ನಿನ್ನೆ ರಾತ್ರಿಯಷ್ಟೇ ರಿಲೀಸ್ ಆಗಿದ್ದ ರಜತ್, ವಿನಯ್ ಮತ್ತೆ ಅರೆಸ್ಟ್ ; ಕಾರಣವೇನು..?

ಬೆಂಗಳೂರು; ಬಿಗ್ ಬಾಸ್ ಮಾಜಿ ಸ್ಪರ್ಧಿಗಳಾದ ರಜತ್ ಹಾಗೂ ವಿನಯ್ ಗೌಡ ನಿನ್ನೆಯಷ್ಟೇ ಪೊಲೀಸರ ವಶದಲ್ಲಿದ್ದರು. ಬಳಿಕ ರಾತ್ರಿಯೇ ಅವರನ್ನು ಬಿಟ್ಟು ಕಳುಹಿಸಿ, ಬೆಳಗ್ಗೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದರು. ಇದೀಗ ಮತ್ತೆ ಪೊಲೀಸರು ಮತ್ತೆ ಬಂಧಿಸಿದ್ದಾರೆ.

ರಜತ್ ಹಾಗೂ ವಿನಯ್ ಗೌಡ ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಒಂದನ್ನ ಶೇರ್ ಮಾಡಿದ್ದರು. ಲಾಂಗ್ ಹಿಡಿದು ಸ್ಟೈಲ್ ಆಗಿ ವಾಕ್ ಮಾಡುತ್ತಾ, ಪೋಸ್ ನೀಡಿದ್ದರು. ಹೀಗಾಗಿ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದು, ವುಚಾರಣೆ ನಡೆಸಿ, ಬಿಟ್ಟು ಕಳುಹಿಸಿದ್ದರು. ಆದರೆ ಸೋಷಿಯಲ್ ಮೀಡಿಯಾದಲ್ಲಿ ರಜತ್ ಕಿಶನ್ ಹಾಗೂ ವಿನಯ್ ಗೌಡ ಪೊಲೀಸ್ ತನಿಖೆಯಲ್ಲಿ ನೀಡಿರುವ ಮಚ್ಚು ಬೇರೆಯಾಗಿತ್ತು, ರೀಲ್ಸ್ ನಲ್ಲಿ ತೋರಿಸಿರುವ ಮಚ್ಚು ಬೇರೆಯಾಗಿತ್ತು ಎಂಬ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಪೊಲೀಸರು ಇಬ್ಬರನ್ನು ಮತ್ತೆ ಅರೆಸ್ಟ್ ಮಾಡಿದ್ದಾರೆ.

ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ನಕಲಿ ಲಾಂಗ್ ನೀಡಿರುವುದು ಬೆಳಕಿಗೆ ಬಂದಿತ್ತು. ಅಸಲಿ ಲಾಂಗ್ ಅಕ್ಷಯ ಸ್ಟುಡಿಯೋದಲ್ಲಿ ಇದೆ ಎಂಬ ಹೇಳಿಕೆ ನೀಡಿದ್ದರಿಂದ ಪೊಲೀಸರು ಇಬ್ಬರನ್ನು ಅಕ್ಷಯ ಸ್ಟುಡಿಯೋಗೆ ಕರೆದುಕೊಂಡು ಹೋಗಿ ಸ್ಥಳ ಮಹಜರು ಮಾಡಿದ್ದಾರೆ. ತನಿಖೆಯಲ್ಲಿ ಸಾಕ್ಷ್ಯ ನಾಶ ಮಾಡುವ ಹಿನ್ನೆಲೆ ವಿನಯ್ ಹಾಗೂ ರಜತ್ ಅವರನ್ನು ಮತ್ತೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈಗ ಪೊಲೀಸರು ಆರೋಪಿಗಳನ್ನು ನೇರವಾಗಿ ಕೋರ್ಟ್ ಗೆ ಹಾಜರು ಪಡಿಸುತ್ತಾರೆ. ಒರಿಜಿನಲ್ ಲಾಂಗ್ ಸಿಗದೆ ಹೋದಲ್ಲಿ ಬಿಗ್ ಬಾಸ್ ಮಾಜಿ ಸ್ಪರ್ಧಿಗಳಿಗೆ ಸಂಕಷ್ಟ ತಪ್ಪಿದ್ದಲ್ಲ. ಮೊದಲೇ ಪೊಲೀಸರಿಗೆ ನಿಜವಾದ ಲಾಂಗ್ ಕೊಡದೆ ಯಾಮಾರಿಸಿದ್ದಾರೆ.

suddionenews

Recent Posts

ಹನಿಟ್ರ್ಯಾಪ್ ಪ್ರಕರಣದಲ್ಲಿ ದೊಡ್ಡ ಬೆಳವಣಿಗೆ ; ರಾಜಣ್ಣರಿಗೆ ಬಹಿರಂಗ ಬೆಂಬಲ ನೀಡಿದ ದಳಪತಿಗಳು..!

ಬೆಂಗಳೂರು; ರಾಜ್ಯ ರಾಜಕಾರಣದಲ್ಲಿ ಹನಿಟ್ರ್ಯಾಪ್ ಪ್ರಕರಣ ಬಾರೀ ಸದ್ದು ಮಾಡ್ತಾ ಇದೆ. ಹನಿಟ್ರ್ಯಾಪ್ ಮಾಡಲು ಬಂದ ನೀಲಿ ಸುಂದರಿ ಬಗ್ಗೆ…

22 minutes ago

ಎಷ್ಟೇ ಮಾತ್ರೆ ನುಂಗಿದರು ಕೆಮ್ಮು ಕಡಿಮೆ ಆಗ್ತಿಲ್ವಾ..? ಹಾಗಾದ್ರೆ ಈ ರೀತಿ ಮಾಡಿ

ಸಾಮಾನ್ಯವಾಗಿ ಕೆಲವೊಬ್ಬರಿಗೆ ಕೆಮ್ಮು ಆದ್ರೆ ತಿಂಗಳು ಗಟ್ಟಲೇ‌ ಕಡಿಮೆ ಆಗುವುದೇ ಇಲ್ಲ. ಎಷ್ಟೇ ಮಾತ್ರೆಗಳನ್ನ ನುಂಗಿದರು ವಾಸಿಯಾಗುವುದೇ ಇಲ್ಲ. ಕೆಮ್ಮಿ…

7 hours ago

ಈ ರಾಶಿಯವರಿಗೆ ಕಷ್ಟಕಾಲದಲ್ಲಿ ಪತ್ನಿಯ ಧನ ಸಹಾಯದಿಂದ ಮರುಜೀವ

ಈ ರಾಶಿಯವರಿಗೆ ಕಷ್ಟಕಾಲದಲ್ಲಿ ಪತ್ನಿಯ ಧನ ಸಹಾಯದಿಂದ ಮರುಜೀವ, ಈ ರಾಶಿಯವರಿಗೆ ಪಿತ್ರಾರ್ಜಿತ ಆಸ್ತಿ ವಿಳಂಬ, ಈ ರಾಶಿಯವರು ತುಂಬಾ…

8 hours ago

ದಿಢೀರನೆ ಆಸ್ಪತ್ರೆಗೆ ಭೇಟಿ ನೀಡಿದ ಸಿಎಂ ಸಿದ್ದರಾಮಯ್ಯ..!

ಬೆಂಗಳೂರು; ಕಳೆದ ಕೆಲವು ದಿನಗಳಿಂದ ಮಂಡಿ ನೋವಿನ ಸಮಸ್ಯೆಯಿಂದ ಸಿಎಂ ಸಿದ್ದರಾಮಯ್ಯ ಅವರು ಬಳಲುತ್ತಿದ್ದಾತೆ. ವೀಲ್ ಚೇರ್ ಮೇಲೆಯೇ ಓಡಾಟ…

16 hours ago

ಉದ್ಯೋಗ ವಾರ್ತೆ : ಮಾರ್ಚ್ 28ರಂದು ನೇರ ನೇಮಕಾತಿ ಸಂದರ್ಶನ

ಚಿತ್ರದುರ್ಗ. ಮಾ.25: ಚಿತ್ರದುರ್ಗ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ಇದೇ ಮಾರ್ಚ್ 28ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 2…

18 hours ago

ಹೊಸದುರ್ಗ : ಡಿಸಿಸಿ ಬ್ಯಾಂಕ್ ಉದ್ಯೋಗಿ ಲೋಕಾಯುಕ್ತ ಬಲೆಗೆ

ಸುದ್ದಿಒನ್, ಹೊಸದುರ್ಗ, ಮಾರ್ಚ್. 25 : ರೈತರು ಸಾಲಕ್ಕಾಗಿ ಸಲ್ಲಿಸಿದ ಅರ್ಜಿಗಳನ್ನು ಪರಿಶೀಲಿಸಿ ಮುಂದಿನ ಕ್ರಮಕೈಗೊಳ್ಳಲು 15000 ರೂಪಾಯಿ ಲಂಚ…

20 hours ago