ಹಾವೇರಿ: ಪುನೀತ್ ರಾಜ್ ಕುಮಾರ್ ಅಂದ್ರೆ ಒಂದು ಎರಡು ವರ್ಗಕ್ಕಲ್ಲ. ಸಿನಿಮಾ ಪ್ರೀತಿಸುವ ಎಲ್ಲಾ ವರ್ಗದವರಿಗೆ ಅಪ್ಪು ಅಂದ್ರೆ ಪ್ರೀತಿ. ಹೀಗಿರುವಾಗ ಅಪ್ಪು ಇನ್ನಿಲ್ಲ ಅಂದಾಗ ಅದನ್ನ ಸಹಿಸುವುದಾದರೂ ಹೇಗೆ. ಹತ್ರತ್ರ 25 ಲಕ್ಷ ಜನ ಅಪ್ಪು ಅಂತಿಮ ದರ್ಶನ ಪಡೆದಿದ್ದಾರೆ. ಇನ್ನು ಅದೆಷ್ಟೋ ಜನಕ್ಕೆ ಅಂತಿಮ ದರ್ಶನ ಸಿಗಲೇ ಇಲ. ಹೀಗಿರುವಾಗ ಈಗಲೂ ಸಮಾಧಿ ಬಳಿ ತೆರಳಿ ದರ್ಶನ ಪಡೆದು ಗೋಳಾಡುತ್ತಿದ್ದಾರೆ. ಅಲ್ಲೊಂದು ಗ್ರಾಮ ಅಪ್ಪುಗೆ ಶ್ರದ್ಧಾಂಜಲಿ ಸಲ್ಲಿಸಿದೆ.
ಹಾವೇರಿ ತಾಲೂಕಿನ ಕುಳೇನೂರು ಗ್ರಾಮದಲ್ಲಿ ಅಪ್ಪು ಅಗಲಿಕೆ ನೋವು ಮನೆ ಮಾಡಿದೆ. ಇದ್ದ ಹಬ್ಬವನ್ನ ಕೈ ಬಿಟ್ಟು ಇಡೀ ಗ್ರಾಮ ಶ್ರದ್ಧಾಂಜಲಿ ಸಲ್ಲಿಸಿದೆ. ಪ್ರತಿ ವರ್ಷ ಈ ಊರಲ್ಲಿ ಹೋರಿ ಬೆದರಿಸುವ ಹಬ್ಬವನ್ನ ವಿಜೃಂಭಣೆಯಿಂದ ಆಚರಿಸಿಕೊಂಡು ಬಂದಿದ್ದರು. ಆದ್ರೆ ಅಪ್ಪು ಅಗಲಿಕೆಯಿಂದ ನೊಂದ ಗ್ರಾಮಸ್ಥರು, ಹಬ್ಬ ಬಿಟ್ಟು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಹತ್ತು ನಿಮಿಷಗಳ ಮೌನಾಚರಣೆ ಮಾಡಿ, ಅಪ್ಪು ಆತ್ಮಕ್ಕೆ ಶಾಂತಿ ಸಿಗಲೆಂದು ಬೇಡಿಕೊಂಡಿದ್ದಾರೆ. ಬಸವೇಶ್ವರ ದೇವಾಸ್ಥಾನದಲ್ಲಿ ಅಪ್ಪು ಫೋಟೋ ಇಟ್ಟು ಪೂಜೆ ಸಲ್ಲಿಸಿದ್ದಾರೆ. ಎಲ್ಲರ ಬಾಯಲ್ಲೂ ಅಪ್ಪು ಅಪ್ಪು ಎಂಬ ಘೋಷ ವಾಕ್ಯ ಜೋರಾಗಿ ಕೇಳಿ ಬರ್ತಾ ಇತ್ತು. ಇದು ಅವರ ಅಭಿಮಾನವನ್ನ ಎತ್ತಿ ತೋರಿಸುತ್ತಿತ್ತು.
ಬೆಂಗಳೂರು: ರಾಜ್ಯಾದ್ಯಂತ ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳ ಹೆಚ್ಚಾಗಿದೆ. ಇದರಿಂದ ಅದೆಷ್ಟೋ ಜನ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಸಾಲ ಕೊಟ್ಟ…
ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 07 : ಇಂದಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಶೇಂಗಾ, ಕಡಲೆ, ಮೆಕ್ಕೆಜೋಳ ಸೇರಿದಂತೆ ಇತರೆ…
ಬೆಂಗಳೂರು: ನಟ ಡಾಲಿ ಧನಂಜಯ್ ಮದುವೆ ಸಂಭ್ರಮದಲ್ಲಿದ್ದಾರೆ. ಚಿತ್ರದುರ್ಗದ ಅಳಿಯ ಬೇರೆ ಆಗ್ತಾ ಇದ್ದಾರೆ. ಧನ್ಯತಾ ಮೂಲತಃ ಚಿತ್ರದುರ್ಗದವರು. ಆದರೆ…
ಬೆಂಗಳೂರು: ಇಂದು ಹೈಕೋರ್ಟ್ ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದು ಸಿಎಂ ಸಿದ್ದರಾಮಯ್ಯ ಅವರಿಗೆ ಬಿಗ್ ರಿಲೀಫ್ ನೀಡಿದೆ. ಈ…
ಈ ರಾಶಿಯವರಿಗೆ ಒಳ್ಳೆಯ ಉದ್ಯೋಗ ಅವಕಾಶಗಳು ಒದಗಿ ಬರಲಿವೆ, ಈ ರಾಶಿಯವರಿಗೆ ಉತ್ತಮ ಸಂಗಾತಿ ಸಿಗುವರು, ಶುಕ್ರವಾರದ ರಾಶಿ ಭವಿಷ್ಯ…
144 ವರ್ಷಗಳಿಗೊಮ್ಮೆ ಬರುವ ಮಹಾಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡಿದರೆ ಕರ್ಮ ಕಳೆಯುತ್ತದೆ ಎಂದು ನಂಬಲಾಗಿದೆ. ಹೀಗಾಗಿ ಕೋಟ್ಯಾಂತರ ಮಂದಿ…