ಮೈಸೂರು: ಸಿದ್ದರಾಮಯ್ಯ ಅವರ ಪುತ್ರ ರಾಕೇಶ್ 2016ರಲ್ಲಿಯೇ ನಿಧನರಾಗಿದ್ದರು. ಬಳಿಕ ಸೊಸೆ, ಮೊಮ್ಮಗ ಎಲ್ಲಿಯೂ ಅಷ್ಟಾಗಿ ಕಾಣಿಸಿಕೊಂಡಿರಲಿಲ್ಲ. ಆದರೆ ಇದೀಗ ರಾಕೇಶ್ ಅವರ ಮಗ ತಾತನ ಪ್ರಚಾರ ಕಾರ್ಯದಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನು ಕಂಡು ಸಿದ್ದರಾಮಯ್ಯ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ.
ಮೈಸೂರು ಏರ್ಪೋರ್ಟ್ ನಲ್ಲಿ ಧವನ್ ರಾಕೇಶ್ ಎಲ್ಲರ ಗಮನ ಸೆಳೆದಿದ್ದರು. ಮೊಮ್ಮಗನನ್ನು ನೋಡಿದ ಖುಷಿಯಲ್ಲಿ ಸಿದ್ದರಾಮಯ್ಯ, ಧವನ್ ಬಗ್ಗೆ ಮಾತನಾಡಿದ್ದಾರೆ. “ಇಡೀ ಚಾಮುಂಡೇಶ್ವರಿ, ವರುಣಾ ಕ್ಷೇತ್ರವನ್ನು ಅವರ ಅಪ್ಪ ರಾಕೇಶ್ ನಿರ್ವಹಿಸುತ್ತಿದ್ದ. ರಾಕೇಶ್ ಇಡೀ ಜಿಲ್ಲಾ ರಾಜಕೀಯ ನೋಡಿಕೊಳ್ಳುತ್ತಿದ್ದ. ಎಷ್ಟೇ ಆಗಲಿ, ಅಪ್ಪನ ರಕ್ತ ಅಲ್ಲವೆ.
ಮೊಮ್ಮಗ ರಾಜಕೀಯ ಆಸಕ್ತಿ ತೋರಿಸುವುದು ಸಹಜವಾಗಿಯೇ ಖುಷಿಯಾಗುತ್ತೆ. ಮೊಮ್ಮಗನಿಗೆ ರಾಜಕೀಯ ಆಸಕ್ತಿ ಬಂದಿದೆ. ಅವನಾಗಿಯೇ ಇಷ್ಟಪಟ್ಟು ಮೈಸೂರಿಗೆ ಬಂದಿದ್ದಾನೆ. ನಾನು ನಮ್ಮ ಮನೆಯವರನ್ನು ಯಾರನ್ನು ಪ್ರಚಾರಕ್ಕೆ ಬನ್ನಿ ಎಂದು ಕರೆಯಲ್ಲ. ಅವರಾಗಿಯೇ ಬಂದರೆ ಖುಷಿ ಎಂದಿದ್ದಾರೆ.





GIPHY App Key not set. Please check settings