ಕನ್ನಡ ಬಾವುಟದ ಮೇಲೆ ರಾಹುಲ್ ಗಾಂಧಿ ಫೋಟೋ ; ಕ್ಷಮೆಯಾಚಿಸುವಂತೆ ಕನ್ನಡ ಪರ ಸಂಘಟನೆಗಳ ಆಗ್ರಹ

ಬೆಂಗಳೂರು : ಕರ್ನಾಟಕದಲ್ಲಿ ಭಾರತ್ ಜೋಡೋ ಯಾತ್ರೆಯನ್ನು ಮುನ್ನಡೆಸುತ್ತಿರುವ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ವಿರುದ್ಧ ಕನ್ನಡ ಪರ ಸಂಘಟನೆಗಳು ವಾಗ್ದಾಳಿ ನಡೆಸಿದೆ. ‘ಕರ್ನಾಟಕದ ಕನ್ನಡ ಧ್ವಜ’ದಲ್ಲಿ ಪಕ್ಷದ ಯಾರೊಬ್ಬರ ಚಿತ್ರ ಬಳಸದಂತೆ ಕನ್ನಡ ಪರ ಸಂಘಟನೆ ಕಾಂಗ್ರೆಸ್‌ಗೆ ಎಚ್ಚರಿಕೆ ನೀಡಿದೆ.

ಕನ್ನಡ ಧ್ವಜವು ಹಳದಿ ಮತ್ತು ಕೆಂಪು ಬಣ್ಣದಿಂದ ಕೂಡಿದ್ದು, ಇದು ಕನ್ನಡ ಮತ್ತು ಕರ್ನಾಟಕದ ಸಂಕೇತವಾಗಿದೆ. ಧ್ವಜದ ಮೇಲೆ ರಾಹುಲ್ ಗಾಂಧಿ ಚಿತ್ರವನ್ನು ಮುದ್ರಿಸಿದ್ದಕ್ಕಾಗಿ ಕಾಂಗ್ರೆಸ್ ಕ್ಷಮೆಯಾಚಿಸಬೇಕು ಎಂದು ಕನ್ನಡ ಪರ ಸಂಘಟನೆಗಳು ಆಗ್ರಹಿಸಿವೆ.

ಕನ್ನಡ ಧ್ವಜದ ಮೇಲಿನ ರಾಹುಲ್ ಗಾಂಧಿಯವರ ಫೋಟೋವನ್ನು ನಾನು ಖಂಡಿಸುತ್ತೇನೆ. ಇದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ದಾರೆ.

“ಕನ್ನಡ ಧ್ವಜದ ಸಮಸ್ಯೆಯನ್ನು ಇತ್ಯರ್ಥಗೊಳಿಸಲು ಕಾಂಗ್ರೆಸ್ ಬಿಡುವುದಿಲ್ಲ ಎಂಬುದಕ್ಕೆ ಇದೊಂದು ತಾಜಾ ಉದಾಹರಣೆಯಾಗಿದೆ. ಮೊದಲು ಅವರು ಧ್ವಜ ಬದಲಾಯಿಸಲು ಹೊರಟರು. ಈಗ ಅವರು ಧ್ವಜದ ಮೇಲೆ ಫೋಟೋಗಳನ್ನು ಬಳಸಿದ್ದಾರೆ. ಕಾಂಗ್ರೆಸ್ ನವರೇ ನೀವು ಕನ್ನಡಿಗರನ್ನು ದ್ವೇಷಿಸುತ್ತೀರಾ?” ಎಂದು ಬಿಜೆಪಿ ಪ್ರತಿಕ್ರಿಯೆ ನೀಡಿದೆ.

ಕನ್ನಡ ಧ್ವಜದ ಮಾನ್ಯತೆಗಾಗಿ ಕೇಂದ್ರಕ್ಕೆ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಬಿಜೆಪಿ ನೇತೃತ್ವದ ಸರ್ಕಾರ ಕಸದ ಬುಟ್ಟಿಗೆ ಹಾಕಿದ್ದು ಏಕೆ ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ.

Share This Article
Leave a Comment

Leave a Reply

Your email address will not be published. Required fields are marked *