in

ಹಣಕಾಸು ವಿಚಾರಕ್ಕೆ ಅಣ್ಣತಮ್ಮಂದಿರ ನಡುವೆ ಜಗಳ..ಕೊಲೆಯಲ್ಲಿ ಅಂತ್ಯ..!

suddione whatsapp group join

ಮಂಡ್ಯ: ಹಣ ಕಂಡರೆ ಹೆಣಾನು ಬಾಯಿ ಬಿಡುತ್ತೆ ಅನ್ನೋದು ಗಾದೆ ಮಾತು. ಹಣದ ಮುಂದೆ ಯಾವ ಸಂಬಂಧಕ್ಕೂ ಬೆಲೆ ಇಲ್ಲ ಅನ್ನೋದು ಲೋಕ ರೂಢಿ ಮಾತು. ಅದರಂತೆ ಅದೆಷ್ಟೋ ಘಟನೆಗಳು ನಡೆಯುತ್ತಿರುತ್ತವೆ. ಇದೀಗ ಮಂಡ್ಯದಲ್ಲೂ ಹಣಕ್ಕಾಗಿಯೇ ಅಣ್ಣ-ತಮ್ಮನ ನಡುವಿನ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.

ಮಂಡ್ಯ ನಗರದ ವಿದ್ಯಾನಗರದಲ್ಲಿ ಈ ಘಟನೆ ನಡೆದಿದೆ. ಮಹೇಶ್ (54) ಕೊಲೆಯಾದ ವ್ಯಕ್ತಿ. ರೇಣುಕಾ ಪ್ರಸಾದ್ ಎಂಬಾತ ಕೊಲೆ ಮಾಡಿದಾತ. ರೇಣುಕಾ ಚಿಕ್ಕವನು. ಹಣದ ವಿಚಾರಕ್ಕೆ ಅಣ್ಣ ಮಹೇಶ್ ನನ್ನೇ ಕೊಲೆ ಮಾಡಿದ್ದಾನೆ.

ರೇಣುಕಪ್ರಸಾದ್ ಬ್ಯಾಂಕ್ ವೊಂದರಲ್ಲಿ ಅಣ್ಣನಿಗಾಗಿ ಶ್ಯೂರಿಟಿ ಹಾಕಿ ಸಾಲ ಕೊಡಿಸಿದ್ದ. ಆದ್ರೆ ಮಹೇಶ್ ಸರಿಯಾಗಿ ಸಾಲ ತೀರಿಸದ ಕಾರಣ ಬ್ಯಾಂಕ್ ನವರು ರೇಣುಕಾ‌ಪ್ರಸಾದ್ ಗೆ ಕೇಳೋದಕ್ಕೆ ಶುರು ಮಾಡಿದ್ದಾರೆ. ಈ ವಿಚಾರದಿಂದ ನೊಂದ ರೇಣುಕಾಪ್ರಸಾದ್ ಅಣ್ಣ ಮಹೇಶ್ ಬಳಿ ಜಗಳವಾಡೋದಕ್ಕೆ ಶುರು ಮಾಡಿದ್ದಾನೆ.

ಈರುಳ್ಳಿ ವ್ಯಾಪಾರ ಮಾಡುತ್ತಿದ್ದ ಮಹೇಶ್, ಕಂತು ಕಟ್ಟೋದಕ್ಕೆ ಹಣವಿಲ್ಲ ಎಂದಿದ್ದಾರೆ. ಜಗಳ ಅತಿರೇಕಕ್ಕೆ ಹೋಗಿ, ರೇಣುಕಪ್ರಸಾದ್ ಅಣ್ಣ ಮಹೇಶ್ ಗೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾನೆ. ಈ ಸಂಬಂಧ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ರೋಟರಿ ಸಂಸ್ಥೆ ವಿಶ್ವದಲ್ಲಿಯೇ ಅತ್ಯುತ್ತಮ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದೆ : ಮಧುಪ್ರಸಾದ್

ಸದ್ಯದಲ್ಲೇ ಮತ್ತಿಬ್ಬರು ನಾಯಕರು ಜೆಡಿಎಸ್ ಸೇರ್ಪಡೆ..!?