Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಹೆಣ್ಣು ಮಗು ಆಗುವ ಭಯಕ್ಕೆ ತುಂಬು ಗರ್ಭಿಣಿ ಆತ್ಮಹತ್ಯೆ : ಹುಟ್ಟಿದ್ದು ಗಂಡು‌ ಮಗು..!

Facebook
Twitter
Telegram
WhatsApp

ಶತಮಾನಗಳು ಬದಲಾದರೂ ಕೆಲವು ಮನುಷ್ಯರ ಗುಣ ಮಾತ್ರ ಬದಲಾಗಿಲ್ಲ. ಹೆಣ್ಣು ಮಕ್ಕಳು ಅದೆಷ್ಟೇ ಸಾಧನೆಯನ್ನು ಮಾಡಿದ್ರು ಸಹ ಬದಲಾದ ಜಗತ್ತಿನಲ್ಲಿ ಕೆಲವೊಂದು ಹೆಣ್ಣು ಮಕ್ಕಳಿಗೆ ಗಂಡು‌ ಮಕ್ಕಳೇ ಬೇಕೆಂಬ ಮೋಹ ಇನ್ನು ಹೋಗಿಲ್ಲ. ಇದೀಗ ತುಂಬು ಗರ್ಭಿಣಿಯೊಬ್ಬಳು, ಮತ್ತೆಲ್ಲಿ ಹೆಣ್ಣು ಮಗು ಆಗಿ ಬಿಡುತ್ತೋ ಎಂಬ ಭಯಕ್ಕೆ ಆತ್ಮಹತ್ಯೆಗೆ ಶರಣಾಗಿದ್ದಾಳೆ.

25 ವರ್ಷದ ರಮ್ಯಾ ಈ ರೀತಿಯ ದುಡುಕು ನಿರ್ಧಾರ ತೆಗೆದುಕೊಂಡಿರುವುದು. ಈ ಘಟನೆ ಆಂಧ್ರಪ್ರದೇಶದ ಮಂಚಿರ್ಯಾಲ ಜಿಲ್ಲೆಯ ಎನ್ಟಿಆರ್ ನಗರದಲ್ಲಿ ನಡೆದಿದೆ. ರಮ್ಯಾಗೆ ಈ ಮೊದಲು ಕೂಡ ಹೆಣ್ಣು ಮಗುವೆ ಆಗಿತ್ತು. ಇದೀಗ ಮತ್ತೆಲ್ಲಿ ಹೆಣ್ಣು ಮಗು ಆಗುತ್ತೋ ಅನ್ನೋ ಭಯಕ್ಕೆ ಡೆಲಿವರಿಯಾಗುವ ಒಂದು ದಿನ ಮೊದಲು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪೋಸ್ಟ್ ಮಾರ್ಟನ್ ಮಾಡಿದ ಬಳಿಕ ಅದು ಗಂಡು ಮಗು ಎಂಬುದು ತಿಳಿದಿದೆ. ರಮ್ಯಾ 4 ವರ್ಷಗಳ ಹಿಂದೆ ಆನಂದ್ ಎಂಬಾತನ ಜೊತೆ ಮದುವೆಯಾಗಿತ್ತು. ಅತ್ತೆ ಮಾವಂದಿರ ಕಾಟದಿಂದಾಗಿ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಪೋಷಕರು ಆರೋಪ ಮಾಡಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಲೈಸೆನ್ಸ್ ಪಡೆಯದೆ ಡ್ರೋನ್ ಹಾರಿಸಿದ ಪ್ರತಾಪ್ : ಸಾಕ್ಷಿಗಳು ಬಹಿರಂಗ..!

ಡ್ರೋನ್ ಪ್ರತಾಪ್ ಸೋಷಿಯಲ್ ಮೀಡಿಯಾದಲ್ಲಿ ರೈತರ ಬೆಳೆಗಳಿಗೆ ಔಷಧಿ ಸಿಂಪಡಿಸಲು ಡ್ರೋನ್ ಬಳಕೆ ಮಾಡುವುದನ್ನು ನೋಡಬಹುದು. ಇದೀಗ ಡ್ರೋನ್ ವಿಚಾರಕ್ಕೆ ಹೊಸದೊಂದು ಸಂಕಷ್ಟ ಎದುರಾಗಿದೆ. ಡ್ರೋನ್ ಪ್ರತಾಪ್ ವಿರುದ್ಧ ಸಾಕ್ಷಿಗಳು ಸಿಕ್ಕಿವೆ. ಡ್ರೋನ್ ಪ್ರತಾಪ್

ಮೂವರು ಆಟಗಾರರು ಆಟ ಶುರು ಮಾಡಿದ್ರೆ RCB ಟಚ್ ಮಾಡೋದು ಕಷ್ಟ ಕಷ್ಟ..!

ಪಂಜಾಬ್ ಕಿಂಗ್ಸ್ ಮಣಿಸಿದ ಆರ್ಸಿಬಿ ಇಂದು ಮತ್ತೊಂದು ಆಟಕ್ಕೆ ಸಜ್ಜಾಗಿದೆ. ಕೆಕೆಆರ್ ವಿರುದ್ದ ಜಯ ಗಳಿಸುವ ಆತ್ಮ ವಿಶ್ವಾಸದಲ್ಲಿ ಮೈದಾನಕ್ಕೆ ಇಳಿದಿದೆ. ಕೊಲ್ಕತ್ತಾ ನೈಟ್ ರೈಡರ್ಸ್ ಜೊತೆಗೆ ಆರ್ಸಿಬಿ ಎರಡನೇ ಪಂದ್ಯವನ್ನಾಡಲಿದೆ. ಆದರೆ ಈ

ಚಳ್ಳಕೆರೆ | ರಸ್ತೆ ಅಪಘಾತದಲ್ಲಿ ಛಾಯಾಗ್ರಾಹಕ ಮೃತ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ಮಾರ್ಚ್. 29 :  ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿಯಾಗಿ ಓರ್ವ ವ್ಯಕ್ತಿ ಸ್ಥಳದಲ್ಲಿಯೇ ಮೃತಪಟ್ಟ ಘಟನೆ

error: Content is protected !!