ಸುದ್ದಿಒನ್, ಚಿತ್ರದುರ್ಗ, ಆ.31 : ಇಲ್ಲಿನ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಶಾಖಾ ಮಠದಲ್ಲಿ ಶ್ರೀ ಗುರುರಾಘವೇಂದ್ರ ಸ್ವಾಮಿಗಳ 352 ನೇ ಆರಾಧನಾ ಮಹೋತ್ಸವದ ಅಂಗವಾಗಿ ಪೂರ್ವಾರಾಧನೆ ವಿಜೃಂಭಣೆಯಿಂದ ನೆರವೇರುತ್ತಿದೆ.
ಸುದ್ದಿಒನ್, ಚಿತ್ರದುರ್ಗ, ಆ.31 : ಇಲ್ಲಿನ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಶಾಖಾ ಮಠದಲ್ಲಿ ಶ್ರೀ ಗುರುರಾಘವೇಂದ್ರ ಸ್ವಾಮಿಗಳ 352 ನೇ ಆರಾಧನಾ ಮಹೋತ್ಸವದ ಅಂಗವಾಗಿ ಪೂರ್ವಾರಾಧನೆ ವಿಜೃಂಭಣೆಯಿಂದ ನೆರವೇರುತ್ತಿದೆ. https://t.co/j4m8PGno1O pic.twitter.com/RZDbCWDynb
— suddione-kannada News (@suddione) August 31, 2023
ಶ್ರೀ ಮಠದಲ್ಲಿ ಆರಾಧನಾ ಮಹೋತ್ಸವದ ಮೂರನೆಯ ಪೂರ್ವಾರಾಧನೆ ದಿನವಾದ ಇಂದು ಬೆಳಿಗ್ಗೆಯಿಂದಲೇ ಶ್ರೀ ಗುರುರಾಯರ ವೃಂದಾವನಕ್ಕೆ ನಿರ್ಮಾಲ್ಯ, ಅಷ್ಟೋತ್ತರ ಸಹಿತ ವಿಶೇಷ ಫಲ ಪಂಚಾಮೃತ ಅಭಿಷೇಕ, ವಿಶೇಷ ಬಾಳೆದಿಂಡಿನ ಅಲಂಕಾರ, ಉತ್ಸವರಾಯರ ಪಾದಪೂಜೆ, ಕನಕಾಭಿಷೇಕ, ಮಧ್ಯಾಹ್ನ ನೈವೇದ್ಯ, ಅಲಂಕಾರ ಪಂಕ್ತಿ, ಹಸ್ತೋದಕ, ಮಹಾ ಮಂಗಳಾರತಿ, ತೀರ್ಥ ಪ್ರಸಾದಗಳು ನೆರವೇರಿದವು. ಸಾವಿರಾರು ಮಂದಿ ಭಕ್ತಾದಿಗಳು ಅನ್ನದಾನ ಪ್ರಸಾದ ಸ್ವೀಕರಿಸಿದರು.
ಈ ದಿನದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಂಜೆ ಶ್ರೀ ಪಾಂಡುರಂಗ ಭಜನಾಮಂಡಳಿಯವರಿಂದ ಭಜನೆ, ಶ್ರೀಮತಿ ಸಿಂಧೂರ, ಕುಮಾರಿ ಸೌಂದರ್ಯ, ಸಂಗೀತಾ ಅವರಿಂದ ಭರತನಾಟ್ಯ ಕಾರ್ಯಕ್ರಮಗಳು ನಡೆಯುತ್ತಿವೆ.
ತದನಂತರದಲ್ಲಿ ರಜತ ರಥೋತ್ಸವ, ಸ್ವಸ್ತಿವಾಚನ, ಅಷ್ಟಾವಧಾನ, ಮಹಾಮಂಗಳಾರತಿಯ ಕಾರ್ಯಕ್ರಮಗಳು ನಡೆಯಲಿವೆ.
ಸೆಪ್ಟೆಂಬರ್ 1 ರಂದು ಮಧ್ಯಾರಾಧನೆ ಹಾಗೂ ಹಾಗೂ ಸೆಪ್ಟೆಂಬರ್ 2 ರಂದು ಉತ್ತರಾರಾಧನೆಯ ಕಾರ್ಯಕ್ರಮಗಳಲ್ಲಿಯೂ ಸಕಲ ಸದ್ಭಕ್ತರು ಪಾಲ್ಗೊಂಡು ಶ್ರೀ ಗುರುರಾಯರ ದರ್ಶನ ಪಡೆದು ಪ್ರಸಾದಾನುಗ್ರಹಗಳಿಗೆ ಭಾಜನರಾಗಬೇಕೆಂದು ಶ್ರೀಮಠದ ವ್ಯವಸ್ಥಾಪಕರಾದ ಪ್ರಾಣೇಶ್ ಕೊಪ್ಪರ್ ಅವರು ಹಾಗೂ ಗೌರವ ವಿಚಾರಣಕರ್ತರಾದ ಗೋವಿಂದಮೂರ್ತಿ ಅವರು ಸದ್ಭಕ್ತರಲ್ಲಿ ವಿನಂತಿಸಿದ್ದಾರೆ.