Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಪ್ರವರ್ಗ-1ರ ಜಾತಿಯ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸೌಲಭ್ಯ ಮತ್ತು ಶುಲ್ಕ ವಿನಾಯಿತಿ ನೀಡಿ : ಒಕ್ಕೂಟ ಒತ್ತಾಯ

Facebook
Twitter
Telegram
WhatsApp

ವರದಿ ಮತ್ತು ಫೋಟೋ : ಸುರೇಶ್ ಪಟ್ಟಣ್ 

ಚಿತ್ರದುರ್ಗ : (ಮೇ.29)  ಪ್ರವರ್ಗ-1ರ ಜಾತಿಗಳ ವಿದ್ಯಾರ್ಥಿಗಳು ಶಾಲಾ, ಕಾಲೇಜು ಮತ್ತು ವಿಶ್ವ ವಿದ್ಯಾಲಯದಲ್ಲಿ ಶೈಕ್ಷಣಿಕ ದಾಖಲಾತಿ ಸಮಯದಲ್ಲಿ ನಿರ್ದಿಷ್ಟ ಆದಾಯ ಮತ್ತು ಜಾತಿ ಪ್ರಮಾಣ ಪತ್ರಗಳನ್ನು ನೀಡಿದರೆ ಅಂತಹ ವಿದ್ಯಾರ್ಥಿಗಳಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವಿದ್ಯಾರ್ಥಿಗಳಿಗೆ ನೀಡುವಂತಹ ಸಂಪೂರ್ಣ ಶೈಕ್ಷಣಿಕ ಸೌಲಭ್ಯ ಮತ್ತು ಶುಲ್ಕ ವಿನಾಯಿತಿ ನೀಡಬೇಕು.

ಪ್ರವರ್ಗ-1ರ ಜಾತಿಯ ವಿದ್ಯಾರ್ಥಿಗಳಿಗೆ ಯಾವುದೇ ಆದಾಯ ಮಿತಿಯಿಲ್ಲದೆ ಸಂಪೂರ್ಣ ಶುಲ್ಕ ವಿನಾಯಿತಿ ಪಂಗಡದ 2012 ಇಸವಿಯ ಮುಂದೆಯೂ ನೀಡಿ ಶೈಕ್ಷಣಿಕ ಸೌಲಭ್ಯ ಕಲ್ಪಿಸಿ ಆದೇಶ ಹೊರಡಿಸಬೇಕು ಎಂದು ಸರ್ಕಾರವನ್ನು ಕರ್ನಾಟಕ ರಾಜ್ಯ ಪ್ರವರ್ಗ-1ರ ಜಾತಿಗಳ ಒಕ್ಕೂಟ ಒತ್ತಾಯಿಸಿದೆ.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಒಕ್ಕೂಟದ ಪ್ರದಾನ ಕಾರ್ಯದರ್ಶಿ ಎ.ವಿ.ಲೋಕೇಶಪ್ಪ ಈ ಮುಂಚೆ ನಮ್ಮ ಜನಾಂಗಕ್ಕೆ ಯಾವುದೇ ರೀತಿಯಾ ಆದಾಯ ಮಿತಿ ಇಲ್ಲದೆ ಆದಾಯ ಪ್ರಮಾಣ ಪತ್ರವನ್ನು ನೀಡಲಾಗುತ್ತಿತು. ಆದರೆ ಈಗ ಆದಾಯ ಮಿತಿಯನ್ನು ಸರ್ಕಾರದವತಿಯಿಂದ ಮಾಡಲಾಗಿದೆ. ಇದನ್ನು ಕೆಲವು ವಿವಿಯವರು ಒಪ್ಪಿಕೊಳ್ಳುತ್ತಾರೆ ಮತ್ತೆ ಕೆಲವರು ಒಪ್ಪುವುದಿಲ್ಲ ಇದಿರಿಂದ ಮಕ್ಕಳ ವಿದ್ಯಾಭ್ಯಾಸ ಕಷ್ಠವಾಗಿದೆ ಎಂದಿದ್ದಾರೆ.

ರಾಜ್ಯದ ಎಲ್ಲ ವಿಶ್ವ ವಿದ್ಯಾಲಯಗಳಲ್ಲಿ ಪ್ರವರ್ಗ-1ರ ಜಾತಿಗಳ ಕೋಶವನ್ನು ಮರು ಸ್ಥಾಪಿಸಿ ವಿದ್ಯಾರ್ಥಿ ನಿಲಯವನ್ನು ಪುನರಾರಂಭಿಸಿ ಇವುಗಳ ಮೇಲ್ವಿಚಾರಣೆ ಮತ್ತು ಉಸ್ತುವಾರಿಗಾಗಿ ನೋಡಲ್ ಅಧಿಕಾರಿಯನ್ನು ನೇಮಿಸಬೇಕು. ಪ್ರವರ್ಗ-1 ರಡಿ ಬರುವ ಎಲ್ಲಾ ಜಾತಿಗಳ ಕುಲಶಾಸ್ತ್ರೀಯ ಅಧ್ಯಯನ ನಡೆಸುವುದು, ಈ ಕಾರ್ಯಕ್ಕೆ ರೂ 5 ಕೋಟಿಗಳ ಅನುದಾನವನ್ನು ನಿಗದಿಪಡಿಸುವುದು. ಕುಲಶಾಸ್ತ್ರೀಯ ಅಧ್ಯಯನ ವರದಿ ಬಂದ ನಂತರ ಸದರಿ ಜಾತಿಗಳನ್ನು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಕ್ಕೆ ಸೇರಿಸಲು ರಾಜ್ಯ ಸರ್ಕಾರದ ವತಿಯಿಂದ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವುದು. ಮತ್ತು ಅದರ ಅನುಷ್ಠಾನಕ್ಕೆ ರಾಜ್ಯ ಸರ್ಕಾರದಿಂದ ಅಗತ್ಯ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಯಿತು.

ಪ್ರವರ್ಗ-1ರ ಜಾತಿಯಡಿ ಬರುವಂತಹ 49 ಜಾತಿಗಳ ಎಲ್ಲಾ ಸಂಘಟನೆಗಳಿಗೆ ಮತ್ತು ಅಲೆಮಾರಿ ಮತ್ತು ಅರೆ ಅಲೆಮಾರಿ 46 ಜಾತಿಗಳ ಸಂಘಟನೆಗಳಿಗೆ ತಮ್ಮದೇ ಆದ ಸ್ವಂತ ಸಮುದಾಯ, ವಿದ್ಯಾರ್ಥಿ ನಿಲಯ, ಗುರು ಮಠ, ಶಿಕ್ಷಣ ಸಂಸ್ಥೆ ಪ್ರಾರಂಭಿಸಲು ತಾಲ್ಲೂಕು / ಜಿಲ್ಲಾ / ರಾಜ್ಯ ಮಟ್ಟದಲ್ಲಿ ತಲಾ 1 ಎಕರೆ ಜಮೀನನ್ನು ಉಚಿತವಾಗಿ ನೀಡಿ ಪ್ರಾರಂಭಿಕ ಹಂತದಲ್ಲಿ ರೂ 1 ಕೋಟಿಗಳ ಅನುದಾನ ಬಿಡುಗಡೆ ಮಾಡಬೇಕು. ಹಾಗೆಯೇ ಈಗಾಗಲೆ ಈ ಸಂಘಟನೆಗಳ ಆಶ್ರಯದಲ್ಲಿ ನಿರ್ಮಾಣ ಹಂತದಲ್ಲಿರುವ ಸಮುದಾಯ ಭವನಗಳಿಗೆ ಕಾಮಗಾರಿ ಪೂರ್ಣಗೊಳಿಸಲು ಹೆಚ್ಚಿನ ಹಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಲಾಯಿತು.

ಸರ್ಕಾರದಿಂದ ಈಗಾಗಲೇ ಪ್ರಾರಂಭಿಸಿರುವ ಪ್ರವರ್ಗ-1ರ ಜಾತಿಗಳ ಅಭಿವೃದ್ಧಿ ನಿಗಮಗಳಿಗೆ ಪ್ರತಿ ವರ್ಷ ಪ್ರತ್ಯೇಕವಾಗಿ ತಲಾ 100 ಕೋಟಿ ರೂಪಾಯಿಗಳ ಅನುದಾನವನ್ನು ಕಡ್ಡಾಯವಾಗಿ ನೀಡಬೇಕು. ಪ್ರತಿ ವರ್ಷ ಆಯ-ವ್ಯಯದಲ್ಲಿ ಪ್ರವರ್ಗ-1 ರ ಜಾತಿಗಳಿಗೆ ಉಪಯುಕ್ತವಾಗುವಂತೆ ಯೋಜನೆಗಳನ್ನು ರೂಪಿಸಿ ಈ ವರ್ಗಕ್ಕೆ ಜನಸಂಖ್ಯೆಗೆ ಅನುಗುಣವಾಗಿ ಪ್ರತ್ಯೇಕವಾಗಿ ರೂ. 1500 ಕೋಟಿಗಳನ್ನು ಅನುದಾನವನ್ನು ನಿಗದಿ ಪಡಿಸಿ ಸಮರ್ಪಕವಾಗಿ ಯೋಜನೆ ರೂಪಿಸಬೇಕು.

ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ 1 ಕೋಟಿಗೂ ಹೆಚ್ಚು ಜನರಿರುವ ಈ 95 ಜಾತಿಗಳ ಮತ್ತು 376 ಉಪಜಾತಿಗಳಿರುವ ಪ್ರವರ್ಗ-1 ರ ಜನರಿಗೆ ಶೈಕ್ಷಣಿಕವಾಗಿ ಮತ್ತು ಔದ್ಯೋಗಿಕವಾಗಿ ಶೇಕಡಾ 4% ಮಾತ್ರ ಮೀಸಲಾತಿ ದೊರಕುತ್ತಿದೆ. ಆದರೆ ಶೇಕಡಾ 10% ಜನಸಂಖ್ಯೆ ಇರುವ ಪ್ರವರ್ಗ-1ರ ಜಾತಿಗಳ ಜನರಿಗೆ ಕನಿಷ್ಠ 8% ಗಿಂತ ಹೆಚ್ಚು ಮೀಸಲಾತಿ ನಿಗದಿಗೊಳಿಸಿ ಈ ಜನರ ಸಾಮಾಜಿಕ ನ್ಯಾಯ ಕಾಪಾಡಬೇಕು. ಈರ್ವರನ ಜಾತಿಗಳ ಜನರನ್ನು ಸದಸ್ಯರನ್ನಾಗಿ ಮಾಡಬೇಕು ಎಂದು ಸರ್ಕಾರವನ್ನು ಆಗ್ರಹಿಸಲಾಯಿತು.

ಅಲೆಮಾರಿ / ಅರೆ-ಅಲೆಮಾರಿ ಜನಾಂಗದ ಜನರ ಸರ್ವಾಂಗೀಣ ಅಭಿವೃದ್ಧಿಗಾಗಿ ಅಲೆಮಾರಿ | ಅರೆ-ಅಲೆಮಾರಿ ನಿಗಮಕ್ಕೆ ಪ್ರತಿ ವರ್ಷ ರೂ 300 ಕೋಟಿ ರೂಪಾಯಿಗಳಿಗೂ ಹೆಚ್ಚು ಅನುದಾನವನ್ನು ನೀಡಿ ಸದರಿ ಆರ್ಥಿಕ ವರ್ಷದಲ್ಲಿ ಈ ಜನರ ಸೌಲಭ್ಯಗಳಿಗಾಗಿ ಸದರಿ ಹಣ ಸಮರ್ಪಕವಾಗಿ ಹೆಚ್ಚಾಗುವಂತೆ ಕಾರ್ಯ ಯೋಜನೆ ರೂಪಿಸುವುದು.

ಪ್ರವರ್ಗ-1 ರ ಜಾತಿಗಳ ಭೂರಹಿತ ಬಡಕುಟುಂಬಗಳಿಗೆ ತಲಾ 2 ಎಕರೆ ಕೃಮ ಭೂಮಿಯನ್ನು ನೀಡಬೇಕು. ಹಾಗು ವಸತಿರಹಿತ ಬಡಕುಟುಂಬಗಳಿಗೆ ವಸತಿ ಸೌಲಭ್ಯನ್ನು ಕಲ್ಪಿಸಬೇಕು. .ಸರ್ಕಾರದ ಇಲಾಖೆಗಳಲ್ಲಿ, ನಿಗಮಗಳಲ್ಲಿ, ಮಂಡಳಿಗಳಲ್ಲಿ, ಪ್ರಾಧಿಕಾರಗಳಲ್ಲಿ, ಸ್ಥಳೀಯ ಸಂಸ್ಥೆಗಳ ಕಾಮಗಾರಿಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ ಮೀಸಲಾತಿ ನೀಡಿರುವಂತೆ ಪ್ರವರ್ಗ-1ರ ಜಾತಿಗಳ ಗುತ್ತಿಗೆದಾರರಿಗೆ ಟೆಂಡರ್ ನಲ್ಲಿ ಮೀಸಲಾತಿ ನೀಡಬೇಕು ಎಂದು ಮನವಿ ಮಾಡಲಾಯಿತು.

ಮುಂಬರುವ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ನಗರಸಭೆ, ಪುರಸಭೆ ಹಾಗೂ, ಮಹಾನಗರ ಪಾಲಿಕೆ, ಹಾಲು ಉತ್ಪಾದಕರ ಸಹಕಾರ ಸಂಘ, ಸ್ವಸಹಾಯ ಸಂಘಗಳು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಚುನಾವಣೆಗಳಲ್ಲಿ ಪ್ರವರ್ಗ-1ರ ಜಾತಿಗೆ ಮೀಸಲು ಸ್ಥಾನಗಳನ್ನು ಪ್ರತ್ಯೇಕವಾಗಿ ನಿಗದಿಪಡಿಸಿ ಶೀಘ್ರದಲ್ಲಿ ಆದೇಶ ಹೊರಡಿಸಿ ಅನುಷ್ಠಾನಕ್ಕೆ ತರಬೇಕು.

ಕರ್ನಾಟಕ ಕೈಗಾರಿಕಾ ಕಾರಿಡಾರ್ ಗಳಲ್ಲಿ ಮತ್ತು ಪ್ರದೇಶ ಕೈಗಾರಿಕಾ ಅಭಿವೃದ್ಧಿ ಮಂಡಳಿಗಳಲ್ಲಿ ಪ್ರವರ್ಗ-1ರ ಜಾತಿಗಳ ಉದ್ದಿಮೆದಾರರಿಗೆ ಮೀಸಲು ನೀಡಿ ಶೇಕಡ 50% ಅನುದಾನದಲ್ಲಿ ಕೈಗಾರಿಕಾ ನಿವೇಶನ ಮತ್ತು ಶೆಡ್ ಮಂಜೂರು ಮಾಡುವುದು. ಹಾಗು ಯಂತ್ರೋಪಕರಣಗಳ ಆಮದು ಮತ್ತು ಸ್ಥಾಪನೆಗೆ ಸಬ್ಸಿಡಿ ದರದಲ್ಲಿ ಆರ್ಥಿಕ ನೆರವು ನೀಡಬೇಕೆಂದು ಒತ್ತಾಯಿಸಲಾಯಿತು.

ಕರ್ನಾಟಕ ರಾಜ್ಯದಲ್ಲಿ ಒಂದು ಕೋಟಿಗೂ ಅಧಿಕ ಸಂಖ್ಯೆಯಲ್ಲಿರುವ ಪ್ರವರ್ಗ-1 ರ ಜಾತಿಗಳ ಜನರ ನ್ಯಾಯಭದ್ಧ ಬೇಡಿಕೆಗಳ ಈಡೇರಿಕೆಗಾಗಿ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದೆಂದರು.

ಗೋಷ್ಠಿಯಲ್ಲಿ ಒಕ್ಕೂಟದ ಉಪಾಧ್ಯಕ್ಷರಾದ ಡಾ,ಕೆ.ಜಗದೀಶ್, ಕಾರ್ಯಾದ್ಯಕ್ಷರಾದ ಡಾ.ಹೆಚ್.ವಿ.ಬಂಡಿ, ವಿಠಲ್ ಯಾದವ್, ಸಿದ್ದೇಶ್ ಜಿಲ್ಲಾಧ್ಯಕ್ಷ ಸುರೇಶ್ ಯಾದವ್, ಬಸವರಾಜು ಸೇರಿದಂತೆ ಇತರರು ಭಾಗವಹಿಸಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಮಹಿಳೆ ಆರ್ಥಿಕ ಸ್ವಾವಲಂಬಿಯಾಗಿರುವುದರಿಂದ ಸಾಮಾಜಿಕ ಪರಿಸ್ಥಿತಿ ಸುಧಾರಿಸಿದೆ : ಶ್ರೀಮತಿ ಶಶಿಕಲಾ ರವಿಶಂಕರ್

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ ಮಾ.19 :  ಪುರಾಣ ಕಾಲದಿಂದಲೂ ಸಹಾ ಮಹಿಳೆ ಶೋಷಣೆಗೆ ಒಳಗಾಗುತ್ತಿದ್ದಾಳೆ, ಅದು ಇಂದಿಗೂ ಸಹಾ ತಪ್ಪಿಲ್ಲ,

ಮಧುಮೇಹ ಇರುವವರು ತುಪ್ಪವನ್ನು ತಿನ್ನಬಹುದಾ ? ತಿಂದರೆ ಏನಾಗುತ್ತದೆ ?

ಸುದ್ದಿಒನ್ : ತುಪ್ಪದಲ್ಲಿ ಕೊಬ್ಬು ಹೆಚ್ಚಾಗಿ ಇರುತ್ತದೆ. ಆದರೆ, ಮಧುಮೇಹ ಇರುವವರು ಇದನ್ನು ತಿನ್ನಬಹುದೇ ಅಥವಾ ಇಲ್ಲವೇ ಎಂಬ ಅನುಮಾನವಿದೆ. ಆದರೆ, ತುಪ್ಪವನ್ನು ಔಷಧಿ ಎಂದು ಹೇಳಬಹುದು.  ಮಧುಮೇಹಿಗಳು ಇದನ್ನು ಸೇವಿಸುವುದರಿಂದ ಅನೇಕ ಪ್ರಯೋಜನಗಳಿವೆ.  ತುಪ್ಪವನ್ನು

EXAM Motivation : ಪರೀಕ್ಷೆಯಲ್ಲಿ ಫೇಲ್ ಆದರೆ ಆತ್ಮಹತ್ಯೆ ಪರಿಹಾರವಲ್ಲ : ಬದುಕನ್ನು ನಿರ್ಧರಿಸುವುದು ಪರೀಕ್ಷೆಗಳಲ್ಲ…!

ಸುದ್ದಿಒನ್ : ಇದು ಪರೀಕ್ಷೆಯ ಕಾಲ. ಈ ಸಮಯದಲ್ಲಿ ವಿದ್ಯಾರ್ಥಿಗಳು ಪರೀಕ್ಷೆಯ ಒತ್ತಡದಲ್ಲಿರುತ್ತಾರೆ. ಆದರೆ ಪರೀಕ್ಷೆಗಳು ಮಾತ್ರ ನಿಮ್ಮ ಜೀವನವನ್ನು ನಿರ್ಧರಿಸುವುದಿಲ್ಲ. ಪರೀಕ್ಷೆಗಳ ನಂತರ ಬಹಳಷ್ಟು ಜೀವನವು ನಮ್ಮ ಮುಂದಿದೆ. ಇತ್ತೀಚಿನ ದಿನಗಳಲ್ಲಿ ಪರೀಕ್ಷೆಯಲ್ಲಿ

error: Content is protected !!