ಬೇಡ ಜಂಗಮರನ್ನು ಎಸ್ಸಿ ಸಮುದಾಯಕ್ಕೆ ಸೇರಿಸದಂತೆ ವಿಧಾನಸೌಧದ ಮುಂದೆ ಘೋಷಣೆ

1 Min Read

ಬೆಂಗಳೂರು: ಡಾ.ಬಾಬು ಜಗಜೀವನರಾಮ್ ಅವರ ಪುಣ್ಯ ಸ್ಮರಣೆ ಹಿನ್ನೆಲೆ ಇಂದು ವಿಧಾನಸೌಧದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವಿಧಾನಸೌಧದಲ್ಲಿರುವ ಡಾ.ಬಾಬು ಜಗಜೀವನರಾಮ್ ಅವರ ಭಾವಚಿತ್ರಕ್ಕೆ ಸಿಎಂ ಬೊಮ್ಮಾಯಿ ಅವರು ಪುಷ್ಪ ನಮನ ಸಲ್ಲಿಸಿದ್ದಾರೆ. ಇದೆ ವೇಳೆ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ, ಮಾಜಿ ಸಚಿವ ಹೆಚ್.ಆಂಜನೇಯ, ಕೇಂದ್ರ ಸಚಿವ ಎ ನಾರಾಯಣಸ್ವಾಮಿ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಉಪಸ್ಥಿತರಿದ್ದು, ನಮನ ಸಲ್ಲಿಸಿದ್ದಾರೆ.

ಬೇಡ ಜಂಗಮ ಸಮುದಾಯದಕ್ಕೆ ಎಸ್.ಸಿ ಮೀಸಲಾತಿ ನೀಡುವುದು ಬೇಡ ಎಂದು ಆದಿಜಾಂಬವ ಸಂಘಟನೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ವಿಧಾನಸೌಧದಲ್ಲಿರುವ ಬಾಬು ಜಗಜೀವರಾವ ಪ್ರತಿಮೆ ಬಳಿ ಈ ಸಂಬಂಧ ಹೈಡ್ರಾಮ ನಡೆದಿದೆ. ಇಂದು ಬಾಬು ಜಗಜೀವರಾವ್ ಪುಣ್ಯ ಸ್ಮರಣೆ ಪ್ರಯುಕ್ತ ಸಿಎಂ ಮಾಲರ್ಪಣೆ ಮಾಡಿದ್ದಾರೆ. ಮಾಲರ್ಪಣೆ ವೇಳೆ ಘೋಷಣೆ ಕೂಗು ಮೂಲಕ ಆದಿಜಾಂಬವ ಸಂಘಟನೆ ಕಾರ್ಯಕರ್ತರು ಸಿಎಂ ಗಮನ ಸೆಳೆದಿದ್ದಾರೆ. ಆದಿಜಾಂಬವ ಸಂಘಟನೆ ರಾಜ್ಯಾಧ್ಯಕ್ಷ ಜಂಬೂದೀಪ ಸಿದ್ದರಾಜ್ ನೇತೃತ್ವದಲ್ಲಿ ಕಾರ್ಯಕರ್ತರು ಘೋಷಣೆ ಕೂಗಿದ್ದಾರೆ. ಬೇಡ ಜಂಗಮರು ಲಿಂಗಾಯತರು, ಅವರಿಗೆ ಎಸ್.ಸಿ‌ ಮೀಸಲಾತಿ ನೀಡುವುದು ಬೇಡ ಎಂದು ಘೋಷಣೆ ಕೂಗಿದ್ದಾರೆ. ಈ ವೇಳೆ ಘೋಷಣೆ ಕೂಗದಂತೆ ಪೊಲೀಸ್ ಸಿಬ್ಬಂದಿ ‌ತಡೆದಿದ್ದಾರೆ.

ಈ ವೇಳೆ ಮಾತನಾಡಿದ ಆದಿಜಾಂಬವ ಸಂಘಟನೆ ರಾಜ್ಯಾಧ್ಯಕ್ಷ ಸಿದ್ದರಾಜ್ ಮಾತನಾಡಿದ್ದು, ಲಿಂಗಾಯತರನ್ನ ಎಸ್ಸಿಗೆ ಸೇರಿಸಬೇಡಿ. ಸೇರಿಸಿದ್ರೆ ಎಸ್ಸಿಗಳಿಗೆ ಅನ್ಯಾಯವಾಗುತ್ತೆ. ಕೆಲವರು ಬೇಡ ಜಂಗಮರನ್ನು‌ ಎಸ್ಸಿಗೆ ಸೇರಿಸಿ ಅಂತಿದ್ದಾರೆ. ಅವ್ರು ಲಿಂಗಾಯತರು, ಎಸ್ಸಿಗೆ ಸೇರಿಸಿದ್ರೆ ನಮಗೆ ಅನ್ಯಾಯವಾಗುತ್ತದೆ ಎಂದು ಸಿದ್ದರಾಜು ಅಭಿಪ್ರಾಯಪಟ್ಟಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *