Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ವಿಕಲಚೇತನರಿಗೆ ಪ್ರತ್ಯೇಕ ಬೋಗಿಗಳ ಅಳವಡಿಸಿ : ಬೀರಪ್ಪ ಅಂಡಗಿ ಚಿಲವಾಡಗಿ ಒತ್ತಾಯ

---Advertisement---

ಸುದ್ದಿಒನ್, ಕೊಪ್ಪಳ, ಜನವರಿ. 14 : ಪ್ರತಿಯೊಂದು ರೈಲುಗಳಿಗೆ ಕಡ್ಡಾಯವಾಗಿ ಮುಂದೆ ಒಂದು ಹಾಗೂ ಹಿಂದೆ ಒಂದು ಬೋಗಿಯನ್ನು ಅಳವಡಿಸುವಂತೆ ರೈಲ್ವೆ ಖಾತೆಯ ರಾಜ್ಯ ಸಚಿವರಾದ ವಿ.ಸೋಮಣ್ಣ ಅವರಿಗೆ ವಿಕಲಚೇತನ ನೌಕರರ ಸಂಘದ ವತಿಯಿಂದ ಮಂಗಳವಾರ ಮನವಿ ಪತ್ರ ಸಲ್ಲಿಸಲಾಯಿತು.

ಈ ಸಮಯದಲ್ಲಿ ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಚಿಲವಾಡಗಿ ಮಾತನಾಡಿ,ರಾಜ್ಯದಲ್ಲಿ ಸಂಚರಿಸುವ ಅನೇಕ ರೈಲುಗಳಲ್ಲಿ ವಿಕಲಚೇತನರಿಗಾಗಿ ಇರುವ ಯಾವುದೇ ಬೋಗಿಗಳು ಇಲ್ಲದ ಕಾರಣ ವಿಕಲಚೇತನರು ಪ್ರಯಾಣ ಮಾಡಲು ತೊಂದರೆ ಉಂಟಾಗುತ್ತಿದೆ.ವಿಕಲಚೇತನರ ಈ ಸಮಸ್ಯೆಗಳಿಗೆ ಪರಿಹಾರ ಸಿಗಬೇಕಾದರೆ ತಾವುಗಳು ರಾಜ್ಯದಲ್ಲಿ ಸಂಚಾರ ಮಾಡುವ ಎಲ್ಲಾ ರೈಲುಗಳಿಗೆ ಕಡ್ಡಾಯವಾಗಿ ಒಂದು ಮುಂದೆ ಹಾಗೂ ಒಂದು ಹಿಂದೆ ವಿಕಲಚೇತನರಿಗೆ ಮಾರ್ಪಾಡು ಮಾಡಿದ ಬೋಗಿಗಳನ್ನು ಅಳವಡಿಸುವಂತೆ ಸೂಚನೆ ನೀಡಬೇಕು ಎಂದು ಹೇಳಿದರು.

ಮನವಿ ಸ್ವೀಕರಿಸಿದ ಬಳಿದ ಸಚಿವರಾದ ವಿ.ಸೋಮಣ್ಣ ಮಾತನಾಡಿ,ವಿಕಲಚೇತನರು ಸಾಮಾನ್ಯರ ಹಾಗೇ ವೇಗವಾಗಿ ಹೋಗಿ ರೈಲು ಹತ್ತಲು ಸಾಧ್ಯವಾಗುವುದಿಲ್ಲ.ಆದ್ದರಿಂದ ಕೂಡಲೇ ಅಧಿಕಾರಿಗಳ ಸಭೆಯನ್ನು ಕರೆದು ಎಲ್ಲಾ ರೈಲುನಲ್ಲಿ ಅಳವಡಿಸುವಂತೆ ಮಾಡಿ ವಿಕಲಚೇತನರಿಗೆ ಅನುಕೂಲ ಮಾಡಿ ಕೊಡಲಾಗುತ್ತದೆ ಎಂದು ಹೇಳಿದರು.

ಈ‌ ಸಮಯದಲ್ಲಿ ವಿಕಲಚೇತನ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ ಬುಲ್ಟಿ,ಕೊಪ್ಪಳ ತಾಲೂಕ ಅಧ್ಯಕ್ಷರಾದ ಅಂದಪ್ಪ ಇದ್ಲಿ,ಜಿಲ್ಲಾ ಸಂಘದ ಪದಾಧಿಕಾರಿ ಬಸವರಾಜ ಮಾರನಬಸರಿ,ಶಶಿಧರ ಸೇರಿದಂತೆ ಮುಂತಾದವರು ಹಾಜರಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment