ನವದೆಹಲಿ: ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಇರುವ ಹಿನ್ನೆಲೆ ಈಗಾಗಲೇ ರಾಜ್ಯಕ್ಕೆ ಪ್ರಧಾನಿ ಮೋದಿ ಹಲವು ಬಾರಿ ಬಂದಿದ್ದಾರೆ. ಪ್ರಚಾರ ಮಾಡಿದ್ದಾರೆ. ಇದೀಗ ಮತ್ತೊಂದು ಬಿಗ್ ಪ್ಲ್ಯಾನ್ ಗೆ ಸಿದ್ಧತೆ ನಡೆಸಿದ್ದು, ಏಳು ನಗರಗಳನ್ನು ಸುತ್ತಲಿದ್ದಾರೆ. ಅದು ಕೇವಲ 36 ಗಂಟೆಯಲ್ಲಿ ಎಂಬುದು ವಿಶೇಷ.
ಪ್ರಧಾನಿ ಮೋದಿ ಏಪ್ರಿಲ್ 24 ಮತ್ತು 25 ರಂದು ದೇಶದ ಏಳು ನಗರಗಳಿಗೆ ಪ್ರಯಟಣ ಬೆಳೆಸಲಿದ್ದಾರೆ. 8 ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಕ್ಕೆ ಸುಮಾರು 5,300 ಕಿಲೋ ಮೀಟರ್ ಪ್ರಯಾಣಿಸುವ ವೇಗ ಎಲ್ಲರಲ್ಲೂ ಕುತೂಹಲ ಮೂಡಿಸಿದೆ.
ದೆಹಲಿಯಿಂದ ತಮ್ಮ ಪ್ರಯಾಣ ಶುರು ಮಾಡುವ ಪ್ರಧಾನಿ ಮೋದಿ ಅಲ್ಲಿಂದ ಕೇರಳಕ್ಕೆ ತೆರಳಿ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ನಂತರ ಕೇಂದ್ರಾಡಳಿತ ದಾದ್ರಾ, ನಗರ್ ಹವೇಲಿ, ದಿಯು ಮತ್ತು ದಮನ್ ಗೆ ತೆರಳುತ್ತಾರೆ. ಮಧ್ಯಪ್ರದೇಶ, ಕೊಚ್ಚಿ, ತಿರುವನಂತಪುರಂ, ಸೂರತ್ ಗೆ ಪ್ರಯಾಣ ಬೆಳೆಸಲಿದ್ದಾರೆ.





GIPHY App Key not set. Please check settings