
ನವದೆಹಲಿ: ಬಿಜೆಪಿ ಮಾಡಿರುವ ಹಲವು ಗುರಿತರ ಆರೋಪಗಳಿಗೆ ಸಂಸತ್ ನಲ್ಲಿಯೇ ಉತ್ತರ ನೀಡಲು ಅವಕಾಶ ಸಿಗಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಿಳಿಸಿದ್ದಾರೆ. ಇಂದು ಮಾತನಾಡಿದ ಅವರು, ನಾನು ಹೇಳಿರುವುದು ಏನು..? ಸದನದ ಬಗ್ಗೆ ನನಗೆ ಇರುವ ಗೌರವವೇನು..? ಎಂಬ ಯೋಜನೆಗಳ ಬಗ್ಗೆ ಮಾತನಾಡಲು ನಾನು ಸಂಸತ್ ಗೆ ತೆರಳಿದ್ದೆ.

ನಾಲ್ವರು ಸಚಿವರುಗಳು ನನ್ನ ಮೇಲೆ ಆರೋಪ ಮಾಡಿದರು. ಸದನದ ಕಲಾಪದಲ್ಲಿ ಮಾತನಾಡುವ ಅವಕಾಶ ಪಡೆಯುವುದು ನನ್ನ ಹಕ್ಕು. ಇಂದು ಸ್ಪೀಕರ್ ಬಳಿ ತೆರಳಿಮನವಿ ಮಾಡಿದ್ದೇನೆ. ನನ್ನ ವಿರುದ್ಧ ಬಿಜೆಪಿ ಸದಸ್ಯರು ಆರೋಪ ಮಾಡಿದ್ದಾರೆ. ನಾನು ಮಾತನಾಡಲು ಪ್ರಯತ್ನಿಸಿದ್ದೇನೆ ಎಂದು ಮನವಿ ಮಾಡಿದಾಗ ಅವರು ನಗೆ ಬೀರಿದ್ದಾರೆ. ಆದರೂ ನಾಳೆ ನನಗೆ ಸಂಸತ್ ನಲ್ಲಿ ಮಾತನಾಡುವ ಅವಕಾಶ ಸಿಗುತ್ತೆ ಎಂದು ಬಯಸುತ್ತೇನೆ ಎಂದಿದ್ದಾರೆ.

GIPHY App Key not set. Please check settings