in ,

ಮಹಾಂತ ನರೇಂದ್ರ ಗಿರಿ ಸಾವಿಗೆ ಹೊಸ ಟ್ವಿಸ್ಟ್ ಕೊಡ್ತು ಆ ಡೆತ್ ನೋಟ್..!

suddione whatsapp group join

ಲಕನೌ: ಹಿರಿಯ ಸ್ವಾಮೀಜಿ ಮಹಾಂತ ನರೇಂದ್ರ ಗಿರಿ ಅವರು ಅಸಹಜ ಸಾವು ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ತಿದೆ. ಇದೀಗ ಅವರೇ ಬರೆದಿದ್ದಾರೆ ಎನ್ನಲಾದ ಡೆತ್ ನೋಟ್ ಸಿಕ್ಕಿದ್ದು, ಒಂದಷ್ಟು ಮಂದಿ‌ ಇದು ಅವರದ್ದಲ್ಲ ಅಂತಿದ್ದಾರೆ.

ಮಹಾಂತ ಗಿರಿ ಅವರ ಕೋಣೆಯಲ್ಲಿ 11 ಪುಟಗಳ ಡೆತ್ ನೋಟ್ ಪತ್ತೆಯಾಗಿದೆ. ಇದು ಕೇಸ್ ಹೊಸ ತಿರುವು ನೀಡಿದೆ. ಯಾಕಂದ್ರೆ ಅಲ್ಲಿನವರೇ ಹೇಳುವಂತೆ ಅವರಿಗೆ ಬರೆಯಲು, ಓದಲು ಬರುತ್ತಿರಲಿಲ್ಲವಂತೆ. ಬಾಯ್ಮಾತಿನಲ್ಲಿಯೇ ಎಲ್ಲಾ ವ್ಯವಹಾರ ಮಾಡ್ತಾ ಇದ್ದರಂತೆ. ಹೀಗಾಗಿ ಡೆತ್ ನೋಟ್ ನಲ್ಲಿ ಅವರೇಗೆ ಬರೆಯೋದಕ್ಕೆ ಸಾಧ್ಯ ಎಂಬ ಅನುಮಾನಗಳು ವ್ಯಕ್ತವಾಗಿವೆ.

ಮಹಾಂತರ ಶಿಷ್ಯರು ಈ ಹೇಳಿಕೆಯನ್ನು ತಳ್ಳಿಹಾಕಿದ್ದಾರೆ. ನರೇಂದ್ರ ಗಿರಿ ಅವರಿಗೆ ಓದಲು ಬರೆಯಲು ಬರುತ್ತಿತ್ತು. ಅವರು ಸ್ವತಃ ಗಂಟೆಗಟ್ಟಲೆ ಸುಂದರಕಾಂಡ ಪಾರಾಯಣ ಮಾಡುತ್ತಿದ್ದರು ಎಂದು ಶಿಷ್ಯರಾದ ಜಿತೇಂದ್ರ ಸರಸ್ವತಿ ಮತ್ತು ಸರ್ವೇಶ ತ್ರಿವೇದಿ ತಿಳಿಸಿದ್ದಾರೆ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಮೀಟೂ ವಿರುದ್ಧ ಧ್ವನಿ ಎತ್ತಿದ್ದ ನಟಿ ಮೇಲೆ ಹಲ್ಲೆ, ಆಸಿಡ್ ದಾಳಿ ಯತ್ನ..!

ನಿನ್ನೆಯಷ್ಟೇ ಅಮೆರಿಕಾದಿಂದ ಬಂದಿದ್ದರು : ಬೆಂಕಿಯಲ್ಲಿ ತಾಯಿ,ಮಗಳು ಸಜೀವ ದಹನ..!