Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಗುಣಮಟ್ಟದ ಶಿಕ್ಷಣ ಹಾಗೂ ದೂರದೃಷ್ಟಿ ಯೋಜನೆಗಳಿಗೆ ಆದ್ಯತೆ : ಪ್ರಾಂಶುಪಾಲ ಎನ್.ಎಚ್. ಹನುಮಂತರಾಯ

Facebook
Twitter
Telegram
WhatsApp

ಮಾಹಿತಿ ಮತ್ತು ಫೋಟೋ ಕೃಪೆ : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ

ಚಿತ್ರದುರ್ಗ (ನ.17): ಚಿತ್ರದುರ್ಗದ ಸರ್ಕಾರಿ ವಿಜ್ಞಾನ ಕಾಲೇಜಿಗೆ ಇದೇ ನ. 29 ಮತ್ತು 30 ರಂದು ರಾಷ್ಟ್ರೀಯ ಮೌಲ್ಯಮಾಪನ ಹಾಗೂ ಅರ್ಹತಾ ಮಂಡಳಿ (ನ್ಯಾಕ್) ತಂಡ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದು, ಕಾಲೇಜಿನಲ್ಲಿ ಒದಗಿಸಲಾಗುತ್ತಿರುವ ಗುಣಮಟ್ಟದ ಶಿಕ್ಷಣ ಹಾಗೂ ನಿಗದಿಪಡಿಸಿರುವ ದೂರದೃಷ್ಟಿ ಯೋಜನೆಗಳ ಕುರಿತು ತಂಡಕ್ಕೆ ಮನವರಿಕೆ ಮಾಡಿಕೊಡಲಾಗುವುದು ಎಂದು ಕಾಲೇಜಿನ ಪ್ರಾಂಶುಪಾಲ ಎನ್.ಹೆಚ್. ಹನುಮಂತರಾಯ ಅವರು ಹೇಳಿದರು.

ಈ ಕುರಿತು ಸರ್ಕಾರಿ ವಿಜ್ಞಾನ ಕಾಲೇಜಿನ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ಮೌಲ್ಯಮಾಪನ ಹಾಗೂ ಅರ್ಹತಾ ಮಂಡಳಿಯ (ನ್ಯಾಕ್) ನಾಲ್ಕನೆ ಆವೃತ್ತಿಯ ಭೇಟಿ ಇದಾಗಿದ್ದು, ಈ ಹಿಂದಿನ ಅವಧಿಯಲ್ಲಿ ಸರ್ಕಾರಿ ವಿಜ್ಞಾನ ಕಾಲೇಜು ನ್ಯಾಕ್‍ನಿಂದ ಎ-ದರ್ಜೆಯನ್ನು ಪಡೆದುಕೊಂಡಿದೆ.

1948 ರಲ್ಲಿ ಇಂಟರ್‌ಮೀಡಿಯೇಟ್ ಕಾಲೇಜಾಗಿ ಪ್ರಾರಂಭವಾದ ಈ ಕಾಲೇಜು, ಬಳಿಕ 1957 ರಲ್ಲಿ ಪದವಿ ಕಾಲೇಜು ಆಗಿ ಉನ್ನತ ದರ್ಜೆಗೇರಿ ವಿಜ್ಞಾನ, ಕಲಾ ಹಾಗೂ ವಾಣಿಜ್ಯ ವಿಭಾಗಗಳಿದ್ದವು.  1973 ರಲ್ಲಿ ಎಲ್ಲ ವಿಭಾಗಗಳು ಪ್ರತ್ಯೇಕಗೊಂಡ ಬಳಿಕ ಈ ಕಾಲೇಜು ಸಂಪೂರ್ಣವಾಗಿ ವಿಜ್ಞಾನ ಕಾಲೇಜಾಗಿ ವಿಭಜಿತಗೊಂಡು, ಆಗಿನಿಂದಲೂ ಅತ್ಯುತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಾ ಬಂದಿದೆ.

ಸದ್ಯ ದಾವಣಗೆರೆ ವಿಶ್ವವಿದ್ಯಾಲಯದ ಅಧೀನದಲ್ಲಿ ಕಾಲೇಜು ಕಾರ್ಯನಿರ್ವಹಿಸುತ್ತಿದ್ದು, 2007 ರಿಂದ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಹಾಗೂ ಜೀವಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಶಿಕ್ಷಣವನ್ನೂ ನೀಡಲಾಗುತ್ತಿದೆ.

ಕಾಲೇಜಿನಿಂದ ದೂರದೃಷ್ಟಿ ಯೋಜನೆಯನ್ನು ಹಾಕಿಕೊಂಡು, ಉತ್ತಮ ಉದ್ದೇಶವನ್ನು ಹೊಂದಲಾಗಿದ್ದು, ಉತ್ಪಾದಕ ಶಿಕ್ಷಣವನ್ನು ತರಲು ಮತ್ತು ಉನ್ನತ ಶಿಕ್ಷಣದ ಮಾದರಿಯನ್ನು ಬೇಡಿಕೆಗಳ ಪೂರೈಸುವ ನವೀನ ಬೋಧನಾ ಕೌಶಲ್ಯಗಳನ್ನು ಕಾರ್ಯಗತಗೊಳಿಸಲು ಮತ್ತು ಆ ಮೂಲಕ ಸಮಾಜವನ್ನು ಗ್ರಹಿಸಲು ಸಮಗ್ರ ದೃಷ್ಟಿಕೋನವನ್ನು ನೀಡುವ ಉದ್ದೇಶ ಹೊಂದಲಾಗಿದೆ.

ಇದರ ಜೊತೆಗೆ  ಅಸ್ತಿತ್ವದಲ್ಲಿರುವ ಸಾಮಾಜಿಕ ಸಮಸ್ಯೆಗಳನ್ನು ಎದುರಿಸಲು ಗುಣಮಟ್ಟದ ಶಿಕ್ಷಣವನ್ನು ನೀಡಲು ಮತ್ತು ಸಂಭಾವ್ಯ ಮಾನವ ಸಂಪನ್ಮೂಲವನ್ನು ಅಭಿವೃದ್ಧಿಪಡಿಸಲು. ವಿದ್ಯಾರ್ಥಿಗಳಿಗೆ ಸಾಕಷ್ಟು ಸಂಶೋಧನೆ, ತಾಂತ್ರಿಕ ಮತ್ತು ವೃತ್ತಿಪರ ಕೌಶಲ್ಯಗಳನ್ನು ‘ಐಸಿಟಿ’ ಬಳಕೆಯಿಂದ ಕಲಿಸಿ, ಆ ಮೂಲಕ ಅವರನ್ನು ಬಹುಮುಖ ವ್ಯಕ್ತಿತ್ವವನ್ನಾಗಿ ಮಾಡುವ ಉದ್ದೇಶ ಹೊಂದಲಾಗಿದೆ.  ಕಲಿಯುವಂತಹ ಯುವಕÀರಿಗೆ ತಮ್ಮ ನವೀನ ವೈಜ್ಞಾನಿಕ ವಿಧಾನಗಳ ಮೂಲಕ ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸಲು ಉತ್ತಮ ಮಾರ್ಗಗಳು ಮತ್ತು ವಿಧಾನಗಳನ್ನು ಕಂಡುಕೊಳ್ಳಲು ಅವಕಾಶಗಳನ್ನು ಒದಗಿಸುವುದು, ನವೀನ ಸಂಶೋಧನಾ ಚಟುವಟಿಕೆಗಳನ್ನು ಉತ್ತೇಜಿಸಲು ಅಗತ್ಯವಾದ ಮೂಲಸೌಕರ್ಯಗಳನ್ನು ಹೆಚ್ಚಿಸಲು ಮತ್ತು ಅಗತ್ಯ ಪ್ರಯೋಗಾಲಯ ಸೌಲಭ್ಯಗಳನ್ನು ಒದಗಿಸುವುದು, ಜಾಗತಿಕ ಸವಾಲುಗಳನ್ನು ಎದುರಿಸಲು ಗುಣಮಟ್ಟದ ಶಿಕ್ಷಣದ ಮೂಲಕ ಅತ್ಯುತ್ತಮ ಮಾನವಶಕ್ತಿಯನ್ನು ಅಭಿವೃದ್ಧಿಪಡಿಸುವುದು, ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸಲು ವೃತ್ತಿ ಮಾರ್ಗದರ್ಶನ ನೀಡುವುದು, ಅಲ್ಲದೆ ಪರಿಸರ ಜಾಗೃತಿ ಮೂಡಿಸಿ, ಜವಾಬ್ದಾರಿಯುತ ನಾಗರಿಕರಾಗಲು ನೈತಿಕ ಮೌಲ್ಯಗಳನ್ನು ಬೆಳೆಸುವಂತಹ ಶಿಕ್ಷಣಕ್ಕೆ ಆದ್ಯತೆ ನೀಡಲು ಉದ್ದೇಶಿಸಲಾಗಿದೆ ಎಂದರು.

ಪ್ರಸ್ತುತ ಕಾಲೇಜಿನಲ್ಲಿ ಉತ್ತಮ ಅರ್ಹತೆ ಹೊಂದಿರುವ ಬೋಧಕರ ತಂಡವಿದ್ದು, ಒಟ್ಟು 39 ಖಾಯಂ ಅಧ್ಯಾಪಕರಿದ್ದಾರೆ,  ಈ ಪೈಕಿ 22 ಜನ ಪಿಹೆಚ್‍ಡಿ ಪಡೆದವರಿದ್ದಾರೆ.  121 ಅತಿಥಿ ಉಪನ್ಯಾಸಕರಿದ್ದು, ಇವರಲ್ಲಿಯೂ ಪಿಹೆಚ್‍ಡಿ ಪಡೆದವರು, ಕೆಸೆಟ್ ಪರೀಕ್ಷೆ ಪಾಸಾದವರು ಸೇರಿದಂತೆ ಅತ್ಯುತ್ತಮ ಬೋಧನಾ ಕೌಶಲ್ಯ ಹೊಂದಿರುವವರಿದ್ದಾರೆ.

ಕಾಲೇಜಿನಲ್ಲಿ ಸದ್ಯ ಪಿಯುಸಿ, ಪದವಿ ಹಾಗೂ ಸ್ನಾತಕೋತ್ತರ ಪದವಿ ಸೇರಿದಂತೆ ಒಟ್ಟು 2614 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.  2016-17 ರಿಂದ ಈವರೆಗೆ ಕಾಲೇಜಿಗೆ ಒಟ್ಟು 104 ವಿದ್ಯಾರ್ಥಿಗಳು ನಾನಾ ರ್ಯಾಂಕ್‍ಗಳನ್ನು ಪಡೆದಿದ್ದಾರೆ.  ಕಾಲೇಜಿನಲ್ಲಿ ಅತ್ಯುತ್ತಮ ಪ್ರಯೋಗಾಲಯಗಳಿದ್ದು, ಗ್ರಂಥಾಲಯದಲ್ಲಿ 73000 ವಿವಿಧ ಪುಸ್ತಕಗಳಿವೆ.  6000 ಇ-ಜರ್ನಲ್‍ಗಳಿದ್ದು, ಡಿಜಿಟಲ್ ಲೈಬ್ರರಿಯಲ್ಲಿ 31.35 ಲಕ್ಷದಷ್ಟು ಇ-ಬುಕ್‍ಗಳ ಸಂಗ್ರಹವಿದೆ.

ಕಾಲೇಜಿನ ನೂತನ ಕಟ್ಟಡದ ಅಭಿವೃದ್ಧಿಗೆ ಹಾಗೂ ಮೂಲಭೂತ ಸೌಕರ್ಯಗಳಿಗೆ ಸರ್ಕಾರವೂ  ಕೂಡ ಅಗತ್ಯ ಅನುದಾನ ಒದಗಿಸುವ ಮೂಲಕ ಉತ್ತಮ ಸಹಕಾರ ನೀಡಿದೆ.  ಕಾಲೇಜಿನಲ್ಲಿ ಪಿಜಿ ಡಿಪ್ಲೋಮಾ ಕೋರ್ಸ್ ಪ್ರಾರಂಭಿಸಲು ಸಿದ್ಧತೆಗಳನ್ನು ನಡೆಸಿದ್ದು, ವಿಶ್ವವಿದ್ಯಾನಿಲಯದ ನಿಯಮಗಳನುಸಾರ ಕಾಲೇಜಿನಲ್ಲಿ ಅಧ್ಯಯನ ಕೇಂದ್ರ ಪ್ರಾರಂಭಕ್ಕೆ ಕಾಲೇಜು ಎಲ್ಲ ಅರ್ಹತೆಗಳನ್ನೂ ಹೊಂದಿದೆ.

ಹೀಗಾಗಿ ಪ್ರಸ್ತುತ ನ್ಯಾಕ್ ಆವೃತ್ತಿಯಲ್ಲಿಯೂ ಉತ್ತಮ ಗ್ರೇಡ್ ಬಂದಲ್ಲಿ,  ಸರ್ಕಾರಿ ವಿಜ್ಞಾನ ಕಾಲೇಜಿಗೆ ಪ್ರತ್ಯೇಕ ವಿಶ್ವವಿದ್ಯಾಲಯದ ಮಾನ್ಯತೆ ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ.  ಕಾಲೇಜು ಅಭಿವೃದ್ಧಿಗೆ ಹಾಗೂ ಗುಣಮಟ್ಟದ ಶಿಕ್ಷಣ ನೀಡಿಕೆಗೆ ಕಾಲೇಜಿನಲ್ಲಿ ವ್ಯಾಸಂಗ ಮಾಡಿರುವ ಅನೇಕ ಹಳೆಯ ವಿದ್ಯಾರ್ಥಿಗಳ ನೆರವು ಪಡೆಯಲು ಕೂಡ ಮುಂದಾಗಿದ್ದೇವೆ ಎಂದು ಪ್ರಾಂಶುಪಾಲ ಹನುಮಂತರಾಯ ಅವರು ಹೇಳಿದರು.

ಹಳೆಯ ವಿದ್ಯಾರ್ಥಿಗಳ ಸಂಘಟನೆಗೆ ಯತ್ನ : ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ವ್ಯಾಸಂಗ ಮಾಡಿ, ಇದೀಗ ಡಿಸಿ, ಎಸ್‍ಪಿ, ವೈದ್ಯರು, ವಿಜ್ಞಾನಿಗಳು, ಸಂಶೋಧಕರು, ಇಂಜಿನಿಯರ್‍ಗಳು, ವಿವಿಧ ಅಧಿಕಾರಿಗಳು ಹೀಗೆ ಹಲವಾರು ಉನ್ನತ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ.  ಅಲ್ಲದೆ ಹಲವಾರು ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಮಾಜದ ಸೇವೆಯಲ್ಲಿ ಸಕ್ರಿಯರಾಗಿದ್ದಾರೆ.

ಈ ರೀತಿ ಕಾಲೇಜಿನ ಹಳೆಯ ವಿದ್ಯಾರ್ಥಿಗಳನ್ನು ಒಂದೇ ವೇದಿಕೆಗೆ ಸೇರಿಸಲು ಪ್ರಯತ್ನ ಪ್ರಾರಂಭಿಸಿದ್ದು, ಇದಕ್ಕಾಗಿ   cgscaa.com ವೆಬ್‍ಸೈಟ್ ಪ್ರಾರಂಭಿಸಿದ್ದು, ಇದರಲ್ಲಿ ಹಳೆಯ ವಿದ್ಯಾರ್ಥಿಗಳು ನೊಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.  ಅಥವಾ ಈ ಕಾಲೇಜಿನಲ್ಲಿ ವ್ಯಾಸಂಗ ಮಾಡಿರುವ ಹಳೆಯ ವಿದ್ಯಾರ್ಥಿಗಳು ತಮ್ಮ ಹೆಸರು ನೊಂದಣಿಗೆ ಡಾ. ಡಿ. ನಾಗರಾಜ್-9980689501 ಇವರನ್ನು ಸಂಪರ್ಕಿಸಿ, ಮಾಹಿತಿ ನೀಡಬೇಕು, ಅಲ್ಲದೆ ನ. 29 ರಂದು ನ್ಯಾಕ್ ತಂಡ ಕಾಲೇಜಿಗೆ ಭೇಟಿ ನೀಡಲಿದ್ದು, ಕಾಲೇಜಿನಲ್ಲಿ ಓದಿರುವ ಹಳೆಯ ವಿದ್ಯಾರ್ಥಿಗಳು ಅಂದು ಬೆಳಿಗ್ಗೆ 10.30 ಗಂಟೆಗೆ ಸರ್ಕಾರಿ ವಿಜ್ಞಾನ ಕಾಲೇಜಿಗೆ ಆಗಮಿಸಿ, ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಬೇಕು ಎಂದು ಹಳೆಯ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿ ತಿಪ್ಪೇಸ್ವಾಮಿ ಅವರು ಇದೇ ಸಂದರ್ಭದಲ್ಲಿ ಮನವಿ ಮಾಡಿಕೊಂಡರು.

ಸುದ್ದಿಗೋಷ್ಠಿಯಲ್ಲಿ ಕುವೆಂಪು ವಿವಿಯ ಮೈಕ್ರೋಬಯೋಲಜಿ ವಿಭಾಗದ ಮುಖ್ಯಸ್ಥ ಡಾ. ಎನ್.ಬಿ. ತಿಪ್ಪೇಸ್ವಾಮಿ, ಬಯೋಕೆಮಿಸ್ಟ್ರಿ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಪಿ. ನಿರಂಜನ್ ,  ಡಾ. ಡಿ. ನಾಗರಾಜ್ ಹಾಗೂ ಪ್ರಗತಿಪರ ರೈತರು ಮತ್ತು ಸಾಮಾಜಿಕ ಕಾರ್ಯಕರ್ತ ಡಾ. ಹಾಲೇಶ್ ನಾಯಕ್ ಸೇರಿದಂತೆ ಕಾಲೇಜಿನ ವಿವಿಧ ಅಧ್ಯಾಪಕ ವರ್ಗದವರು ಪಾಲ್ಗೊಂಡಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಬಿ ಎನ್ ಚಂದ್ರಪ್ಪ ಪರ ಮತಯಾಚನೆ ಮಾಡಿ, ಮೋದಿ, ಅಮಿತ್ ಶಾ ವಿರುದ್ಧ ಗುಡುಗಿದ ಸಿದ್ದರಾಮಯ್ಯ

ಚಿತ್ರದುರ್ಗ: ಈ ತಿಂಗಳ 26 ಕ್ಕೆ ಚುನಾವಣೆ ನಡೆಯಲಿದೆ. ಕಾಂಗ್ರೆಸ್ ಅಭ್ಯರ್ಥಿ ಬಿಎನ್ ಚಂದ್ರಪ್ಪ ರನ್ನ ಹೆಚ್ಚು ಮತಗಳಿಂದ ಗೆಲ್ಲಿಸಿಕೊಡಬೇಕು ಎಂದು ಮನವಿ ಮಾಡ್ತೀನಿ. ಕಳೆದ 10 ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿದೆ ಮೋದಿಯವರು ಪ್ರಧಾನಿಯಾಗಿದ್ದಾರೆ.

ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಬರುತ್ತಿದ್ದಂತೆ ಕಾಡುಗೊಲ್ಲ ಸಮುದಾಯವನ್ನು ST ಗೆ ಸೇರಿಸುತ್ತೇವೆ: ಪ್ರಿಯಾಂಕಾಗಾಂಧಿ ಭರವಸೆ

ಚಿತ್ರದುರ್ಗ ಏ 23: ಕಾಡುಗೊಲ್ಲ ಸಮುದಾಯವನ್ನು ST ಗೆ ಸೇರಿಸಲು ಮೇಲದ ಮೇಲೆ ನಾವು ಕೇಂದ್ರಕ್ಕೆ ಕೇಳುತ್ತಲೇ ಇದ್ದೇವೆ. ಆದರೂ ಇದುವರೆಗೂ ಏಕೆ ಸ್ಪಂದಿಸುತ್ತಿಲ್ಲ ಮೋದಿಯವರೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಖಾರವಾಗಿ ಪ್ರಶ್ನಿಸಿದರು. ಇಲ್ಲಿ

ಪ್ರತೀ ಬಾರಿ ಭಾರತೀಯರನ್ನು ನಂಬಿಸಿ ಮೋಸ ಮಾಡೋದು ಮೋದಿಯವರಿಗೆ ರೂಢಿಯಾಗಿದೆ: ಸಿ.ಎಂ. ಸಿದ್ದರಾಮಯ್ಯ

ಚಿತ್ರದುರ್ಗ ಏ 23: ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿ ಇಡಿ ದೇಶದ ರೈತರ 76 ಸಾವಿರ ಕೋಟಿ ಸಾಲ ಮನ್ನಾ ಮಾಡಿದರು. ಮೋದಿ ಪ್ರಧಾನಿಯಾಗಿ ಅತ್ಯಂತ ಶ್ರೀಮಂತರ 16 ಲಕ್ಷ ಕೋಟಿ ಸಾಲ ಮನ್ನಾ

error: Content is protected !!