Connect with us

Hi, what are you looking for?

ಪ್ರಮುಖ ಸುದ್ದಿ

ಡಿಸಿಗಳೊಂದಿಗೆ ಪ್ರಧಾನಮಂತ್ರಿಗಳ ವಿಡಿಯೋ ಸಂವಾದ : ನಿಮ್ಮ ಜಿಲ್ಲೆ ಗೆದ್ದರೇ ದೇಶ ಗೆದ್ದಂತೆ: ಪ್ರಧಾನಮಂತ್ರಿ ನರೇಂದ್ರ ಮೋದಿ

ಬಳ್ಳಾರಿ,(ಮೇ 18): ಕೋವಿಡ್ ಸರಪಳಿಯನ್ನು ತುಂಡರಿಸುವ ನಿಟ್ಟಿನಲ್ಲಿ ತಮ್ಮ ತಮ್ಮ ಜಿಲ್ಲೆಗಳ ಸವಾಲುಗಳೇನು ಎಂಬುದು ತಮಗೆ ಚೆನ್ನಾಗಿ ಗೊತ್ತಿರುತ್ತದೆ;ತಾವು ಈ ಕೊರೊನಾ ಯುದ್ದದಲ್ಲಿ ಫಿಲ್ಡ್ ಕಮಾಂಡರ್‍ಗಳಾಗಿ ಫ್ರಂಟ್‍ಲೈನ್ ವಾರಿಯರ್ಸ್‍ಗಳು ಸೇರಿದಂತೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ವಿಭಿನ್ನ ಯೋಜನೆ,ಆಲೋಚನೆಗಳ ಮೂಲಕ ಸೊಂಕನ್ನು ತಡೆಗಟ್ಟಿ. ತಮ್ಮ ಜಿಲ್ಲೆ ಗೆದ್ದರೇ ಇಡೀ ದೇಶವೇ ಗೆದ್ದಂತೆ…”

ಹೀಗೆಂದು ಜಿಲ್ಲಾಧಿಕಾರಿಗಳನ್ನು ಹುರಿದುಂಬಿಸಿದ್ದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು. ಅತಿಹೆಚ್ಚು ಕೊರೊನಾ ಸೊಂಕಿರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಮುಖ್ಯಮಂತ್ರಿಗಳೊಂದಿಗೆ ಮಂಗಳವಾರ ಏರ್ಪಡಿಸಿದ್ದ ವಿಡಿಯೋ ಸಂವಾದದಲ್ಲಿ ಅವರು ಮಾತನಾಡಿದರು. ಕೋವಿಡ್ ಹೋರಾಟದಲ್ಲಿ ಜಿಲ್ಲಾಧಿಕಾರಿಗಳ ಇದುವರೆಗಿನ ಪರಿಶ್ರಮ ಕೊಂಡಾಡುತ್ತಲೇ ಮುಂದೆಯೂ ಇದೇ ರೀತಿ ಕಾರ್ಯನಿರ್ವಹಿಸುವಂತೆ ಹುರಿದುಂಬಿಸಿದ್ದು ಕಂಡುಬಂದಿತು.

ಕೋವಿಡ್ ಸಂದಿಗ್ಧ ಸಮಯದಲ್ಲಿ ಅತ್ಯಂತ ಪರಿಶ್ರಮದಿಂದ ಕೆಲಸ ಮಾಡುತ್ತಿದ್ದೀರಿ;ಬಹಳಷ್ಟು ಜನರು ತಮ್ಮ ಮನೆಗಳಿಗೆ ಹೋಗಿಲ್ಲ;ಮನೆಯ ಸದಸ್ಯರನ್ನು ಭೇಟಿಯಾಗಿಲ್ಲ;ಅನೇಕರು ಸೊಂಕಿಗೆ ತುತ್ತಾದರೂ ಗುಣಮುಖರಾಗಿ ಮತ್ತೇ ಎಂದಿನಂತೆ ಕರ್ತವ್ಯಕ್ಕೆ ಮರಳಿದ್ದೀರಿ ಎಂದು ಡಿಸಿಗಳ ಕೆಲಸವನ್ನು ಶ್ಲಾಘಿಸಿದ ಅವರು ಕೋವಿಡ್ ಮಹಾಮಾರಿ ಕಟ್ಟಿಹಾಕುವ ನಿಟ್ಟಿನಲ್ಲಿ ನಡೆಸುತ್ತಿರುವ ಈ ಹೋರಾಟದಲ್ಲಿ ನವೀನ ಆಲೋಚನೆಗಳು,ಅವಿಷ್ಕಾರಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಿ, ತಮ್ಮ ಈ ನವೀನ ಆಲೋಚನೆಗಳು ಬೇರೆ ಜಿಲ್ಲೆಗಳಿಗೆ ಮಾದರಿಯಾಗಲಿದೆ ಮತ್ತು ಅಳವಡಿಕೆಗೆ ಸಹಕಾರಿಯಾಗುವುದರ ಜೊತೆಗೆ ಇಡೀ ದೇಶಕ್ಕೆ ಅತ್ಯುಪಯುಕ್ತವಾಗಲಿ ಎಂದು ಆಶಿಸಿದರು.

ನನ್ನ ಹಳ್ಳಿ ಕೊರೊನಾ ಮುಕ್ತ ಮಾಡುವೆ;ಕೊರೊನಾ ಬರದಂತೆ ತಡೆಗಟ್ಟುವ ಪ್ರತಿಜ್ಞೆ ತೊಡಿ:* ಹಳ್ಳಿಗಳಲ್ಲಿ ನನ್ನ ಹಳ್ಳಿ ಕೊರೊನಾ ಮುಕ್ತ ಮಾಡುವೇ ಮತ್ತು ಕೊರೊನಾ ಸೊಂಕು ನನ್ನ ಗ್ರಾಮಕ್ಕೆ ಬರದಂತೆ ತಡೆಗಟ್ಟುವೆ ಎಂಬ ಪ್ರತಿಜ್ಞೆಯನ್ನು ಜನರು ತೊಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ ಎಂದು ಪ್ರಧಾನಿ ನಮೋ ಅವರು ಹೇಳಿದರು.

ಕೊರೊನಾ ಸೊಂಕು ನಿಯಂತ್ರಿಸುವ ನಿಟ್ಟಿನಲ್ಲಿ ಸ್ಥಳೀಯ ಕಂಟೈನ್ಮೆಂಟ್ ವಲಯಗಳನ್ನು ಗುರುತಿಸಿ ಮತ್ತು ಟೆಸ್ಟಿಂಗ್ ಕೂಡ ಪರಿಣಾಮಕಾರಿಯಾಗಿ ಕೈಗೊಳ್ಳಿ ಎಂದರು.

ಕೊರೊನಾ ಮುಕ್ತ ಗ್ರಾಮಕ್ಕೆ ಸಂಕಲ್ಪಿಸುವುದರ ಜೊತೆಗೆ ಲಸಿಕಾ ಅಭಿಯಾನ ಚುರುಕುಗೊಳಿಸಲು ನಿರ್ದೇಶನ ನೀಡಿದರು. ಕೋವಿಡ್ ಕುರಿತು ಗ್ರಾಮಿಣ ಪ್ರದೇಶದಲ್ಲಿ ಹೆಚ್ಚಿನ ನಿಗಾವಹಿಸಬೇಕು ಮತ್ತು ಈ ಕುರಿತು ಜಾಗೃತಿ ಮೂಡಿಸಬೇಕು ಎಂದರು.

ಪ್ರತಿ ಜಿಲ್ಲೆಗಳಲ್ಲಿ ಆಕ್ಸಿಜನ್ ಘಟಕ ಸ್ಥಾಪನೆ: ಪಿಎಂ ಕೇರ್ಸ್ ಫಂಡ್ ನಿಧಿಯಿಂದ ದೇಶದ ಪ್ರತಿ ಜಿಲ್ಲೆಗಳಲ್ಲಿಯೂ ಆಮ್ಲಜನಕ ಉತ್ಪಾದನಾ ಘಟಕಗಳನ್ನು ಶೀಘ್ರ ಸ್ಥಾಪನೆ ಮಾಡುವುದಾಗಿ ಇದೇ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಘೋಷಿಸಿದರು.

ಪ್ರತಿ ಜಿಲ್ಲೆಯಲ್ಲಿ ಆಕ್ಸಿಜನ್ ಮಾನಿಟರಿಂಗ್ ಕಮಿಟಿ ಕಾರ್ಯಾರಂಭ ಮಾಡಬೇಕು.ಲಸಿಕಾ ಅಭಿಯಾನವನ್ನು ದೊಡ್ಡ ಪ್ರಮಾಣದಲ್ಲಿ ಹಮ್ಮಿಕೊಳ್ಳುವಂತೆ ಸೂಚನೆ ನೀಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೊರೊನಾದ ವಿರುದ್ಧದ ನಮ್ಮ ಹೋರಾಟ ಸೊಂಕು ತಡೆಗಟ್ಟುವುದರ ಜೊತೆಗೆ ಒಂದೊಂದು ಅಮೂಲ್ಯ ಜೀವ ಉಳಿಸುವುದಾಗಿದೆ ಎಂದರು.

ಕೋವಿಡ್ ನಿಯಂತ್ರಿಸುವ ನಿಟ್ಟಿನಲ್ಲಿ ಜನಪ್ರತಿನಿಧಿಗಳ ಸಹಭಾಗಿತ್ವ ಅಗತ್ಯ ಎಂಬುದನ್ನು ಪ್ರಸ್ತಾಪಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗ್ರಾಪಂ ಸದಸ್ಯನಿಂದ ಹಿಡಿದು ಸಂಸತ್ ಸದಸ್ಯನವರೆಗೆ ಎಲ್ಲರ ಸಹಭಾಗಿತ್ವದೊಂದಿಗೆ ಕಾರ್ಯನಿರ್ವಹಿಸಿ ಎಂದು ಅವರು ಸಲಹೆ ನೀಡಿದರು.

ವಿಡಿಯೋ ಸಂವಾದದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜಸಿಂಗ್ ಚವ್ಹಾಣ ಸೇರಿದಂತೆ 10 ರಾಜ್ಯಗಳ ಮುಖ್ಯಮಂತ್ರಿಗಳು,ಕರ್ನಾಟಕದ 17ಜಿಲ್ಲೆಗಳು ಸೇರಿದಂತೆ 46 ಜಿಲ್ಲೆಗಳ ಜಿಲ್ಲಾಧಿಕಾರಿಗಳು,ಜಿಲ್ಲಾ ಉಸ್ತುವಾರಿ ಸಚಿವರು ಇದ್ದರು.

ಬಳ್ಳಾರಿಯಿಂದ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್, ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ,ಎಸ್ಪಿ ಸೈದುಲು ಅಡಾವತ್, ಡಿಎಚ್‍ಒ ಡಾ.ಜನಾರ್ಧನ್ ಮತ್ತಿತರರು ಇದ್ದರು.

Click to comment

Leave a Reply

Your email address will not be published. Required fields are marked *

Latest

ದಿನ ಭವಿಷ್ಯ

ಬುಧವಾರ ರಾಶಿ ಭವಿಷ್ಯ-ಆಗಸ್ಟ್-4,2021 ಕಾಮಿಕಾ ಏಕಾದಶಿ ಸೂರ್ಯೋದಯ: 06:04 AM, ಸೂರ್ಯಸ್ತ: 06:44 PM ಸ್ವಸ್ತಿ ಶ್ರೀ ಮನೃಪ ಶಾಲಿವಾಹನ ಶಕೆ1943, ಸಂವತ್2077, ಪ್ಲವ ನಾಮ ಸಂವತ್ಸರ ಆಷಾಢ ಮಾಸ, ದಕ್ಷಿಣಾಯಣ, ಗ್ರೀಷ್ಮ...

ಚಿತ್ರದುರ್ಗ

upper bhadra meeting in DS Hally, chitradurga ಡಿಎಸ್ ಹಳ್ಳಿಯಲ್ಲಿ ಭದ್ರಾ ಮೇಲ್ದಂಡೆ ಸಭೆ; ಗ್ರಾಮಸ್ಥರು ಭಾಗಿ ಸುದ್ದಿಒನ್, ಚಿತ್ರದುರ್ಗ, (ಆ.03) : ತಾಲೂಕಿನ ದೊಡ್ಡಸಿದ್ದವ್ವನಹಳ್ಳಿ ಗ್ರಾಮದ ಜ್ಞಾನಪೂರ್ಣ ಶಾಲೆ ಆವರಣದಲ್ಲಿ...

ಚಿತ್ರದುರ್ಗ

ಸುದ್ದಿಒನ್, ಚಿತ್ರದುರ್ಗ, (ಆ.03) : ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಎಸ್ ಜೆ ಎಮ್ ಸಿ ಬಿ ಎಸ್ ಇ ರೆಸಿಡೆನ್ಷಿಯಲ್ ಶಾಲೆಯು 2020-21 ನೇ ಸಾಲಿನ ಸಿ ಬಿ ಎಸ್ ಇ...

ಪ್ರಮುಖ ಸುದ್ದಿ

ಬೆಂಗಳೂರು: ಸಚಿವ ಸಂಪುಟ ರಚನೆ ಬಗ್ಗೆ ಚರ್ಚೆ ನಡೆಸೋದಕ್ಕಾಗಿಯೇ ಸಿಎಂ ಮೂರು ದಿನದಿಂದ ದೆಹಲಿಯಲ್ಲಿದ್ದಾರೆ. ಈಗಾಗಲೇ ಹೈಕಮಾಂಡ್ ಜೊತೆ ಈ ಬಗ್ಗೆ ಮಾತುಕತೆ ನಡೆದಿದೆ ಎನ್ನಲಾಗಿದೆ. ಅಷ್ಟೇ ಅಲ್ಲ ಸಂಪುಟದಲ್ಲಿ ಯಾರೆಲ್ಲಾ ಇರ್ಬೇಕು...

ಪ್ರಮುಖ ಸುದ್ದಿ

ಮುಂಬೈ: ಶಿಲ್ಲಾ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಎಷ್ಟು ಆ್ಯಕ್ಟೀವ್ ಆಗಿದ್ರೋ ಮಗ ವಿಹಾನ್ ಕುಂದ್ರಾ ಕೂಡ ಅಷ್ಟೇ ಆ್ಯಕ್ಟೀವ್ ಆಗಿದ್ದ. ಸದಾ ಸೋಷಿಯಲ್ ಮೀಡಿಯಾದಲ್ಲಿ ಒಂದಿಲ್ಲೊಂದು ಪೋಸ್ಟ್ ಹಾಕ್ತಾ ಇದ್ದ. ಆದ್ರೆ ರಾಜ್...

ಪ್ರಮುಖ ಸುದ್ದಿ

ರಾಜಸ್ಥಾನ : ಹಿಂದಿನ ಕಾಲದಿಂದಲೂ ಪಾರಿವಾಳ ಸಂದೇಶ ರವಾನಿಸುವ, ಬೇಹುಗಾರಿಕೆಯಲ್ಲೂ ತನ್ನ ಚಾಣಾಕ್ಯತನ ತೋರಿದೆ. ತಂತ್ರಜ್ಞಾನ ಮುಂದುವರೆದ ಕಾಲದಲ್ಲೂ ಪಾಕಿಸ್ತಾನದಿಂದ ಪತ್ರವೊಂದನ್ನ ಹೊತ್ತು ತಂದಿದೆ ಪಾರಿವಾಳ. ಹೌದು, ಈ ಘಟನೆ ನಡೆದಿರೋದು ರಾಜಸ್ಥಾನದ...

You May Also Like

ಚಿತ್ರದುರ್ಗ

ಚಿತ್ರದುರ್ಗ, (ಜು.31): ಕೋಟೆನಾಡಿನಲ್ಲಿ ಮತ್ತೆ ಸರಗಳ್ಳತ ಹಾವಳಿ ಶುರುವಾಗಿದೆ. ಬೆಳಗಿ ಹೊತ್ತು ವಾಯು ವಿಹಾರಕ್ಕೆ ಬರುವ ಮಹಿಳೆಯರನ್ನು ಟಾರ್ಗೆಟ್ ಮಾಡುವ ಕಳ್ಳರು ಬೈಕ್ ನಲ್ಲಿ ಬಂದು ಸರ ಕಿತ್ತುಕೊಂಡು ಪರಾರಿಯಾಗುತ್ತಿದ್ದಾರೆ. ಶನಿವಾರ ಬೆಳಗ್ಗೆ...

ಪ್ರಮುಖ ಸುದ್ದಿ

ಅಭಿಮಾನಿಗಳು ತಮ್ಮ ಅಭಿಮಾನವನ್ನ ಒಂದೊಂದು ಬಾರಿ ಒಂದೊಂದು ರೀತಿಯಲ್ಲಿ ಅಭಿಮಾನ ತೋರಿಸ್ತಾರೆ. ಅದರಲ್ಲೂ ಅಭಿಮಾನಿಗಳು ತಮ್ಮ ನೆಚ್ಚಿನ ನಟ ನಟಿಯರ ಫೋಟೋಗಳಿಗೆ ಹಾರ ಹಾಕಿ, ಅಭಿಷೇಕ‌ ಮಾಡಿ ಎಂಜಾಯ್ ಮಾಡ್ತಾರೆ. ಇನ್ನು ಒಂದೆಜ್ಜೆ...

ಆರೋಗ್ಯ

ರಾಗಿ ತಿಂದೋನಿಗೆ ರೋಗವಿಲ್ಲ ಅನ್ನೋ ಮಾತು ಕೇಳಿರ್ತೀರಿ. ಆದ್ರೆ ಈ ಮಾತು ಯಾಕೆ ಹೇಳ್ತಾರೆ ಅಂತ ಗೊತ್ತಾಗ್ಬೇಕಂದ್ರೆ ರಾಗಿಯಿಂದ ಆರೋಗ್ಯಕ್ಕೆ ಅದೆಷ್ಟೆಲ್ಲ ಲಾಭಗಳಿವೆ ಎಂದು ತಿಳ್ಕೋಬೇಕು. ರಾಗಿಯಲ್ಲಿ ಸಾಕಷ್ಟು ಕ್ಯಾಲ್ಶಿಯಂ ಇದೆ. ಆಸ್ಟಿಯೋಪೋರೋಸಿಸ್...

ಆರೋಗ್ಯ

ಅರಳಿ ಮರ ಸಾಮಾನ್ಯವಾಗಿ ಎಲ್ಲೆಡೆ ಇರುತ್ತೆ. ಅದಕ್ಕೆ ನಗರ, ಗ್ರಾಮೀಣ ಅಂತೆಲ್ಲಾ ಏನಿಲ್ಲ. ನಗರ ಪ್ರದೇಶದಲ್ಲೂ ದೇವಾಲಯದ ಮುಂದೆ ಅರಳಿಮರವನ್ನ ಕಾಣಬಹುದು. ಈ ಅರಳಿ‌ಮರದ ಎಲೆಗಳಿಂದ ಸಾಕಷ್ಟು ಲಾಭಗಳಿವೆ. ಅದು ಅಷ್ಟಾಗಿ ಯಾರಿಗೂ...

Copyright © 2021 Suddione. Kannada online news portal

error: Content is protected !!