ಮನೆ-ಮಠ ಇಲ್ಲದಂಗೆ ಮಾಡಬೇಕು, ಆಗ ಬುದ್ದಿ ಕಲಿಯುತ್ತಾರೆ : ಸಚಿವ ಆರ್ ಅಶೋಕ್

ಬೆಂ.ಗ್ರಾಮಾಂತರ: ಉತ್ತರ ಪ್ರದೇಶದ ಮಾದರಿಯಲ್ಲೇ ಇಲ್ಲಿಯೂ ಬುಲ್ಡೋಜರ್ ಗಳ ಕಾನೂನು ತಂದರೆ ಬುದ್ದಿ ಬರುತ್ತದೆ.‌ ಬಂದಿಸಿದರೆ ಜಾಮೀನು ತೆಗೆದುಕೊಂಡು ಒಂದು ವಾರಕ್ಕೆ ಹೊರಗೆ ಬರುತ್ತಾರೆ. ಆದರೆ ಮನೆ ಮಠ ಇಲ್ಲದಂಗೆ ಮಾಡಿದರೆ ಬುದ್ದಿ ಕಲಿಯುತ್ತಾರೆ ಎಂದು ಸಚಿವ ಆರ್ ಅಶೋಕ್ ಹೇಳಿದ್ದಾರೆ.

ಕೋಮುಗಲಭೆ ಸೃಷ್ಟಿಸುವವರನ್ನು ಬಂಧಿಸಿದರೆ ಒಂದು ವಾರಕ್ಕೆ ಆಚೆ ಬರುತ್ತಾರೆ. ಮತ್ತೆ ಅದೇ ಕೆಲಸ ಮಾಡುತ್ತಾರೆ. ಇತ್ತೀಚೆಗೆ ಹುಬ್ಬಳ್ಳಿ ಗಲಭೆಯಲ್ಲಿ ಅರೆಸ್ಟ್ ಆದವರು ರೌಡಿಶೀಟರ್ ಗಳೇ. ಅರೆಸ್ಟ್ ಆದ ಒಂದೇ ವಾರಕ್ಕೆ ಹೊರಗೆ ಬಂದು ಮತ್ತೆ ಕೆಲಸ ಶುರು ಮಾಡಿದ್ದಾರೆ. ಅವರು ಬುದ್ದಿ ಕಲಿಯಲ್ಲ. ಬುದ್ದಿ ಕಲಿಯಬೇಕೆಂದರೆ ಮನೆ ಮಠ ಇಲ್ಲದ ಹಾಗೇ ಮಾಡಿದರೆ ದಾರಿಗೆ ಬರುತ್ತಾರೆ. ಈ ಥರದ ಮನಸ್ಥಿತಿ ಇರುವವರಿಗೆ ಉತ್ತರ ಪ್ರದೇಶದ ರೀತಿಯೇ ಕಾನೂನು ತರಬೇಕು.

ಮುಸ್ಲಿಂರಲ್ಲಿ ತುಂಬಾ ಒಳ್ಳೆಯವರು ಇದ್ದಾರೆ. ಆದರೆ ಪುಂಡ ಪೋಕರಿಗಳನ್ನು ಮಟ್ಟ ಹಾಕಲು ಈ ರೀತಿಯ ಕಾರ್ಯಾಚರಣೆ ಬಹಳ ಮುಖ್ಯವಾಗುತ್ತದೆ. ರಾಜಸ್ಥಾನದಲ್ಲಿ 400 ವರ್ಷಗಳ ಇತಿಹಾಸವಿರುವ ದೇವಸ್ಥಾನವನ್ನು ಕೆಡವಿರುವುದು ಖಂಡನೀಯ. ರಾಜಸ್ಥಾನ ಸರ್ಕಾರ ಹಿಂದೂ ವಿರೋಧಿ ನೀತಿ ತಾಳಿದೆ. ಇದು ಖಂಡನೀಯ ಎಂದಿದ್ದಾರೆ.

ಇದೆ ವೇಳೆ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದು, ಬಹುಸಂಖ್ಯಾತರನ್ನು ನಿರ್ಲಕ್ಷಿಸಿದ್ದೇ ಕಾಂಗ್ರೆಸ್ ಗೆ ಮುಳುವಾಗಿದೆ. ಕಾಂಗ್ರೆಸ್ ಬರೀ ಅಲ್ಪಸಂಖ್ಯಾತರ ಒಲೈಕೆ ಮಾಡುತ್ತದೆ. ಈಗಾಗಲೇ ಬಿಜೆಪಿ ವಿಧಾನಸಭಾ ಚುನಾವಣೆಯ ಪ್ರಚಾರ ಆರಂಭಿಸಿದೆ. ಜನರಿಗೆ ಬೇಕಾಗಿರುವುದು ಪ್ರಧಾನಿ ಮೋದಿಯವರು ಎಂದಿದ್ದಾರೆ.

suddionenews

Recent Posts

ಚಿತ್ರದುರ್ಗ : ತೊಳಸಮ್ಮ ನಿಧನ

ಚಿತ್ರದುರ್ಗ: ನಗರದ ಬುರುಜಿನಹಟ್ಟಿ ನಿವಾಸಿ, ಪೈಲ್ವಾನ್ ಹೊನ್ನಪ್ಪ ಸೊಸೆ ತೊಳಸಮ್ಮ (68) ಶನಿವಾರ ನಿಧನ ಹೊಂದಿದರು. ಪತಿ, ನಾಲ್ವರು ಪುತ್ರಿಯರು…

11 minutes ago

ಮಹಾ ಕುಂಭಮೇಳದ ಗಡುವು ವಿಸ್ತರಿಸಿ : ಅಖಿಲೇಶ್ ಯಾದವ್

ಸುದ್ದಿಒನ್ ಪ್ರತಿ 144 ವರ್ಷಗಳಿಗೊಮ್ಮೆ ನಡೆಯುವ ಮಹಾ ಕುಂಭಮೇಳವು ಪ್ರಸ್ತುತ ಉತ್ತರ ಪ್ರದೇಶದ ಪ್ರಯಾಗರಾಜ್‌ನ ಮಹಾ ಕುಂಭನಗರದಲ್ಲಿ ನಡೆಯುತ್ತಿದೆ. ಜನವರಿ…

17 minutes ago

ಕುಂಭಮೇಳದಲ್ಲಿ ಫೋನ್ ಚಾರ್ಜಿಂಗ್ ವ್ಯವಹಾರ : ಒಂದು ಗಂಟೆಗೆ ಎಷ್ಟು ಗೊತ್ತಾ ?

  ಸುದ್ದಿಒನ್ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭಮೇಳ ನಡೆಯುತ್ತಿರುವುದು ಎಲ್ಲರೂ ತಿಳಿದಿದೆ. 144 ವರ್ಷಗಳಿಗೊಮ್ಮೆ ನಡೆಯುವ ಮಹಾ ಕುಂಭಮೇಳಕ್ಕೆ…

47 minutes ago

ಮಹಾ ಕುಂಭಮೇಳಕ್ಕೆ ಹರಿದು ಬರುತ್ತಿರುವ ಭಕ್ತರ ಪ್ರವಾಹ : 51 ಕೋಟಿ ದಾಟಿದ ಭಕ್ತರ ಸಂಖ್ಯೆ

ಸುದ್ದಿಒನ್ : ವಿಶ್ವದ ಅತಿದೊಡ್ಡ ಆಧ್ಯಾತ್ಮಿಕ ಉತ್ಸವವಾದ ಮಹಾ ಕುಂಭಮೇಳವು ಕೆಲವೇ ದಿನಗಳಲ್ಲಿ ಮುಗಿಯಲಿದೆ. ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ…

49 minutes ago

ತೊಗರಿ, ಕಡಲೇಕಾಳಿಗೆ ಬೆಂಬಲ ಬೆಲೆ : ಫೆ.17ರಿಂದ ನೋಂದಣಿ ಪ್ರಾರಂಭ

  ಚಿತ್ರದುರ್ಗ.15: ಕೇಂದ್ರ ಸರ್ಕಾರದ ಬೆಂಬಲಬೆಲೆ ಯೋಜನೆಯಡಿ 2024-25ನೇ ಸಾಲಿನಲ್ಲಿ ರೈತರು ಬೆಳೆದ ತೋಗರಿ ಹಾಗೂ ಕಡಲೇಕಾಳು ಖರೀದಿ ಮಾಡಲು…

2 hours ago

ರೈಲ್ವೆ ಸೇತುವೆಗಳ ನಿರ್ಮಾಣಕ್ಕೆ164 ಕೋಟಿ ರೂಪಾಯಿ ಬಿಡುಗಡೆ : ಗೋವಿಂದ ಕಾರಜೋಳ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಚಿತ್ರದುರ್ಗ. ಫೆ. 15 :…

3 hours ago