ಉತ್ತರ ಪ್ರದೇಶ: ಹಬ್ಬಕ್ಕೋ.. ಮದುವೆಗೋ, ಇನ್ಯಾವುದೇ ಸಮಾರಂಭವಿರಲಿ ಮೆಹಂದಿ ಹಾಕಿಸಿಕೊಳ್ಳಬೇಕು ಎಂದಾಕ್ಷಣಾ ಬುಕ್ ಮಾಡುವುದು ಮುಸ್ಲಿಂ ಮಹಿಳೆಯರನ್ನು. ಮೆಹಂದಿ ಹಾಕುವುದರಲ್ಲಿ ಮುಸ್ಲಿಂ ಮಹಿಳೆಯರು ಎತ್ತಿದ ಕೈ. ಹೀಗಾಗಿ ಮೆಹಂದಿ ಎಂದು ಬಂದಾಗ ಅವರನ್ನೇ ಕಾಂಟ್ಯಾಕ್ಟ್ ಮಾಡಲಾಗುತ್ತದೆ. ಆದರೆ ಉತ್ತರ ಪ್ರದೇಶದಲ್ಲಿ ಈಗ ಮುಸ್ಲಿಂ ಮಹಿಳೆಯರು ಹಿಂದೂಗಳಿಗೆ ಮೆಹಂದಿ ಹಾಕುವುದು ಬೇಡ ಎಂಬ ಸೂಚನೆ ನೀಡಲಾಗಿದೆ.
ಉತ್ತರ ಪ್ರದೇಶದಲ್ಲಿ ಇಂದು ಮತ್ತು ನಾಳೆ ಕಾರ್ವಾಚೌತ್ ನಡೆಯುತ್ತಿದೆ. ಇದು ವಿವಾಹಿತ ಮಹಿಳೆಯರಿಗೆ ತುಂಬಾನೇ ಮುಖ್ಯವಾದ ಆಚರಣೆಯಾಗಿದೆ. ಗಂಡಂದಿರ ಆಯಸ್ಸು ಹಾಗೂ ಆರೋಗ್ಯಕ್ಕಾಗಿ ಪತ್ನಿಯರು ಉಪವಾಸ ಇರುತ್ತಾರೆ. ಹಲವು ಆಚರಣೆಗಳ ನಡುವೆ ಮಹಿಳೆಯರ ಕೈಗೆ ಹಾಕುವ ಮೆಹಂದಿಯೇ ಇಲ್ಲಿನ ಹೈಲೇಟ್ ಆಗಿರುತ್ತದೆ.
ಆದರೆ ಈ ಬಾರಿ ಹಿಂದೂ ಮಹಿಳೆಯರು ಮುಸ್ಲಿಂ ಮಹಿಳೆಯರಿಂದ ಮೆಹಂದಿ ಹಾಕಿಸಿಕೊಳ್ಳಬಾರದು ಎಂಬುದಾಗಿ ಮುಜಾಫರ್ ನಗರದಲ್ಲಿ ಎಚ್ಚರಿಕೆ ನೀಡಲಾಗಿದೆಯಂತೆ. ವಿಶ್ವ ಹಿಂದೂ ಪರಿಷತ್ ಹಾಗೂ ಹಲವು ಹಿಂದೂಪರ ಸಂಘಟನೆಗಳು ಮೆಹಂದಿ ಕೇಂದ್ರವನ್ನು ಸ್ಥಾಪಿಸಲಾಗಿದ್ದು, ಹಿಂದೂಗಳಿಂದಾನೇ ಮೆಹಂದಿ ಹಾಕಿಸಿಕೊಳ್ಳಬೇಕೆಂದು ಸೂಚನೆ ನೀಡಿದ್ದಾರೆ. 13 ಗೋರಂಟಿ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಹಿಂದೂ ಮಹಳೆಯರನ್ನು ಮಾತ್ರ ನೇಮಕ ಮಾಡಲಾಗಿದೆ.