in

ರಾಯಚೂರಿನಲ್ಲಿ ವೈರಲ್ ಫೀವರ್ : 600ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲು..!

suddione whatsapp group join

ರಾಯಚೂರು: ಕೊರೊನಾ ಮೂರನೇ ಅಲೆ ಮಕ್ಕಳಿಗೆ ಡೇಂಜರ್ ಅಂತ ತಜ್ಞರು ಹೇಳ್ತಾ ಇದ್ರು. ಅದಾದ ಬಳಿಕ ಏನು ಸಮಸ್ಯೆ ಆಗಲ್ಲ ಅಂತ ಹೇಳಲಾಗ್ತಾ ಇತ್ತು. ಇದೀಗ ರಾಯಚೂರಿನಲ್ಲಿ ಮಕ್ಕಳ ಪರಿಸ್ಥಿತಿ ನೋಡಿ ಬೇರೆಲ್ಲೆಡೆ ಆತಂಕ‌ ಮನೆ ಮಾಡಿದೆ.

ಕಳೆದ ಒಂದು ತಿಂಗಳಿನಿಂದ ಜಿಲ್ಲೆಯಲ್ಲಿ ಫೀವರ್ ಮಕ್ಕಳನ್ನ ಕಾಡ್ತಾನೆ ಇದೆ. ವೈರಲ್ ಫೀವರ್, ಡಂಗ್ಯೂ, ನ್ಯೂಮೋನಿಯಾ ಅಂತ 600ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ಅಡ್ಮಿಟ್ ಆಗಿದ್ದಾರೆ. ಪರಿಣಾಮ ಆಸ್ಪತ್ರೆಯಲ್ಲಿ ಬೆಡ್ ಗಳ ಸಮಸ್ಯೆ ಕೂಡ ಎದುರಾಗಿದೆ.

ಅಷ್ಟೇ ಅಲ್ಲ ಪ್ರತಿದಿನ 15-20 ಮಕ್ಕಳು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಮಕ್ಕಳಲ್ಲಿ ಕೊರೊನಾ ಲಕ್ಷಣವಿರೋ ಕಾರಣ ಸಾಕಷ್ಟು ಮುನ್ನೆಚ್ಚರಿಕೆ ವಹಿಸಲಾಗಿದೆ. ಆದ್ರೆ ಅದೃಷ್ಟವಶಾತ್ ಯಾವ ಮಕ್ಕಳಿಗೂ ಕೊರೊನಾ ಪಾಸಿಟಿವ್ ಬಂದಿಲ್ಲ.

ಖಾಸಗಿ ಆಸ್ಪತ್ರೆಗಳ ಬೆಡ್ ಸಹ ಭರ್ತಿ ಆಗಿವೆ. ಒಟ್ಟಾರೆ ಕಳೆದ ಒಂದು ತಿಂಗಳಲ್ಲಿ ಜಿಲ್ಲೆಯಲ್ಲಿ ಸುಮಾರು 2 ಸಾವಿರ ಮಕ್ಕಳು ಆಸ್ಪತ್ರೆಗೆ ದಾಖಲಾಗಿದ್ದು, ಪೋಷಕರಲ್ಲಿ ಅತಂಕ ಮನೆ ಮಾಡಿದೆ. ರಿಮ್ಸ್ ಆಸ್ಪತ್ರೆಯಲ್ಲಿ ಮಕ್ಕಳಿಗಾಗಿ ಹೆಚ್ಚುವರಿ ಬೆಡ್ ಹಾಗೂ ಆಕ್ಸಿಜನ್ ವ್ಯವಸ್ಥೆ ಮಾಡಲಾಗಿದೆ. ಸದ್ಯ ಇರುವ ಬೆಡ್‍ಗಳು ಸಾಲುತ್ತಿಲ್ಲ. ಹೀಗಾಗಿ ಬೇರೆ ವಿಭಾಗಗಳ ಕೊಠಡಿಗಳನ್ನು ಮಕ್ಕಳ ವಿಭಾಗಗಳಾಗಿ ಪರಿವರ್ತಿಸಲು ರಿಮ್ಸ್ ಆಡಳಿತ ಮಂಡಳಿ ಮುಂದಾಗಿದೆ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಗರಿಷ್ಠ ಕೆಲಸ, ಗುರಿಮೀರಿ ಸಾಧನೆ ಮಾಡಿದ ಭೂಮಾಪಕರಿಗೆ ಅಭಿನಂದನಾ ಪತ್ರ ವಿತರಣೆ

ಭದ್ರಾ ಜಲಾಶಯದಿಂದ ವಿವಿ ಸಾಗರ ಜಲಾಶಯಕ್ಕೆ ನೀರು ಲಿಫ್ಟ್ ಮಾಡುವ ಅವಧಿ ವಿಸ್ತರಿಸುವಂತೆ ಮುಖ್ಯಮಂತ್ರಿಗಳಿಗೆ ನೀರಾವರಿ ಹೋರಾಟ ಸಮಿತಿ ಒತ್ತಾಯ