Connect with us

Hi, what are you looking for?

ಪ್ರಮುಖ ಸುದ್ದಿ

ಪ್ರವಚನ ಎಂದರೆ ಅಂತರಂಗದ ಕೃಷಿ ನಮ್ಮ ಅಂತರಂಗವನ್ನು ಸಾಗುವಳಿ ಮಾಡಬೇಕು : ಡಾ. ಶಿವಮೂರ್ತಿ ಮುರುಘಾ ಶರಣರು

ಚಿತ್ರದುರ್ಗ, (ಅ.15) : ಕೃಷಿ ಇಲ್ಲದಿದ್ದರೆ ಮಾನವನಿಗೆ ಅನ್ನ ಸಿಕ್ಕುವುದಿಲ್ಲ. ಆಹಾರದ ಮೂಲ ಕೃಷಿ. ರೈತರು ಕೃಷಿ ಜೀವನದ ಸಾಧಕರು. ಶರಣರು, ಸಂತರು, ದಾರ್ಶನಿಕರು ಅಂತರಂಗದ ಸಾಧಕರು. ಪ್ರವಚನ ಎಂದರೆ ಅಂತರಂಗದ ಕೃಷಿ. ನಮ್ಮ ಅಂತರಂಗವನ್ನು ಸಾಗುವಳಿ ಮಾಡಬೇಕು ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ನಗರದ ಶ್ರೀ ಮುರುಘರಾಜೇಂದ್ರ ಬೃಹನ್ಮಠದಲ್ಲಿ ಆರಂಭವಾದ ಶರಣಸಂಸ್ಕøತಿ ಉತ್ಸವಕ್ಕು ಮುನ್ನ ನಡೆಯುವ ವಿಶೇಷ ಪ್ರವಚನಮಾಲೆ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀಗಳು, ಅಲ್ಲಮರು ಹೇಳಿದ ಹಾಗೆ ತನುವ ತೋಟವ ಮಾಡಿ ಎನ್ನುತ್ತಾರೆ. ಬಹಿರಂಗದ ನೋಟದ ಜೊತೆಗೆ ಅಂತರಂಗದ ನೋಟ ಬೇಕು ಎಂದರು.

ಪ್ರವಚನಕಾರರಾದ ಶ್ರೀ ಸಂಗಮೇಶ್ವರ ದೇವರು ಪ್ರವಚನ ನೀಡುತ್ತ, ಸಂಸ್ಕಾರ, ಸಂಸ್ಕರಣ ಮುಂದುರಿದ ರೂಪವೇ ಸಂಸ್ಕøತಿ. ಯಾವುದೇ ಒಂದು ವಸ್ತು ಅಥವಾ ಪದಾರ್ಥ ಕೆಡದಂತೆ ಹಾಗೆ ಇರುವುದಕ್ಕೆ ಸಂಸ್ಕøತಿ ಎನ್ನುತ್ತಾರೆ. ನಮ್ಮ ಜೀವನ ಸಾಧುವನ್ನಾಗಿ ಮಾಡಿಕೊಳ್ಳುವುದೇ ಸಂಸ್ಕಾರ. ಸಮಾಜಕ್ಕೆ ಹಿತವನ್ನು ಕಾಣುವುದನ್ನು ಕಂಡುಕೊಂಡ ಶರಣರು ಸೂರ್ಯ-ಚಂದ್ರರ ಬೆಳಕಿನಂತೆ ನಮ್ಮ ಅಂತರಂಗದೊಳಗೆ ಸತ್ಸಂಗ ಎಂಬ ವಚನಗಳನ್ನು ತುಂಬಿದರು. ದುಃಖದೊಳಗೆ ಸುಖ ಕಾಣಬೇಕು ಮನುಷ್ಯ. ಇದೇ ನಿಜವಾದ ಬದುಕು ಎಂದರು.

ಬೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮಿಗಳು ಮಾತನಾಡಿ, ಎಲ್ಲ ವಟುಗಳಿಗೆ ಮುರುಘಾಮಠ ಆಕರ್ಷಕವಾದ ಕೇಂದ್ರ. ಶರಣಸಂಸ್ಕøತಿ ಉತ್ಸವ ಅದು ಜೀವನೋತ್ಸಾಹ. ಎಲ್ಲ ಸಂಸ್ಕøತಿಗೆ ಮೂಲ ಕೃಷಿ ಸಂಸ್ಕøತಿ. ಶರಣಸಂಸ್ಕøತಿಯಲ್ಲಿ ವಿಚಾರಗಳ ಕೃಷಿ ಇರುತ್ತದೆ ಎಂದು ನುಡಿದರು.

ವೇದಿಕೆಯಲ್ಲಿ ವೀರಶೈವ ಸಮಾಜದ ಅಧ್ಯಕ್ಷ ಟಿ.ಎಸ್.ಎನ್.ಜಯಣ್ಣ, ಎಸ್.ಜೆ.ಎಂ. ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ. ಪರಮಶಿವಯ್ಯ, ರೆ. ಫಾದರ್ ಎಂ.ಎಸ್. ರಾಜು ಇದ್ದರು.
ಶ್ರೀಮತಿ ನೇತ್ರಾವತಿ ಸ್ವಾಗತಿಸಿದರು.

Click to comment

Leave a Reply

Your email address will not be published. Required fields are marked *

You May Also Like

ಪ್ರಮುಖ ಸುದ್ದಿ

ಚಿತ್ರದುರ್ಗ, ಸುದ್ದಿಒನ್, (ಏ.12) : ಯುವಕನೊಬ್ಬ ಚಿರತೆಯಿಂದ ತಪ್ಪಿಸಿಕೊಂಡು ಬಚಾವ್ ಆದ ಘಟನೆ ನಗರದ ಕೋಟೆಯ ಕರವತ್ತಿ ಬಳಿ ಇರುವ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಸೋಮವಾರ ರಾತ್ರಿ ನಡೆದಿದೆ. ನಗರದ...

ಪ್ರಮುಖ ಸುದ್ದಿ

ದಾವಣಗೆರೆ : ಜಿಲ್ಲೆಯಾದ್ಯಂತ ಭತ್ತದ ಬೆಳೆಗೆ ದುಂಡಾಣು ಅಂಗಮಾರಿ ರೋಗ ಕಂಡುಬಂದಿದ್ದು, ಇದರ ನಿರ್ವಹಣೆಗೆ ಕೃಷಿ ಇಲಾಖೆ ರೈತರಿಗೆ ಸಲಹೆ ನೀಡಿದೆ. ಭತ್ತದ ಬೆಳೆಯಲ್ಲಿ ಬೆಳವಣಿಗೆಯಿಂದ ತೆನೆ ಒಡೆಯುವ ಹಂತದವರೆಗೆ ತಲುಪಿ ಅಲ್ಲಲ್ಲಿ...

ಪ್ರಮುಖ ಸುದ್ದಿ

ಚಿತ್ರದುರ್ಗ, (ಏ.12) : ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ನಡೆಯುತ್ತಿರುವ ಚುನಾವಣೆಗೆ ಸಂಬಂಧಿಸಿದಂತೆ ಸೋಮವಾರ ಉಮೇದುವಾರಿಕೆ ಹಿಂತೆಗೆದುಕೊಂಡ ನಂತರ ಅಂತಿಮವಾಗಿ 9 ಅಭ್ಯರ್ಥಿಗಳು ಸ್ಪರ್ಧೆಯಲಿದ್ದಾರೆ. ನ.ಕೆಂಚವೀರಪ್ಪ, ಜೆ.ತಿಪ್ಪೇಸ್ವಾಮಿ ಕೊರ್ಲಕುಂಟೆ,...

ಪ್ರಮುಖ ಸುದ್ದಿ

ಚಿತ್ರದುರ್ಗ : ಚಿತ್ರದುರ್ಗ ಜಿಲ್ಲೆಯಲ್ಲಿ ಕೋವಿಡ್-19 ವೈರಸ್‍ನ ಸೋಂಕಿತ ಪ್ರಕರಣಗಳ ಸಂಖ್ಯೆ ಹಾವು ಏಣಿ ಆಟದಂತಾಗಿದೆ. ಆದರೆ ಸೋಮವಾರದ ಗುಣಮುಖಗೊಂಡವರು ಹೆಚ್ಚಾಗಿದ್ದು, ಸಮಾಧಾನ ತಂದಿದೆ. ಸೋಮವಾರದ ವರದಿಯಲ್ಲಿ 11 ಜನರಿಗೆ ಸೋಂಕು ದೃಢಪಟ್ಟಿದ್ದು,...

ಪ್ರಮುಖ ಸುದ್ದಿ

ಚಿತ್ರದುರ್ಗ :  ಕೋವಿಡ್-19 ಹಿನ್ನಲೆಯಲ್ಲಿ ಧಾರ್ಮಿಕ ಹಬ್ಬಗಳಿಗೆ ಸಂಬಂಧಿಸಿದಂತೆ ಮುಂಜಾಗ್ರತಾ ಕ್ರಮವಾಗಿ ವಿವಿಧ ಜಾತ್ರೆಗಳು, ಮೇಳಗಳಲ್ಲಿ ಗುಂಪು ಸೇರದಂತೆ, ಸಾರ್ವಜನಿಕ ಸ್ಥಳಗಳು, ಮೈದಾನಗಳು, ಉದ್ಯಾನವನಗಳು, ಮಾರುಕಟ್ಟೆ, ಧಾರ್ಮಿಕ ಪ್ರದೇಶ ಇತ್ಯಾದಿ ಸ್ಥಳಗಳಲ್ಲಿ ಸಾರ್ವಜನಿಕ...

ಪ್ರಮುಖ ಸುದ್ದಿ

ಚಿತ್ರದುರ್ಗ, (ಏ.12) : ಚಳ್ಳಕೆರೆ ತಾಲ್ಲೂಕಿನ ತಳುಕು ಹೋಬಳಿಯ ರೇಣುಕಾಪುರದಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಏ. 17ರಂದು ಗ್ರಾಮ ವಾಸ್ತವ್ಯ ಮಾಡಲಿದ್ದು, ಇದರ ಪೂರ್ವಭಾವಿಯಾಗಿ ಗ್ರಾಮದಲ್ಲಿನ ಕುಂದುಕೊರತೆಗಳ ಬಗ್ಗೆ ಗ್ರಾಮಸ್ಥರಿಂದ ಅಹವಾಲು ಸ್ವೀಕರಿಸಲಾಗಿದೆ....

ಪ್ರಮುಖ ಸುದ್ದಿ

ಚಿತ್ರದುರ್ಗ : ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ, ಕಾರ್ಮಿಕ ಅಧಿಕಾರಿಗಳ ಕಚೇರಿಯಲ್ಲಿ ಖಾಲಿ ಇರುವ ಗ್ರೂಪ್ ಡಿ ಹುದ್ದೆಯನ್ನು ಗೌರವಧನ ಆಧಾರದ ಮೇಲೆ ಭರ್ತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಏಪ್ರಿಲ್...

ಪ್ರಮುಖ ಸುದ್ದಿ

ಬೆಂಗಳೂರು: ಕಳೆದ ಬಾರಿ ಖಾಸಗಿ ಆಸ್ಪತ್ರೆಗಳಲ್ಲಿ 50% ರಷ್ಟು ಹಾಸಿಗೆ ಕೋವಿಡ್ ಗೆ ಮೀಸಲಿಡಲಾಗಿತ್ತು. ಇದೇ ರೀತಿ ಈಗ ಹಾಸಿಗೆ ಮೀಸಲಿಡಬೇಕು ಎಂದು ಖಾಸಗಿ ಆಸ್ಪತ್ರೆಗಳಿಗೆ ಸೂಚಿಸಲಾಗಿದೆ ಎಂದು ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ....

ದಿನ ಭವಿಷ್ಯ

ಸೋಮವಾರ ರಾಶಿ ಭವಿಷ್ಯ-ಏಪ್ರಿಲ್-12,2021 ಸೂರ್ಯೋದಯ: 06:07 AM, ಸೂರ್ಯಾಸ್: 06:30 PM ಶಾರ್ವರೀ ನಾಮ ಸಂವತ್ಸರ ಫಾಲ್ಗುಣ ಮಾಸ, ಶಿಶಿರ ಋತು, ಉತ್ತರಾಯಣ, ಕೃಷ್ಣ ಪಕ್ಷ, ತಿಥಿ: ಅಮಾವಾಸ್ಯೆ ( 08:00 )...

error: Content is protected !!