Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಗೌರವ, ಪ್ರತಿಷ್ಠೆ ಮತ್ತು ಸಿರಿತನವನ್ನು ಮೀರಿ ಸಾರ್ವಜನಿಕ ಸೇವೆಯನ್ನು ಮಾಡಬೇಕು ; ತಹಶೀಲ್ದಾರ್  ರಘುಮೂರ್ತಿ

Facebook
Twitter
Telegram
WhatsApp

ಚಳ್ಳಕೆರೆ, (ಮೇ.12) : ಗೌರವ, ಪ್ರತಿಷ್ಠೆ ಮತ್ತು ಸಿರಿತನವನ್ನು ಮೀರಿ ಸಾರ್ವಜನಿಕ ಸೇವೆಯನ್ನು ಮಾಡಿದರೆ ನಾವು ಸತ್ತ ಮೇಲೂ ಜೀವಂತವಾಗಿರಬಹುದೆಂದು ತಹಶೀಲ್ದಾರ್  ರಘುಮೂರ್ತಿ ಹೇಳಿದರು.

ಸಾರ್ವಜನಿಕ ಆಸ್ಪತ್ರೆಯಲ್ಲಿ ದಾದಿಯರು ಏರ್ಪಡಿಸಿದ್ದ ಅಂತರಾಷ್ಟ್ರೀಯ ವಿಶ್ವ ದಾದಿಯರ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, 1820 ರಲ್ಲಿ ಜನಿಸಿದ ಫ್ಲಾರೆನ್ಸ್ ನೈಟಿಂಗೇಲ್ ಅವರು ತಮ್ಮ ಮನೆತನ ಅತ್ಯಂತ ಶ್ರೀಮಂತ ಕುಟುಂಬ ವಿದ್ದರೂ, ವಿಲಾಸಿ ಜೀವನವನ್ನು ದೂರ ಮಾಡಿ ಸಾರ್ವಜನಿಕ ಸೇವೆಯಲ್ಲಿ ತಮ್ಮನ್ನು ಸಮರ್ಪಿಸಿಕೊಂಡು ರೋಗಿಗಳನ್ನು, ಮಿಲಿಟರಿ ಆಸ್ಪತ್ರೆಯಲ್ಲಿ ಎಲ್ಲಾ ಗಾಯಾಳುಗಳಿಗೆ ದೇವರ ರೂಪದಲ್ಲಿ ಸೇವೆ ಮಾಡಿ ಪ್ರತಿಯೊಬ್ಬ ಗಾಯಾಳುಗಳ ಪಾಲಿಗೆ ದೀಪದಾರಿಣಿ ಯಾಗಿ ಗೋಚರಿಸಿದರು.
ಸಮರ್ಪಣಾ ಮನೋಭಾವವಿರುವ ಅವರು ಕಾಲವಾದರೂ ಕೂಡ ಇಂದಿಗೂ ನಮ್ಮಗಳ ಮನಸ್ಸಿನಲ್ಲಿ ಜೀವಂತವಾಗಿದ್ದಾರೆ.

ಆರೋಗ್ಯ ಕ್ಷೇತ್ರದಲ್ಲಿ ತಮ್ಮದೇ ಕೆಲಸ ಕಾರ್ಯಗಳಿಂದ ಸೇವಾ ಮನೋಭಾವನೆಯಿಂದ ಜಗತ್ತಿಗೆ ಸ್ಪಷ್ಟ ಸಂದೇಶವನ್ನು ನೀಡಿದ್ದಾರೆ. ಅದರಂತೆ ಆರೋಗ್ಯ ಇಲಾಖೆ ಸಿಬ್ಬಂದಿಗಳು ಮಾನವೀಯ ನೆಲೆಯಲ್ಲಿ ಆಸ್ಪತ್ರೆಗೆ ಬರುವಂತಹ ರೋಗಿಗಳಿಗೆ ತಾಯಿ ಹೃದಯದಿಂದ ಅವರುಗಳನ್ನು ಆದರಿಸಿ ಸೇವೆಮಾಡುವಂತ ಅನಿವಾರ್ಯತೆ ಮತ್ತು ಅವಶ್ಯಕತೆಯಿದ್ದು ಚಳ್ಳಕೆರೆಯಂತಹ ತಾಲೂಕಿನಲ್ಲಿ ಈ ರೀತಿ ಸೇವೆಯನ್ನು ಮಾಡಿದರೆ ಜನ ಎಂದು ಕೂಡ  ತಮ್ಮನ್ನು ಪೂಜಿಸುತ್ತಾರೆ.

ಕೋವಿಡ್ ಸಮಯದಲ್ಲಿ ತಾವುಗಳು ಸಲ್ಲಿಸಿದ ಸೇವೆ ಅವಿಸ್ಮರಣೀಯ ಈ ಶತಮಾನದಲ್ಲಿ ಈ ಒಂದು ಸೇವೆಯನ್ನು ಮಾಡಲು ನಮ್ಮೆಲ್ಲರಿಗೂ ಕೂಡ ಅವಕಾಶ ಒದಗಿದೆ. ಈ ಅವಕಾಶವನ್ನು ಉಪಯೋಗಿಸಿಕೊಂಡು ತಾಲೂಕಾಡಳಿತ ಶೇಕಡ 108 ರಷ್ಟು ವ್ಯಾಕ್ಸಿನ್ ಕಾರ್ಯ ಪೂರ್ಣಗೊಳಿಸಿದ್ದೇವೆ.

ಮುಂದಿನ ದಿನಗಳಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಇನ್ನು ಉತ್ತಮ ಸೇವೆಯ ಮಾಡಲು  ಎಲ್ಲರಿಗೂ ಆತ್ಮಸ್ಥೈರ್ಯ ಪಾಲಿಸಲಿ ಎಂದು ಆಶಿಸಿದರು.

ಸಮಾರಂಭದಲ್ಲಿ ಸಾರ್ವಜನಿಕ ಆಸ್ಪತ್ರೆ ಆಡಳಿತ ಆಡಳಿತಾಧಿಕಾರಿ ಡಾಕ್ಟರ್ ವೆಂಕಟೇಶ್ ಮಾತನಾಡಿ ಆಸ್ಪತ್ರೆಯ ವಿವಿಧ ಸೇವೆಗಳನ್ನು ಕಾಲಕಾಲಕ್ಕೆ ಪೂರೈಸಿ ಸಾರ್ವಜನಿಕ ಆಸ್ಪತ್ರೆ ರಾಜ್ಯಕ್ಕೆ ಅಗ್ರ ಸ್ಥಾನದಲ್ಲಿದೆ. ಜೊತೆಗೆ ಮುಂದೆಯೂ ಕೂಡ ಆಸ್ಪತ್ರೆಯ ಘನತೆ ಗೌರವವನ್ನು ಸಿಬ್ಬಂದಿಯು ಪೂರೈಸಿ ಸಾರ್ವಜನಿಕರಿಗೆ ಉತ್ತಮ ಸೇವೆಯನ್ನು ಒದಗಿಸಲೆಂದು ಮನವಿ ಮಾಡಿದರು.

ಸಮಾರಂಭದಲ್ಲಿ ಮಕ್ಕಳ ತಜ್ಞರಾದ ತಿಪ್ಪೇಸ್ವಾಮಿ ಸಹಯ ಕ ಆರೋಗ್ಯ ಅಧಿಕಾರಿ  ತಿಪ್ಪೇಸ್ವಾಮಿ, ವಿಜಯ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ | ಕ್ರೂಸರ್ ವಾಹನ ಪಲ್ಟಿ  ಓರ್ವ ಸಾವು, 13 ಮಂದಿಗೆ ಗಾಯ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ಮಾರ್ಚ್. 28 : ತಾಲ್ಲೂಕಿನ ತಳಕು ಪೋಲೀಸ್ ಠಾಣೆ ವ್ಯಾಪ್ತಿಯ ರಾಷ್ಟೀಯ ಹೆದ್ದಾರಿ 150 ಎ

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕ್ವಾರಿ ಅಂಡ್ ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಷನ್‍ಗೆ ಶಕ್ತಿ ತುಂಬಬೇಕಾಗಿದೆ : ಅಬ್ದುಲ್ ಮಾಜಿದ್

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,    ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 28  : ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಭೆ ನಡೆಸಿ ಹೊಸ ಅಸೋಸಿಯೇಷನ್‍ಗೆ ಶಕ್ತಿ ತುಂಬಬೇಕಾಗಿದೆ

ಪ್ರಹ್ಲಾದ್ ಜೋಶಿಗೆ ಬೆಂಬಲ ನೀಡಿದ ವಾಲ್ಮೀಕಿ ಸಮಾಜ

ಹುಬ್ಬಳ್ಳಿ: ಧಾರವಾಡದಲ್ಲಿ ಪ್ರಹ್ಲಾದ ಜೋಶಿ ಅವರ ಸ್ಪರ್ಧೆಗೆ ದಿಂಗಾಲೇಶ್ವರ ಶ್ರೀಗಳ ಬೆಂಬಲಿಗರು ವಿರೋಧ ವ್ಯಕ್ತಪಡಿಸುತ್ತಿರುವ ಬೆನ್ನಲ್ಲೇ ಪ್ರಹ್ಲಾದ ಜೋಶಿ ಅವರ ಬೆಂಬಲಕ್ಕೆ ವಾಲ್ಮೀಕಿ ಸಮಾಜದ ಶ್ರೀಗಳು ನಿಂತಿದ್ದಾರೆ. ಇಂದು ಪ್ರಹ್ಲಾದ್ ಜೋಶಿ ಅವರ ಪರವಾಗಿ

error: Content is protected !!