
ಇತ್ತಿಚೆಗೆ ಭಾರತೀಯರೆಲ್ಲ ಹೆಮ್ಮೆ ಪಡುವಂತೆ ಮಾಡಿದೆ RRR ಸಿನಿಮಾ. ಆಸ್ಕರ್ ಅವಾರ್ಡ್ ಗೆದ್ದು ಎಲ್ಲರೂ proud feel ಮಾಡುವಂತೆ ಮಾಡಿದೆ. ಆಸ್ಕರ್ ಅವಾರ್ಡ್ ನೀಡುವಾಗ ವೇದಿಕೆ ಮೇಲೆ ನಾಟು ನಾಟು ಹಾಡಿಗೆ ಪ್ರದರ್ಶನ ನೀಡಲಾಗಿತ್ತು. ಆದ್ರೆ ಆ ಪ್ರದರ್ಶನದಲ್ಲಿ ರಿಯಲ್ ಸ್ಟಾರ್ ಗಳು ಕಾಣಿಸಿರಲಿಲ್ಲ. ರಾಮ್ ಚರಣ್ ಮತ್ತು ಜೂ. ಎನ್ ಟಿ ಆರ್ ಹೆಜ್ಜೆ ಹಾಕಲಿಲ್ಲ. ನೋಡುಗರಿಗೆ ನಿರೀಕ್ಷೆಯೂ ಇತ್ತು. ಆದ್ರೆ ಯಾಕೆ ಎಂಬ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ.

ನಾಟು ನಾಟು ಹಾಡು ಸಿನಿಮಾದಲ್ಲಿ ಮಾಡಲು ಸುಮಾರು ಎರಡು ತಿಂಗಳುಗಳ ಕಾಲ ರಿಹರ್ಸಲ್ ಮಾಡಲಾಗಿದೆ. ಈ ಒಂದು ಸಾಂಗ್ ಗಾಗಿ ಸುಮಾರು 15 ದಿನಗಳ ಕಾಲ ಮೀಸಲಿಡಲಾಗಿದೆ. ಹೀಗಾಗಿ ಆ ಹಾಡು ಅದ್ಭುತವಾಗಿ ಮೂಡಿ ಬಂದಿದ್ದು, ಆಸ್ಕರ್ ಅವಾರ್ಡ್ ಕೂಡ ತನ್ನದಾಗಿಸಿಕೊಂಡಿದೆ. ಆದ್ರೆ ರಿಯಲ್ ಸ್ಟಾರ್ ಗಳು ಯಾಕೆ ಪರ್ಫಾಮ್ ಮಾಡಲಿಲ್ಲ ಎಂಬುದಕ್ಕೆ ಬಾಲಿವುಡ್ ನಿರ್ಮಾಪಕ ರಾಜ್ ಕಪೂರ್ ತಿಳಿಸಿದ್ದಾರೆ.
ಈ ಹಾಡಿಗೆ ಡ್ಯಾನ್ಸ್ ಮಾಡುವುದಕ್ಕೆ ರಾಮ್ ಚರಣ್ ಹಾಗೂ ಜೂ. NTR ಅವರನ್ನೇ ಕೇಳಲಾಗಿತ್ತು. ಆದರೆ ಅವರು ಲೈವ್ ಪ್ರದರ್ಶನ ನೀಡಲು ರೆಡಿ ಇರಲಿಲ್ಲ. ಉತ್ತಮ ಪ್ರದರ್ಶನ ನೀಡಬೇಕೆಂದರೆ ಸಿನಿಮಾದಲ್ಲಿದ್ದ ತಂಡವೇ ಬಂದರೆ ಮಾತ್ರ ಸಾಧ್ಯ ಅಂತ ಹೇಳಿದ್ರು. ಆದ್ರೆ ಇಡೀ ತಂಡದವರಿಗೆ ವೀಸಾ ಸಮಸ್ಯೆ ಎದುರಾಯಿತು. ಜೊತೆಗೆ ಆಸ್ಕರ್ ವೇದಿಕೆ ಮೇಲೆ ಆ ಡ್ಯಾನ್ಸ್ ಮಾಡಲು ಬಹಳಷ್ಟು ರಿಹರ್ಸಲ್ ಬೇಕಿತ್ತು. ಅಷ್ಟು ಸಮಯ ಆ ಇಬ್ಬರಿಗೆ ಇರಲಿಲ್ಲ. ಡ್ಯಾನ್ಸ್ ಮಾಡಿದ ಟೀಂ ಕೇವಲ 18 ಗಂಟೆಯಲ್ಲಿ ಪ್ರಾಕ್ಟೀಸ್ ಮಾಡಿ ಶೋ ನೀಡಿದೆ ಎಂದು ತಿಳಿಸಿದ್ದಾರೆ.
GIPHY App Key not set. Please check settings