Connect with us

Hi, what are you looking for?

ಪ್ರಮುಖ ಸುದ್ದಿ

ಇಂದಿರಾನಗರದ ಗೂಂಡಾ ಬಗ್ಗೆ ಜೋಮ್ಯಾಟೋ ಟ್ವೀಟ್ : ಪೊಲೀಸರು ಹುಡುಕಾಡಿದಾಗ ಸಿಕ್ಕಿದ್ದು ಆ ಬಿಗ್ ಕ್ರಿಕೆಟಿಗ..!

ಬೆಂಗಳೂರು: ಒಮ್ಮೊಮ್ಮೆ ಸೋಷಿಯಲ್ ಮೀಡಿಯಾದಲ್ಲಿ ಮಾಡುವ ತಮಾಷೆ ಪೊಲೀಸರಿಗೆ ಆತಂಕಕ್ಕೆ ಎಡೆ ಮಾಡಿಕೊಟ್ಟುಬಿಡುತ್ತೆ. ಡಿಜಿಟಲ್ ಮಾಧ್ಯಮ ಇಂಪ್ರೂವ್ ಆದಮೇಲೆ ಪೊಲೀಸರು ಸೋಷಿಯಲ್ ಮೀಡಿಯಾದಲ್ಲೂ ಅಪರಾಧಗಳ ಬಗ್ಗೆ ಸರ್ಚ್ ಮಾಡ್ತಾ ಇರ್ತಾರೆ. ಕಷ್ಟದಲ್ಲಿ ಸಿಲುಕಿರುವವರು ನೇರವಾಗಿಯೇ ಬರಬೇಕಿಂದಿಲ್ಲ, ಸೋಷಿಯಲ್ ಮೀಡಿಯಾದಲ್ಲಿ ಕಷ್ಟದಲ್ಲಿದ್ದೀವಿ ಅಂತ ಹಾಕುದ್ರು ಪೊಲೀಸರು ಅಂತವರ ರಕ್ಷಣೆಗೆ ನಿಲ್ತಾರೆ.

ಹೀಗೆ ಸೋಷಿಯಲ್ ಮೀಡಿಯಾದಲ್ಲಿ ಜೋಮ್ಯಾಟೋ ಮಾಡಿದ ಆ ಒಂದು ಟ್ವೀಟ್ ಪೊಲೀಸರಿಗೆ ಒಂದು ಕ್ಷಣ ತಲೆನೋವಾಗಿತ್ತು. ಅದು ಕ್ರಿಕೆಟ್ ಲೋಕದ ದಂತ ಕಥೆ, ದಿ ಗ್ರೇಟ್ ವಾಲ್ ಎನಿಸಿಕೊಂಡಿರುವ ರಾಹುಲ್ ದ್ರಾವಿಡ್ ಬಗ್ಗೆ.

ಹೌದು ಇವತ್ತು ಜೊಮ್ಯಾಟೋ ತನ್ನ ಟ್ವಿಟ್ಟರ್ ಖಾತೆಯಲ್ಲಿ ರಾಹುಲ್ ದ್ರಾವಿಡ್ ಕುರಿತ ಪೋಸ್ಟ್ ವೊಂದನ್ನ ಹಾಕಿತ್ತು. ಇಂದಿರಾ ನಗರದ ಕಡೆ ಫುಡ್ ಡೆಲಿವರಿ ತಡವಾಗುತ್ತೆ. ಅದಕ್ಕೆ ಕಾರಣ ಸಿಟ್ಟಿಗೆದ್ದ ಗುಂಡಾ ಒಬ್ಬ ರಸ್ತೆಯಲ್ಲೆ ಇದ್ದಾನೆ ಅಂತ. ಈ ಟ್ವೀಟ್ ಪೊಲೀಸ್ ಐಟಿ ಸೆಲ್ ಗಮನಕ್ಕೆ ಬಂದಿದೆ. ತಕ್ಷಣ ಎಚ್ಚೆತ್ತ ಪೊಲೀಸರು, ಇಂದಿರಾನಗರದ ಪೊಲೀಸರ ಗಮನಕ್ಕೆ ತಂದಿದೆ.

ಇಂದಿರಾ ನಗರ ಪೊಲೀಸರು ಕೂಡ ತಡ ಮಾಡಿಲ್ಲ. ಜೋಮ್ಯಾಟೋದವರನ್ನ ಸಂಪರ್ಕಿಸಿದ್ದಾರೆ. ಆಗ ನಿಜಾಂಶ ಬೆಳಕಿಗೆ ಬಂದಿದೆ. ಜೊಮ್ಯಾಟೋ ಮತ್ತೊಂದು ಟ್ವೀಟ್ ಮಾಡಿ, ಇದನ್ನ ಸೀರಿಯಸ್ ಆಗಿ ತೆಗೆದುಕೊಳ್ಲಬೇಡಿ ಎಂದಿದ್ದಾರೆ.

ರಾಹುಲ್ ದ್ರಾವಿಡ್ ಅವರು ಕ್ರೆಡಿಟ್ ಕಾರ್ಡ್ ಬಿಲ್ಲಿಂಗ್ ಆ್ಯಪ್​ವೊಂದರಲ್ಲಿ ಇಂದಿರಾನಗರದ ಗೂಂಡಾ ಎಂಬ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಇದನ್ನ ಜೊಮ್ಯಾಟೋ ತನ್ನ ಮಾರ್ಕೆಟ್ ಹೆಚ್ಚಿಸಿಕೊಳ್ಳಲು ಬಳಸಿಕೊಂಡಿತ್ತು.

Click to comment

Leave a Reply

Your email address will not be published. Required fields are marked *

Latest

ಪ್ರಮುಖ ಸುದ್ದಿ

ವಿಶಾಲವಾದ, ದ್ರವ್ಯರಾಶಿಗಳಿಂದ ಕೂಡಿದ ಭೂಮಿಯ ಮೇಲ್ಮೈಭಾಗವನ್ನು ಭೂ ಖಂಡಗಳೆಂದು ಕರೆಯಲಾಗುತ್ತದೆ. ನೆಲ ಮತ್ತು ಜಲಗಳ ಒಟ್ಟು ರಾಶಿಯೇ ಭೂಗೋಳ. ಆಫ್ರಿಕ, ಉತ್ತರಅಮೇರಿಕ, ದ.ಅಮೇರಿಕಾ, ಆಸ್ಟ್ರೇಲಿಯ, ಯುರೋಪು, ಅಂಟಾರ್ಟಿಕ ಪ್ರದೇಶಗಳ ಭೂಗೋಳದ ದೊಡ್ಡದೊಡ್ಡ ಭೂಫಲಕಗಳು....

ಆರೋಗ್ಯ

ಬೇಲದ ಹಣ್ಣನ್ನ ನಾವೂ ಪಾನಕಗಳಿಗೆ ಉಪಯೋಗಿಸ್ತಾ ಇದ್ವಿ. ಆದ್ರೆ ಇತ್ತೀಚಿನ ದಿನಗಳಲ್ಲಿ ಬೇಲದ ಹಣ್ಣಿನ ಜಾಗವನ್ನ ಕರ್ಬೂಜ ಆವರಿಸಿದೆ. ಈ ಬೇಲದ ಹಣ್ಣಿನಲ್ಲಿ ಜೀರ್ಣಕ್ರಿಯೆ ಉತ್ತಮಗೊಳಿಸಿ, ಮಲಬದ್ಧತೆ ಸರಿ ಮಾಡುವ ಗುಣವಿದೆ. ಈ...

ದಿನ ಭವಿಷ್ಯ

ಈ ಎಲ್ಲಾ ರಾಶಿಯವರು ಬ್ರಾಹ್ಮಣರಿಗೆ ವಸ್ತ್ರದಾನದಿಂದ ಶುಭಫಲ ಪಡೆಯಿರಿ! ಮದುವೆ ಮಾತುಕತೆ ಮರುಚಾಲನೆ! ಪದವೀಧರರಿಗೆ ಉದ್ಯೋಗ ಪ್ರಾಪ್ತಿ! ಭಾನುವಾರ ರಾಶಿ ಭವಿಷ್ಯ-ಜುಲೈ-25,2021 ಸೂರ್ಯೋದಯ: 06:02 AM, ಸೂರ್ಯಸ್ತ: 06:47 PM ಪ್ಲವ ನಾಮ...

ಪ್ರಮುಖ ಸುದ್ದಿ

ಬೆಳಗಾವಿ: ಉತ್ತರ ಕರ್ನಾಟಕದ ಬಹುತೇಕ ಪ್ರದೇಶಗಳು ಮಳೆಯಿಂದ ತತ್ತರಿಸಿ ಹೋಗಿವೆ. ಎಷ್ಟೋ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸೋ ರಸ್ತೆಗಳು ಕೊಚ್ಚಿ ಹೋಗಿವೆ. ನದಿಗಳು ತುಂಬಿ ಹರಿಯುತ್ತಿವೆ, ಜನರ ಬದುಕು ಹೇಳತೀರದ್ದಾಗಿದೆ. ಈ ಮಧ್ಯೆ ಗರ್ಭಿಣಿಯರು,...

ಪ್ರಮುಖ ಸುದ್ದಿ

ಮಂಗಳೂರು: ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಆಸ್ಕರ್ ಫೆರ್ನಾಂಡೀಸ್ ಅನಾರೋಗ್ಯದಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯಕ್ಕಾಗಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವಿರೇಂದ್ರ ಹೆಗಡೆ ಅವರು...

ಪ್ರಮುಖ ಸುದ್ದಿ

ಚಿತ್ರದುರ್ಗ : ಜಿಲ್ಲೆಯ ಮೊರಾರ್ಜಿ ದೇಸಾಯಿ/ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ/ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಗಳ 2020-21ನೇ ಸಾಲಿನ 6ನೇ ತರಗತಿ ಪ್ರವೇಶ ಬಯಸಿ ಅರ್ಜಿ ಸಲ್ಲಿಸಿ ಇಲ್ಲಿಯವರೆಗೆ...

You May Also Like

ಪ್ರಮುಖ ಸುದ್ದಿ

ಕೇರಳ: ಅನನ್ಯಾ ಕುಮಾರಿ..ಈ ಹೆಸರು ಯಾರಿಗೆ ಗೊತ್ತಿಲ್ಲ ಹೇಳಿ. ಅಷ್ಟು ಸಾಧನೆ ಮಾಡಿದಾಕೆ. ಕೇರಳದ ಮೊದಲ ಮಂಗಳಮುಖಿ ಈಕೆ. ಅಷ್ಟೇ ಅಲ್ಲ ರೇಡಿಯೋ ಜಾಕಿಯಾಗಿ, ನ್ಯೂಸ್ ರೀಡರ್ ಆಗಿ ಗುರುತಿಸಿಕೊಂಡಿದ್ದಾಕೆ. ಆದ್ರೆ‌ ಇಂದು...

ಪ್ರಮುಖ ಸುದ್ದಿ

ಸುದ್ದಿಒನ್ ನ್ಯೂಸ್ | ಚಿತ್ರದುರ್ಗ, (ಜು.20) : ಚಳ್ಳಕೆರೆ ತಾಲ್ಲೂಕು ಕಚೇರಿಯಲ್ಲಿ ಕಳೆದ ಮೂರು ವರ್ಷಗಳಿಂದ ಕಾರ್ಯನಿರ್ವಹಿಸತ್ತಿದ್ದ ತಹಶೀಲ್ದಾರ್ ಎಂ.ಮಲ್ಲಿಕಾರ್ಜುನ ಮಂಗಳವಾರ ದಿಢೀರನೆ ಬದಲಾವಣೆಯಾಗಿದೆ. ಅವರ ಸ್ಥಾನಕ್ಕೆ ಹೊಸದುರ್ಗ ಮೂಲದ ಯಲಹಂಕದಲ್ಲಿ ಕರ್ತವ್ಯ...

ಪ್ರಮುಖ ಸುದ್ದಿ

ಗುಜರಾತ್: ಸಿಲಿಂಡರ್ ಲೀಕೇಜ್ ಆಗಿ ಸ್ಪೋಟಗೊಂಡ ಪರಿಣಾಮ 7 ಜನ ಧಾರೂಣವಾಗಿ ಸಾವನ್ನಪ್ಪಿರುವ ಘಟನೆ ಗುಜರಾತ್ ನ ಅಹ್ಮದಬಾದ್ ಗಾಂಧಿನಗರದಲ್ಲಿ ನಡೆದಿದೆ. ಗಾಯಗೊಂಡವರನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆದ್ರೆ ಈ ಘಟನೆ...

ಪ್ರಮುಖ ಸುದ್ದಿ

ಸುದ್ದಿಒನ್ ನ್ಯೂಸ್ | ಚಿತ್ರದುರ್ಗ,(ಜು. 20) : ರಾಜ್ಯದ ಮುಖ್ಯಮಂತ್ರಿಗಳು ಬದಲಾದರೆ ಯಡಿಯೂರಪ್ಪನವರಿಗೇನು ನಷ್ಟ ಇಲ್ಲ. ಆದರೆ ಪಕ್ಷಕ್ಕೆ ದೊಡ್ಡ ನಷ್ಟ ಉಂಟಾಗಬಹುದು. ಇದ್ದಕ್ಕಿದ್ದಂತೆ ಒಬ್ಬ ನಾಯಕ ಹುಟ್ಟುವುದಿಲ್ಲ. ಅದು ನಿಧಾನವಾಗಿ ಬರುವ...

Copyright © 2021 Suddione. Kannada online news portal

error: Content is protected !!