ಸಾರ್ವಜನಿಕರು ಕಸವನ್ನು ರಸ್ತೆಗೆ ತಂದು ಸುರಿಯಬಾರದು, ಅವರ ಜವಾಬ್ದಾರಿಯೂ ಕೂಡು ಬಹಳಷ್ಟಿದೆ : ರೇಣುಕಾ

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಸೆ.12 : ಚಿತ್ರದುರ್ಗ ನಗರವನ್ನು ಪ್ಲಾಸ್ಟಿಕ್ ಮುಕ್ತ, ಸ್ವಚ್ಚ, ಹಸಿರು ನಗರವನ್ನಾಗಿಸುವ ಗುರಿಯಿಟ್ಟುಕೊಂಡಿದ್ದು, ಸಾರ್ವಜನಿಕರು ನಗರಸಭೆಯೊಂದಿಗೆ ಕೈಜೋಡಿಸುವಂತೆ ನಗರಸಭೆ ಪೌರಾಯುಕ್ತರಾದ ರೇಣುಕ ಮನವಿ ಮಾಡಿದರು.

ಜಿಲ್ಲಾಡಳಿತ, ನಗರಸಭೆ ವತಿಯಿಂದ ಪೌರ ಕಾರ್ಮಿಕರು, ಚಾಲಕರು, ಸ್ಯಾನಿಟರಿ ಸೂಪರ್‍ವೈಸರ್, ಇತರೆ ಸಿಬ್ಬಂದಿಗಳಿಗೆ ಘನ ತ್ಯಾಜ್ಯ ಹಸಿ ಕಸ ಮತ್ತು ಒಣ ಕಸ ಬೇರ್ಪಡಿಸುವ ಕುರಿತು ನಗರಸಭೆ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಪ್ರತಿ ವರ್ಷವೂ ಒಂದಲ್ಲ ಒಂದು ರೀತಿಯಲ್ಲಿ ತರಬೇತಿಯನ್ನು ನೀಡಲಾಗುತ್ತಿದೆ. ಆದರೆ ಮನೆ ಮನೆಗೆ ಹೋಗಿ ಹಸಿ ಕಸ ಒಣ ಕಸ ಸಂಗ್ರಹಿಸುವವರು ನೀವುಗಳು ಮೊದಲು ಕಾನೂನು ಸರಿಯಾಗಿ ತಿಳಿದುಕೊಂಡಾಗ ಸಾರ್ವಜನಿಕರಲ್ಲಿ ಅರಿವು ಮೂಡಿಸಬಹುದು. ಕಸವನ್ನು ರಸ್ತೆಗೆ ತಂದು ಸುರಿಯಬಾರದು. ಕಸ ವಿಲೇವಾರಿ ಮಾಡುವುದು ಕೇವಲ ನಗರಸಭೆ ಕೆಲಸವಲ್ಲ. ಸಾರ್ವಜನಿಕರ ಜವಾಬ್ದಾರಿ ಕೂಡು ಬಹಳಷ್ಟಿದೆ ಎನ್ನುವುದನ್ನು ಮನವರಿಕೆ ಮಾಡಿ ಇಲ್ಲದಿದ್ದರೆ ದಂಡ ವಿಧಿಸುವ ಅವಕಾಶವಿದೆ ಎಂದು ಹೇಳಿದರು.

ಹಾಸನದ ಕ್ಲಿಯರಿನ್ ಸಂಸ್ಥೆ ಸಿ.ಇ.ಓ. ಚಂದ್ರಶೇಖರ್ ಹಸಿಕಸ ಮತ್ತು ಒಣ ಕಸವನ್ನು ಸಂಗ್ರಹಿಸುವ ಕುರಿತು ಪೌರ ಕಾರ್ಮಿಕರು, ಚಾಲಕರು, ಸ್ಯಾನಿಟರಿ ಸೂಪರ್‍ವೈಸರ್ ಇತರೆ ಸಿಬ್ಬಂದಿಗಳಿಗೆ ಅರಿವು ಮೂಡಿಸಿ ಹಸಿಕಸವನ್ನು ಗೊಬ್ಬರವಾಗಿಸುವ ಬಕೆಟ್ ಪ್ರದರ್ಶಿಸಿ ಮಾತನಾಡುತ್ತ ಇದನ್ನು ಪ್ರತಿ ಮನೆಗಳಲ್ಲಿ ಉಪಯೋಗಿಸಿದರೆ ಕಸವನ್ನು ವಿಂಗಡಿಸುವ ಸಮಸ್ಯೆಯೇ ಎದುರಾಗುವುದಿಲ್ಲ. ಸಾಧ್ಯವಾದಷ್ಟು ಪ್ಲಾಸ್ಟಿಕ್ ಬಳಕೆಯನ್ನು ನಿಯಂತ್ರಿಸಬೇಕು. ಏಕೆಂದರೆ ಅದು ಮಣ್ಣಿನಲ್ಲಿ ಕೊಳೆಯುವುದಿಲ್ಲ. ಪರಿಸರಕ್ಕೆ ಹಾನಿಯುಂಟು ಮಾಡುತ್ತದೆ ಎಂದು ತಿಳಿಸಿದರು.

ಪರಿಸರ ಇಂಜಿನಿಯರ್ ಜಾಫರ್ ಮಾತನಾಡಿ ಹಸಿ ಕಸ ಒಣ ಕಸವನ್ನು ಯಾರು ಬೇರ್ಪಡಿಸಿ ನಗರಸಭೆ ವಾಹನಕ್ಕೆ ಹಾಕುವುದಿಲ್ಲವೋ ಅಂತಹವರ ಪಟ್ಟಿ ಮಾಡಿಕೊಂಡು ಬನ್ನಿ ದಂಡ ವಿಧಿಸುವ ಮೂಲಕ ಜಾಗೃತರನ್ನಾಗಿಸೋಣ. ಶೆಲ್, ಟ್ಯೂಬ್‍ಲೈಟ್, ಮೊಬೈಲ್ ಚಾರ್ಜರ್ ಇವುಗಳನ್ನು ಹಸಿ ಕಸದ ಜೊತೆ ಸೇರಿಸದೆ ಪ್ರತ್ಯೇಕವಾಗಿ ಕಸ ಸಂಗ್ರಹಿಸುವ ವಾಹನಕ್ಕೆ ಹಾಕುವಂತೆ ಅರಿವು ಮೂಡಿಸಿ ಎಂದು ಪೌರ ಕಾರ್ಮಿಕರು, ಚಾಲಕರು, ಸ್ಯಾನಿಟರಿ ಸೂಪರ್‍ವೈಸರ್ ಇವರುಗಳಿಗೆ ತಾಕೀತು ಮಾಡಿದರು.

ಆರೋಗ್ಯ ನಿರೀಕ್ಷಕರುಗಳಾದ ಸರಳ, ಭಾರತಿ, ನಿರ್ಮಲ, ನಾಗರಾಜ್, ಬಸವರಾಜ್ ಇವರುಗಳು ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

suddionenews

Recent Posts

ಉದ್ಯೋಗ ವಾರ್ತೆ : ಚಿತ್ರದುರ್ಗದಲ್ಲಿ ಮಾರ್ಚ್ 01 ರಂದು ಬೃಹತ್ ಉದ್ಯೋಗ ಮೇಳ

ಚಿತ್ರದುರ್ಗ. ಫೆ.24:  ಬರುವ ಮಾರ್ಚ್ 01 ರಂದು ಚಿತ್ರದುರ್ಗದ ಮುರುಘರಾಜೇಂದ್ರ ಕ್ರೀಡಾಂಗಣ (ಸರ್ಕಾರಿ ವಿಜ್ಞಾನ ಕಾಲೇಜು ಮೈದಾನ) ದಲ್ಲಿ ಬೃಹತ್…

2 hours ago

ಮಧ್ಯ ಕರ್ನಾಟಕದಲ್ಲಿಯೇ ಪ್ರಪ್ರಥಮ ENT ಲೇಸರ್ ಶಸ್ತ್ರಚಿಕಿತ್ಸಾ ಯಂತ್ರ ಲೋಕಾರ್ಪಣೆ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.…

3 hours ago

ಭದ್ರಾ ಮೇಲ್ದಂಡೆಗೆ ರಾಜ್ಯ ಬಜೆಟ್ ನಲ್ಲಿ ಐದು ಸಾವಿರ ಕೋಟಿ ಅನುದಾನಕ್ಕೆ ಹಕ್ಕೊತ್ತಾಯ

ಚಿತ್ರದುರ್ಗ, ಫೆಬ್ರವರಿ. 24 : ಭದ್ರ ಮೇಲ್ದಂಡೆ ಯೋಜನೆಗೆ ಮುಂಬರುವ ರಾಜ್ಯ ಬಜೆಟ್ ನಲ್ಲಿ ಕನಿಷ್ಟ ಐದು ಸಾವಿರ ಕೋಟಿ…

3 hours ago

ಶಾಲಾ ಪಠ್ಯದಲ್ಲಿ ಸಂಭಾಜಿ ಜೀವನ ಸೇರಿಸಲು ಒತ್ತಾಯ ; ಕಾರಣ ಏನು ಗೊತ್ತಾ..?

ವಿಕ್ಕಿ ಕೌಶಲ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ಛಾವಾ ಸಿನಿಮಾ ಎಲ್ಲೆಡೆ ಭರ್ಜರಿ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಇದರಲ್ಲಿ ಸಂಭಾಜಿ ಜೀವನ…

4 hours ago