ಚಿತ್ರದುರ್ಗ ಜಿಲ್ಲೆಯಾದ್ಯಂತ ಕ್ಲಬ್‌ಗಳ ಮೇಲೆ ದಾಳಿ : ನಗದು ವಶ, ಹಲವರ ಬಂಧನ

 

ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 20 : ಜಿಲ್ಲೆಯಾದ್ಯಂತ ಇಸ್ಪೀಟು ಜೂಜು ಅಡ್ಡೆಗಳ ಮೇಲೆ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿ 28 ಮಂದಿ ಜೂಜುಕೋರರನ್ನು ಬಂಧಿಸಿ ಅವರಿಂದ ಒಟ್ಟು 96,780 ರೂಪಾಯಿಗಳ ನಗದು ವಶಪಡಿಸಿಕೊಂಡಿದ್ದಾರೆ.

ಇಸ್ಪೀಟು ಜೂಜಾಟ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಎಸ್.ಪಿ. ರಂಜಿತ್ ಕುಮಾರ್ ಬಂಡಾರು ಅವರ ನಿರ್ದೇಶನದ ಮೇರೆಗೆ ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಈ ಕೆಳಕಂಡ ಮನೋರಂಜನಾ ಕ್ಲಬ್‌ಗಳ ಮೇಲೆ ಅನಿರೀಕ್ಷಿತವಾಗಿ ದಾಳಿ ನಡೆಸಲಾಗಿದೆ.

1) ದುರ್ಗದ ಸಿರಿ ರಿಕ್ರಿಯೇಷನ್ ಇನ್ಸ್‌ಟ್ಯೂಟ್, ತುರುವನೂರು ರಸ್ತೆ, ಚಿತ್ರದುರ್ಗ
2) ಸಿಟಿ ಇನ್ಸಿಟ್ಯೂಟ್ ಕ್ಲಬ್. ಚಿತ್ರದುರ್ಗ,
ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯ
3) ಪೋರ್ಟ್ ಸಿಟಿ ರಿಕ್ರಿಯೇಷನ್ ಕ್ಲಬ್, ಹೋಟೆಲ್ ಬಿಗ್ ಬಾಸ್ ಕ್ಲಬ್, ಜೆ.ಎಂ.ಐ.ಟಿ ಸರ್ಕಲ್, ಚಿತ್ರದುರ್ಗ,
4) ಪವರ್ ರಿಕ್ರಿಯೇಷನ್ ಕ್ಲಬ್ ಚಳ್ಳಕೆರೆ ಸರ್ಕಲ್. ಚಿತ್ರದುರ್ಗ ನಗರ,
ಹೊಳಲ್ಕೆರೆ ಠಾಣಾ ವ್ಯಾಪ್ತಿಯ
5) ಕರ್ನಾಟಕ ಫ್ಯಾಮಿಲಿ ಅಸೋಸಿಯೇಷನ್ ಮನೋರಂಜನಾ ಕೇಂದ್ರ, ಜೈಪುರ, ಹೊಳಲ್ಕೆರೆ ತಾಲ್ಲೂಕು,
6] ಗಾಡ್ ಗಿಫ್ಟ್ ರಿಕ್ರಿಯೇಷನ್ ಮನೋರಂಜನಾ ಕೇಂದ್ರ ಅರೇಹಳ್ಳಿ ರೈಲ್ವೆ ಗೇಟ್, ಹೊಳಲ್ಕೆರೆ ತಾಲ್ಲೂಕು
7) ಫ್ರೆಂಡ್ಸ್ ಕ್ರೀಡಾ ಮತ್ತು ಮನೋರಂಜನಾ ಕೇಂದ್ರ, ಚಿಕ್ಕಜಾಜೂರು ಕ್ರಾಸ್, ಹೊಳಲ್ಕೆರೆ ಪಟ್ಟಣ
8) ಚಳ್ಳಕೆರೆ ಟೌನ್ ಅಸೋಸಿಯೇಷನ್ ಕ್ಲಬ್
9) ನಾಯಕನಹಟ್ಟಿ ಆಸೋಸಿಯೇಷನ್ ಕ್ಲಬ್
10)ಚಳ್ಳಕೆರೆ ನಿವೃತ್ತ ನೌಕರರ ಮನೋರಂಜನ ಕ್ಲಬ್
11) ಚಳ್ಳಕೆರೆ ಹಿರಿಯ ನಾಗರೀಕರ ಮನೋರಂಜನಾ ಕ್ಲಬ್ 12) ಚಳ್ಳಕೆರೆ ಟೌನ್ ಕ್ಲಬ್
13) ಮೊಳಕಾಲ್ಕೂರು ಸಾಂಸ್ಕೃತಿಕ ಸಂಘ ಕ್ಲಬ್ ಮತ್ತು ವಾಚನಾಲಯ
14] ಸರ್ಕಾರಿ ನೌಕರರ ಫ್ರೆಂಡ್ಸ್ ಮನೋರಂಜನಾ ಕೇಂದ್ರ
15) ನೌಕರರ ವಾಚನಾಲಯ ಹಾಗೂ ಸಾಂಸ್ಕೃತಿಕ ಸಂಘ(ರಿ) ರಾಂಪುರ
16) ರೋಟರಿ ಕ್ಲಬ್, ಹಿರಿಯೂರು
17) ಫ್ರೆಂಡ್ ರಿಕ್ಷಜಿಷನ್ ಕ್ಲಪ್ ಬೆಲಗೂರು
18) ಗೋಪಾಲಕೃಷ್ಣ ವಾಚನಾಲಯ ಶ್ರೀರಾಂಪುರ
19] ಹೊಸದುರ್ಗ ಟೌನ್ ಕ್ಲಬ್
20) ಅಶೋಕ ರೀಡಿಂಗ್ ರೂಂ ಕ್ಲಬ್
21 ಕರ್ನಾಟಕ ಫ್ಯಾಮಿಲೀಸ್ ಅಸೋಷಿಯೇಷನ್ಸ್,
22) ಲೆಜೆಂಡ್ಸ್ ಕಲ್ಲರ್ ಅಸೋಷಿಯೇಷನ್ ಮನೋರಂಜನ ಕೇಂದ್ರ ಇವುಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿರುತ್ತದೆ.

ಬಡಾವಣೆ ಠಾಣಾ ವ್ಯಾಪ್ತಿಯ ಪವರ್ ರಿಕ್ರಿಯೇಷನ್ ಚಳ್ಳಕೆರೆ ಸರ್ಕಲ್ ಬಳಿ ಚಿತ್ರದುರ್ಗ ನಗರ ಕ್ಲಬ್ ನಲ್ಲಿ ಒಟ್ಟು 06 ಜನರು,
ಹೊಳಲ್ಕೆರೆ ಠಾಣಾವ್ಯಾಪ್ತಿಯ ಫ್ರೆಂಡ್ಸ್ ಕ್ರೀಡಾ ಮತ್ತು ಮನೋರಂಜನ ಕೇಂದ್ರ ಚಿಕ್ಕಜಾಜೂರು ರಸ್ತೆ, ಹೊಳಲ್ಕೆರೆ ಟೌನ್ ಕ್ಲಬ್‌ ನಲ್ಲಿ ಒಟ್ಟು 07 ಜನರು, ನಾಯಕನಹಟ್ಟಿ ಅಸೋಸಿಯೇಷನ್ ಕ್ಲಬ್ ಒಟ್ಟು 15 ಜನರನ್ನು ಸೇರಿದಂತೆ ಒಟ್ಟು 28 ಮಂದಿಯನ್ನು ಬಂಧಿಸಲಾಗಿದೆ. ಇತರೆ ಕ್ಲಬ್‌ ಗಳಲ್ಲಿ ಹೈಕೋರ್ಟ್ ಸೂಚನೆಗಳನ್ನು ಪಾಲನೆ ಮಾಡದೇ ಇರುವುದರಿಂದ ಹೈಕೋರ್ಟ್ ಸೂಚನೆಗಳನ್ನು ಕಡ್ಡಾಯವಾಗಿ ಪಾಲನೆ ಮಾಡುವಂತೆ ಸೂಕ್ತ ಸೂಚನೆಗಳನ್ನು ನೀಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

suddionenews

Recent Posts

ಕೋತಿರಾಜನ ಹೊಸ ಸಾಹಸ ; ಬಂಟ್ವಾಳದ ಈ ಬೆಟ್ಟ ಹತ್ತಲಿದ್ದಾರೆ ನಾಳೆ..!

ಕೋತಿರಾಜ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಚಿತ್ರದುರ್ಗ ಮೂಲದವರು. ಜ್ಯೋತಿರಾಜ್ ಮೂಲ ಹೆಸರಾದರೂ ಮಾಡುವ ಸಾಹಸಗಳಿಂದ ಕೋತಿರಾಜ್ ಎಂದೇ ಖ್ಯಾತಿ…

50 minutes ago

ಭೂಮಿಗೆ ತಂಪೆರೆದ ಮಳೆರಾಯ ; ಶೆಕೆಯಿಂದ ಬೆವರಿಳಿಸಿದ ಜನಕ್ಕೆ ಆನಂದ

ಹೌದು ಯುಗಾದಿ ಹಬ್ಬಕ್ಕೂ ಮುನ್ನ ಒಂದು ಮಳೆಯಾಗಬೇಕಿದೆ. ಇದು ಅನಾದಿ ಕಾಲದಿಂದಾನೂ ನಡೆದುಕೊಂಡು ಬಂದಿರುವ ಪದ್ಧತಿ. ಪ್ರಕೃತಿಯೇ ಹಾಗೇ ಯಾರೂ…

1 hour ago

ಚಳ್ಳಕೆರೆ : ಪ್ರಸವ ವೇದನೆಯಿಂದ ಬಳತಿದ್ದ ಹಸುವಿನ ಜೀವ ಉಳಿಸಿದ ವೈದ್ಯರು

ಸುದ್ದಿಒನ್, ಚಳ್ಳಕೆರೆ, ಮಾರ್ಚ್. 22 :  ತಾಲ್ಲೂಕಿನ ಮುಚ್ಚುಗುಂಟೆ ಗ್ರಾಮದ ನಿವಾಸಿಯಾದ ಗಾದ್ರಿಪಾಪಯ್ಯನವರ ರಾಜೇಶ್ ಕುಟುಂಬಕ್ಕೆ ಸೇರಿದ ಗರ್ಭ ಧರಿಸಿದ…

2 hours ago

ಇನ್ನು ಮುಂದೆ ಬ್ಯಾಂಕುಗಳು ವಾರದಲ್ಲಿ 5 ದಿನ ಮಾತ್ರ ತೆರೆದಿರುತ್ತವೆಯೇ?

ಸುದ್ದಿಒನ್ : ಬ್ಯಾಂಕ್ ನೌಕರರ ಸಂಘಗಳು ಬಹಳ ದಿನಗಳಿಂದ ವಾರಕ್ಕೆ ಐದು ದಿನಗಳು ಮಾತ್ರ ಕಾರ್ಯ ನಿರ್ವಹಿಸುವಂತೆ ಕೇಂದ್ರವನ್ನು ಒತ್ತಾಯಿಸುತ್ತಿವೆ.…

2 hours ago

ತಮಿಳುನಾಡಿನಲ್ಲಿ ಆಡಿದ ಒಂದೇ ಒಂದು ಮಾತಿಗೆ ಕೆರಳಿದ ಅಣ್ಣಾಮಲೈ ; ಅಂಥದ್ದೇನಿಳಿದ್ರು ಡಿಕೆಶಿ..?

ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ತಮಿಳುನಾಡಿನ ಬಿಜೆಪಿಯ ರಾಜ್ಯಾಧ್ಯಕ್ಷ ಅಣ್ಣಾಮಲೈ ನಡುವೆ ಜೋರು ಗದ್ದಲ ಎದ್ದಿದೆ. ಸುದ್ದಿಗೋಷ್ಠಿಯಲ್ಲಿ ಡಿಕೆ ಶಿವಕುಮಾರ್…

3 hours ago

ಚಿತ್ರದುರ್ಗದಲ್ಲಿ ಬಂದ್ ಹೇಗಿತ್ತು ?

  ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮಾರ್ಚ್.…

3 hours ago