Punjab election: ಮುಖ್ಯಮಂತ್ರಿ ಅಭ್ಯರ್ಥಿ ಘೋಷಿಸಿದ ಎಎಪಿ.. ಪಂಜಾಬ್ ಜನರ ಆಯ್ಕೆ ಇವರೇ ನೋಡಿ..!

ನವದೆಹಲಿ: ಚುನಾವಣಾ ಆಯೋಗ ಪಂಚ ರಾಜ್ಯಗಳ ಚುನಾವಣೆಯ ದಿನಾಂಕವನ್ನ ಘೋಷಣೆ ಮಾಡಿದೆ. ಫೆಬ್ರವರಿ 10 ರಿಂದ ನಡೆಯುವ ಚುನಾವಣೆಗೆ ಪಕ್ಷಗಳು ಅಭ್ಯರ್ಥಿಗಳ ಕಡೆ ಗಮನ ಹರಿಸಿವೆ. ಜೊತೆಗೆ ಪ್ರಚಾರದ ಫ್ಲ್ಯಾನ್ ಸಿದ್ಧಪಡಿಸಿಕೊಳ್ಳುತ್ತಿವೆ. ಈ ಮಧ್ಯೆ ದೆಹಲಿ ಸಿಎಂ ವಿಭಿನ್ನವಾಗಿ ಥಿಂಕ್ ಮಾಡಿದ್ದಾರೆ.

ಹೌದು, ಸಿಎಂ ಕೇಜ್ರಿವಾಲ್ ಪಂಜಾಬ್ ಮತದಾರರನ್ನ ಸೆಳೆಯಲು ಸಿಎಂ ಅಭ್ಯರ್ಥಿ ಆಯ್ಕೆಯನ್ನ ಜನರಿಗೆ ಬಿಟ್ಟಿದ್ದರು. ಇದೀಗ ಪಂಜಾಬ್ ಜನರೇ ತಮ್ಮ ಮುಖ್ಯಮಂತ್ರಿ ಯಾರಾಗಬೇಕು ಎಂದು ತೀರ್ಮಾನಿಸಿದ್ದಾರೆ. ಜನರ ಆಯ್ಕೆಗೆ ತಕ್ಕಂತೆ ಎಎಪಿ ತಮ್ಮ ಪಕ್ಷದ ಅಭ್ಯರ್ಥಿಯನ್ನು ಘೋಷಣೆ ಮಾಡಿದ್ದಾರೆ.

ಪಂಜಾಬ್ ನ ಸಂಗ್ರೂರ್ ಕ್ಷೇತ್ರದಿಂದ ಅದಾಗಲೇ ಎರಡು ಬಾರಿ ಸಂಸದರಾಗಿ ಆಯ್ಕೆ ಆಗಿದ್ದ ಭಗವಂತ್ ಮಾನ್ ಅವರನ್ನೇ ಜನ ಈ ಬಾರಿಯ ಮುಖ್ಯಮಂತ್ರಿ ಆಗುವಂತೆ ಬಯಸಿದ್ದಾರೆ. ಎಎಪಿ ಪಕ್ಷ ನಿಮ್ಮ ಮುಖ್ಯಮಂತ್ರಿಯನ್ನ ನೀವೆ ಆಯ್ಕೆ ಮಾಡಿ ಎಂದು ಒಂದು ಫೋನ್ ನಂಬರ್ ನೀಡಿತ್ತು. ಅದಕ್ಕೆ ವಾಟ್ಸಾಪ್, ಕರೆ ಮಾಡುವ ಮೂಲಕ ಮುಖ್ಯಮಂತ್ರಿ ಹೆಸರನ್ನ ಸೂಚಿಸಲು ತಿಳಿಸಲಾಗಿತ್ತು. ಅದರಂತೆ 97 ರಷ್ಟು ಜನ ಆಯ್ಕೆ‌ಮಾಡಿರುವುದು ಭಗವಂತ್ ಮಾನ್ ಅವರನ್ನ. ಇನ್ನಳಿದ 3% ಜನ ನವಜೋತ್ ಸಿಂಗ್ ಸಿಧು ಅವರನ್ನ ಆಯ್ಕೆ ಮಾಡಿದ್ದಾರೆ.

ಜನರ ಆಯ್ಜೆ ಅನುಸಾರ ಎಎಪಿಯಿಂದ ಪಂಜಾಬ್ ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆಯಾಗಿದೆ. ಜನರೇ ಅಯ್ಕೆ ಮಾಡಿರುವ ಕಾರಣ ಈ ಬಾರಿ ಪಂಜಾಬ್ ನಲ್ಲಿ ಎಎಪು ಗೆಲುವು ಖಚಿತ ಎಂಬ ಭರವಸೆ ಕೇಜ್ರಿವಾಲ್ ಬಳಗಕ್ಕೆ ಹುಟ್ಟಿಕೊಂಡಿದೆ.

Share This Article
Leave a Comment

Leave a Reply

Your email address will not be published. Required fields are marked *