ಬೆಂಗಳೂರು: RSS ಕಾರ್ಯಕ್ರಮಗಳನ್ನು ಸರ್ಕಾರಿ ಜಾಗದಲ್ಲಿ ಮಾಡದಂತೆ ಬ್ಯಾನ್ ಮಾಡಬೇಕೆಂದು ಸಚಿವ ಪ್ರಿಯಾಂಕ್ ಖರ್ಗೆ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ಈ ಪತ್ರ ಬರೆದ ನಂತರ ಕಾಂಗ್ರೆಸ್ ನಾಯಕರು ಕೂಡ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ತಲೆದೂಗಿದ್ದಾರೆ. ಸದ್ಯ ರಾಜ್ಯದಲ್ಲಿ ಆರ್ ಎಸ್ಎಸ್ ವರ್ಸಸ್ ಕಾಂಗ್ರೆಸ್ ಆಗಿದೆ. ಬಿಜೆಪಿ ನಾಯಕರು ಸಹ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ನಾಯಕರ ಹೇಳಿಕೆಗೆ ಬಿಜೆಪಿ ನಾಯಕರು ಆಕ್ರೋಶ ಹೊರ ಹಾಕಿದ್ದಾರೆ. ಆರ್ ಎಸ್ ಎಸ್ ಬಗ್ಗೆ ಗೊತ್ತಿಲ್ಲದೆ ಇರುವವರೇ ಈ ರೀತಿ ಮಾತನಾಡ್ತಾ ಇದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಈ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಅವರು ಪ್ರಿಯಾಂಕ್ ಖರ್ಗೆ ಬರೆದ ಪತ್ರದ ಬಗ್ಗೆ ಮಾತನಾಡಿದ್ದಾರೆ.
ಪ್ರಿಯಾಂಕ್ ಖರ್ಗೆ ಪತ್ರ ಬರೆದಿರುವುದು ನಿಜ. RSS ನವರು ಸರ್ಕಾರಿ ಜಾಗಗಳನ್ನ ಬಳಸಿಕೊಳ್ತಾ ಇದ್ದಾರೆ. ನೀವೂ ತಮಿಳುನಾಡಿನಲ್ಲಿ ಸರ್ಕಾರ ಏನು ಮಾಡಿದೆ ಆ ರೀತಿ ಮಾಡಿ ಅಂತ ಬರೆದಿದ್ದಾರೆ. ನಾನು ಕೂಡ ಚೀಫ್ ಸೆಕ್ರೆಟರಿಗೆ ಪರಿಶೀಲನೆ ಮಾಡಿ ಅಂತ ಹೇಳಿದ್ದೀನಿ. ತಮಿಳುನಾಡಿನಲ್ಲಿ ಏನು ಮಾಡಿದ್ದಾರೆ ನೋಡಿ ಅಂತ ಹೇಳಿದ್ದೀನಿ ಎಂದಿದ್ದಾರೆ.
ಇದೇ ವೇಳೆ ಡಿಕೆ ಶಿವಕುಮಾರ್ ಅವರ ಹೇಳಿಕೆ ಸಂಬಂಧ ಪ್ರತಿಕ್ರಿಯೆ ನೀಡಿದ್ದು, ಹೈಕಮಾಂಡ್ ಅಂದ್ರೆ ಹೈಕಮಾಂಡ್. ಶಾಸಕರ ಅಭಿಪ್ರಾಯ ಮತ್ತು ಹೈಕಮಾಂಡ್ ಬಹಳ ಮುಖ್ಯ. ಶಾಸಕರ ಅಭಿಪ್ರಾಯವಿಲ್ಲದೆ ಯಾರೂ ಮುಖ್ಯಮಂತ್ರಿ ಆಗುವುದಕ್ಕೆ ಆಗಲ್ಲ. ಬಹುಮತವಿದ್ರೇನೆ ಮುಖ್ಯಮಂತ್ರಿ ಆಗೋದಕ್ಕೆ ಸಾಧ್ಯ. ಹಾಗೇ ಹೈಕಮಾಂಡ್ ಆಶೀರ್ವಾದವೂ ಇರಲೇಬೇಕು ಎಂದಿದ್ದಾರೆ.





