ್ತಾ ಇದ್ರು ಅನ್ನೋದು ಮತ್ತೆ ಮತ್ತೆ ಸಾಬೀತಾಗಿದೆ.

ಪುನೀತ್ ನಿಧ‌ನರಾಗಿದ್ದಾರೆ ಅನ್ನೋ ಸುದ್ದಿ ಕೇಳಿಯೇ ಬೇರೆ ಇಂಡಸ್ಟ್ರಿಯವರಿಗೂ ಶಾಕ್ ಆಗಿದೆ. ನಿನ್ನೆಯಿಂದಾನೇ ಚಿರಂಜೀವಿ, ವಿಕ್ಟರಿ ವೆಂಕಟೇಶ್, ದಗ್ಗುಬಾಟಿ, ಅಲಿ ಸೇರಿದಂತೆ ಅನೇಕ ಸ್ಟಾರ್ ನಟರು ಪುನೀತ್ ಅಂತಿಮ ದರ್ಶನ ಪಡೆದಿದ್ದಾರೆ. ಅವರಿಲ್ಲದ ನೋವನ್ನ ತೋಡಿಕೊಂಡಿದ್ದಾರೆ.

ಇದೀಗ ಕೊನೆ ಘಳಿಗೆಯಲ್ಲಿ ರಶ್ಮಿಕಾ ಮಂದಣ್ಣ ಅಪ್ಪು ಅಂತಿಮ ದರ್ಶನ ಪಡೆದಿದ್ದಾರೆ. ಕಂಟಡೀರವ ಸ್ಟುಡಿಯೋಗೆ ಬಂದ ರಶ್ಮಿಕಾ, ಕೈ ಮುಗಿದು ನಮಸ್ಕರಿಸಿ, ದರ್ಶನ ಮಾಡಿದ್ದಾರೆ. ಅಂಜನೀಪುತ್ರ ಸಿನಿಮಾದಲ್ಲಿ ಪುನೀತ್ ಜೊತೆ ರಶ್ಮಿಕಾ ನಟಿಸಿದ್ದರು.

What do you think?

-10 Points
Upvote Downvote

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಅಪ್ಪ-ಅಮ್ಮನ ಪೂಜೆಗೆ ಕರೆದುಕೊಂಡು ಬರ್ತಿದ್ದ..ಈಗ ಅವನಿಗೆ ಪೂಜೆ ಮಾಡಬೇಕು : ರಾಘವೇಂದ್ರ ರಾಜ್‍ಕುಮಾರ್..!

ಅಪ್ಪು ವಿಚಾರದಲ್ಲಿ ಮಂತ್ರಾಲಯದಲ್ಲಿ ಅಂದು ನಡೆದ ಘಟನೆಯ ರಹಸ್ಯವೇನು..?