
ಇವತ್ತು ಪ್ರೇಮಿಗಳ ದಿನಾಚರಣೆ. ಎಲ್ಲರು ಅವರವರ ಪ್ರೇಮಿಗಳಿಗೆ ಪ್ರೇಮ ನಿವೇದನೆ ಮಾಡಿಕೊಂಡು ಇವತ್ತಿನ ದಿನವನ್ನು ಎಂಜಾಯ್ ಮಾಡಿದ್ದಾರೆ. ಇವತ್ತು ರಶ್ಮಿಕಾ ಮಂದಣ್ಣ ಕೂಡ ಪ್ರೇಮಿಗಳ ದಿನಾಚರಣೆಯನ್ನು ಆಚರಿಸಿಕೊಂಡಿದ್ದಾರೆ. ಅದರ ಜೊತೆಗೆ ತನ್ನ ಪ್ರೇಮಿ ಯಾರು ಎಂಬುದನ್ನು ತೋರಿಸಿದ್ದಾರೆ.

ರಶ್ಮಿಕಾ ಮಂದಣ್ಣ ಅಂದ್ರೆ ಒಂದುಷ್ಟು ಕುತೂಹಲವಿದ್ದೆ ಇದೆ. ಅದರಲ್ಲೂ ಅವರು ಯಾರ ಜೊತೆಗೆ ಲವ್ವಲ್ಲಿದ್ದಾರೆ..? ಅವರ ಪ್ರೇಮಿ ಯಾರು..? ಯಾರನ್ನು ಮದುವೆಯಾಗುತ್ತಾರೆ ಎಂಬ ವಿಚಾರಗಳು ಬಹಳ ಕುತೂಹಲವನ್ನು ಹುಟ್ಟು ಹಾಕಿವೆ. ಇದೀಗ ರಶ್ಮಿಕಾ ಮಂದಣ್ಣ ಆ ಕುತೂಹಲ ತಣಿಸುವ ಕೆಲಸ ಮಾಡಿದ್ದಾರೆ.
ಪ್ರೇಮಿಗಳ ದಿನಕ್ಕಾಗಿ ವಿಶೇಷ ವಿಡಿಯೋವೊಂದನ್ನು ಹಂಚಿಕೊಂಡು, ಆ ಮೂಲಕ ಪ್ರೇಮಿಯ ಬಗ್ಗೆಯೂ ಮಾಹಿತಿ ನೀಡಿದ್ದಾರೆ. ರಶ್ಮಿಕಾ ಮಂದಣ್ಣ ಸದ್ಯ ತಾನಿಷ್ಟಪಡುವ ಔರಾ ಜೊತೆಗೆ ವ್ಯಾಲಂಟೈನ್ಸ್ ಡೇ ಸೆಲೆಬ್ರೇಟ್ ಮಾಡಿದ್ದಾರೆ. ಔರಾ ಅಂದ್ರೆ ರಶ್ಮಿಕಾ ಮಂದಣ್ಣ ಫೇವರಿಟ್ ಶ್ವಾನ. ಈ ಶ್ವಾನ, ರಶ್ಮಿಕಾ ಮಂದಣ್ಣ ಬೆಡ್ ರೂಮಿಗೆ ಬಂದು ತರಲೇ ಮಾಡಿರುವ ವಿಡಿಯೋ ಹಂಚಿಕೊಂಡಿರುವ ರಶ್ಮಿಕಾ, ಪ್ರೇಮಿಗಳ ದಿನ ಶುಭಾಶಯ ಕೋರಿದ್ದಾರೆ.

GIPHY App Key not set. Please check settings