ಮೈಸೂರು: ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಾಜಿ ಸಿಎಂ ಯಡಿಯೂರಪ್ಪ ಮಾತನಾಡಿದ್ದು, ಸಚಿವ ಸಂಪುಟ ತೀರ್ಮಾನವನ್ನು ಕೇಂದ್ರ ಸರ್ಕಾರ ತೆಗೆದುಕೊಳ್ಳಬೇಕು ಅಲ್ವಾ. ಮುಖ್ಯಮಂತ್ರಿಗಳು ಈಗಾಗಲೇ ಎರಡು ಸಲ ಭೇಟಿ ಮಾಡಿದ್ದಾರೆ. ಇನ್ನೊಂದು ಎರಡು ಮೂರು ದಿನದಲ್ಲಿ ತೀರ್ಮಾನವಾಗಲಿದೆ ಎಂದಿದ್ದಾರೆ.
ಮುಖ್ಯಮಂತ್ರಿಗಳು ಕೇಂದ್ರ ಗೃಹಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಬಂದಿದ್ದಾರೆ. ಎರಡು ಮೂರು ದಿನದಲ್ಲಿ ಸಂಪುಟದ ವಿಸ್ತರಣೆ ತೀರ್ಮಾನವಾಗುತ್ತೆ ಎಂಬುದನ್ನು ಅವರೇ ಹೇಳಿದ್ದಾರೆ. ಇನ್ನು ಇದೆ ವೇಳೆ ಬಿ ವೈ ರಾಘವೇಂದ್ರ ಅವರು ಸಂಪುಟ ಸೇರುತ್ತಾರಾ ಎಂಬುದಕ್ಕೆ ಗೊತ್ತಿಲ್ಲ ಎಂಬ ಉತ್ತರ ನೀಡಿದ್ದಾರೆ.
ಇದೇ ವೇಳೆ ಸಿದ್ದರಾಮಯ್ಯ ಅವರ ಅತ್ಯಂತ ದುರ್ಬಲ, ಭ್ರಷ್ಟ ಸರ್ಕಾರವಿದು ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಬಿಎಸ್ವೈ, ಯಾರು ದುರ್ಬಲರಿದ್ದರು, ಯಾರು ಭ್ರಷ್ಟರಿದ್ದರು ಅವರ ಬಾಯಿಯಿಂದ ಇಂಥ ಮಾತೇ ಬರುವುದು. ಸಿದ್ದರಾಮಯ್ಯ ಅವರ ಕಥೆ ಏನು ಅಂಥ ಇಡೀ ಜಗತ್ತಿಗೆ ಗೊತ್ತಿದೆ. ಯಾವ ಕಾಲದಲ್ಲಿ ಅವರು ಏನೇನು ಮಾಡಿದ್ರು ಎಂಬುದು. ಅನಾವಶ್ಯಕವಾಗಿ, ಪ್ರಚಾರಕ್ಕಾಗಿ ಇಂಥ ಹೇಳಿಕೆ ಕೊಡುವುದನ್ನು ಇನ್ನಾದರೂ ನಿಲ್ಲಿಸಿ, ಗೌರವದಿಂದ ನಡೆದುಕೊಳ್ಳಬೇಕೆಂದು ಹೇಳುತ್ತೇನೆ.






GIPHY App Key not set. Please check settings