Connect with us

Hi, what are you looking for?

ಪ್ರಮುಖ ಸುದ್ದಿ

ರಾಜಕಾರಣಿಗಳೇ ಎಚ್ಚರ ಪತ್ರದಲ್ಲೂ ಬರುತ್ತೇ ಕೊರೊನಾ !

ನವದೆಹಲಿ :ಜನಪ್ರತಿನಿಧಿಗಳೇ ಕೊಂಚ ಬಿಡುವು ಮಾಡಿಕೊಂಡು ಈ ಸುದ್ದಿ ಓದಿ..ಇದು ನಿಮ್ಮ ಆರೋಗ್ಯದ ವಿಷಯ. ನಿರ್ಲಕ್ಷಿಸಿದರೆ ಅಪಾಯ ಖಚಿತ.
ರಾಜಕಾರಣಿಗಳಿಗೆ ನಿತ್ಯ ನೂರಾರೂ ಪತ್ರಗಳು ಬರುತ್ತವೆ. ಇವುಗಳನ್ನು ಒಮ್ಮೆಯಾದರು ನೋಡುತ್ತೀರಾ. ಈ ಪತ್ರಗಳೇ ಈಗ ಕೊರೊನಾ ಹರಡುತ್ತಿವೆ ಎನ್ನುತ್ತಿದೆ ಜಾಗತಿಕ ಪೊಲೀಸ್ ಸಂಘಟನೆಯಾಗಿರುವ ಇಂಟರ್ಪೋಲ್.

ಭಾರತ ಸೇರಿದಂತೆ 194 ಸದಸ್ಯ ರಾಷ್ಟ್ರಗಳಿಗೆ ಫ್ರಾನ್ಸ್‍ನ ಲಿಯೋನ್‍ನಲ್ಲಿರುವ ಜಾಗತಿಕ ಪೊಲೀಸ್ ಸಂಘಟನೆಯಾಗಿರುವ ಇಂಟರ್ಪೋಲ್ ( ಇಂಟರ್ ನ್ಯಾಷಿನಲ್ ಕ್ರಿಮಿನಲ್ ಪೊಲೀಸ್ ಕಮಿಷನ್) ಇಂತಹದೊಂದು ಎಚ್ಚರಿಕೆ ಸಂದೇಶ ರವಾನಿಸಿದೆ. ಈ ಸಂದೇಶ ತೀವ್ರ ಆತಂಕ ಸೃಷ್ಟಿಸಿದೆ.

ಕೊರೋನಾ ಸೋಂಕು ಒಳಗೊಂಡ ಪತ್ರ ರಾಜಕಾರಣಿಗಳು ಹಾಗೂ ಇನ್ನಿತರೆ ವ್ಯಕ್ತಿಗಳಿಗೆ ರವಾನೆಯಾಗಬಹುದು. ರಾಜಕಾರಣಿಗಳ ಮೇಲೆ ದಾಳಿ ಮಾಡುವ ಉದ್ದೇಶದಿಂದಲೇ ಇಂತಹ ಕೃತ್ಯ ನಡೆಯಬಹುದು. ಈಗಾಗಲೇ ಉದ್ದೇಶಪೂರ್ವಕವಾಗಿ ನಿರ್ದಿಷ್ಟಸ್ಥಳಗಳಲ್ಲಿ ಉಗುಳುವ, ಕೆಮ್ಮುವ ಘಟನೆಗಳು ವರದಿಯಾಗಿವೆ. ಜೊತೆಗೆ ಆನ್ಲೈನ್ನಲ್ಲೇ ಸೋಂಕಿತರ ದೇಹ ದ್ರವ ಮಾರಾಟಕ್ಕಿರುವುದಾಗಿ ಹೇಳಿರುವ ಪ್ರಕರಣ ಕೂಡಾ ಬೆಳಕಿಗೆ ಬಂದಿದೆ ಎಂದು ಇಂಟರ್ಪೋಲ್ ತಿಳಿಸಿದೆ.

ಆದರೆ ಪತ್ರ ಬರೆದು ಕೊರೋನಾ ಹಬ್ಬಿಸುವ ಯಾವುದಾದರೂ ಪ್ರಕರಣ ಜಗತ್ತಿನಲ್ಲಿ ನಡೆದಿದೆಯೇ ಎಂಬ ಬಗ್ಗೆ ಯಾವುದೇ ನಿದರ್ಶನವನ್ನು ಪ್ರಸ್ತಾಪಿಸಿಲ್ಲ. ಈ ರೀತಿಯ ಕೃತ್ಯಗಳನ್ನು ಯಾರು ಮಾಡಬಹುದು ಎಂಬ ಬಗ್ಗೆಯೂ ಉಲ್ಲೇಖಿಸಿಲ್ಲ ಎಂದು ವರದಿಗಳು ತಿಳಿಸಿವೆ.

ಕೋವಿಡ್ ಸಂಕಷ್ಟದಲ್ಲಿ ರಾಜಕಾರಣಿಗಳು ಹಾಗೂ ಗಣ್ಯ ವ್ಯಕ್ತಿಗಳ ಭದ್ರತೆಗೆ ನಿಯೋಜನೆಗೊಂಡಿರುವ ವ್ಯಕ್ತಿಗಳು ಇಂತಹ ಅಪಾಯಗಳನ್ನು ಅರಿತುಕೊಂಡಿರಬೇಕು. ಯಾವುದಾದರೂ ವ್ಯಕ್ತಿ ಅಸಹಕಾರ ಧೋರಣೆಯಿಂದ ಹತ್ತಿರ ಬಂದರೆ ಹೆಚ್ಚು ಎಚ್ಚರಿಕೆ ವಹಿಸಬೇಕು. ಪಿಪಿಇ ಕಿಟ್ ಧರಿಸಬೇಕು. ಅಂಚೆ ಇಲಾಖೆ ಹಾಗೂ ಕಚೇರಿಗಳಲ್ಲಿ ಪತ್ರ ವಿಲೇವಾರಿ ಮಾಡುವವರಿಗೆ ಶಂಕಾಸ್ಪದ ಪಾರ್ಸೆಲ್ ಗಳು ಅಪಾಯ ತಂದೊಡ್ಡುವ ಸಾಧ್ಯತೆ ಹೆಚ್ಚಿದೆ ಎಂದು ಸಲಹೆ ನೀಡಿದೆ.

ಕಾನೂನು ಜಾರಿ ಅಧಿಕಾರಿಗಳು, ವೈದ್ಯರು ಹಾಗೂ ಅವಶ್ಯ ಸೇವೆ ಸಿಬ್ಬಂದಿಗಳನ್ನು ಬೆದರಿಸಲು ಅವರ ಮೇಲೆ ಉಗುಳಿದ ಮತ್ತು ಕೆಮ್ಮಿದ ಪ್ರಕರಣಗಳನ್ನು ಇಂಟರ್ಪೋಲ್ ಪ್ರಸ್ತಾಪಿಸಿದೆ.

Click to comment

Leave a Reply

Your email address will not be published. Required fields are marked *

You May Also Like

ಪ್ರಮುಖ ಸುದ್ದಿ

ನವದೆಹಲಿ : ರೈತರು 100 ಕಿ.ಮೀ ಟ್ರಾಕ್ಟರ್ ಪೆರೇಡ್ ನಡೆಸಲು ರ್ಯಾಲಿಗೆ ದೆಹಲಿ ಪೊಲೀಸರು ಅವಕಾಶ ನೀಡಿದ್ದಾರೆ. ಈ ನಿಟ್ಟಿನಲ್ಲಿ ದೇಶದ ರಾಜಧಾನಿ ದೆಹಲಿಯ ಗಾಜಿಪುರ, ಸಿಂಗು ಮತ್ತು ಟಿಕ್ರಿ ಗಡಿಗಳಲ್ಲಿ ಬ್ಯಾರಿಕೇಡ್‌ಗಳನ್ನು ತೆರವುಗೊಳಿಸಿದ್ದು, ಗುರುವಾರ...

ಪ್ರಮುಖ ಸುದ್ದಿ

ಬೆಂಗಳೂರು: ಯು.ಕೆ.ಯಿಂದ ದೇಶಕ್ಕೆ ಬಂದವರಲ್ಲಿ 107 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಎಲ್ಲರ ಮಾದರಿಗಳನ್ನು ಲ್ಯಾಬ್ ಗಳಲ್ಲಿ ಪರೀಕ್ಷಿಸಲಾಗಿದೆ. ಈ ಪೈಕಿ 20 ಮಂದಿಗೆ ರೂಪಾಂತರಗೊಂಡ ವೈರಾಣು ಸೋಂಕು ತಗುಲಿದೆ ಎಂದು ದೃಢಪಟ್ಟಿದೆ....

ಪ್ರಮುಖ ಸುದ್ದಿ

ಧಾರವಾಡ: ಬ್ರಿಟನ್ ನಲ್ಲಿ ಕಾಣಿಸಿಕೊಂಡಿದ್ದ ರೂಪಾಂತರಿ ಕೊರೊನಾ ಇದೀಗ ಭಾರತಕ್ಕೂ ಕಾಲಿಟ್ಟಿದೆ. ಅಷ್ಟೇ ಅಲ್ಲ ರಾಜ್ಯದಲ್ಲೂ ರೂಪಾಂತರಿ ಕೊರೊನಾ ಹೊಂದಿರುವವರ ಸಂಖ್ಯೆ ಹೆಚ್ಚಾಗುತ್ತಲೆ ಇದರ. ಬೆಂಗಳೂರಿನಲ್ಲಿ ಈಗಾಗಲೇ ಆರು ಮಂದಿಯಲ್ಲಿ ರೂಪಾಂತರಿ ಕೊರೊನಾ...

ಪ್ರಮುಖ ಸುದ್ದಿ

ನವದೆಹಲಿ, ಸುದ್ದಿಒನ್ : ಇದು ಕೋವಿಡ್ ನಾಮ ಸಂವತ್ಸರ. ಹೆಸರೇ ಸೂಚಿಸುವಂತೆ, 2020 ಎಲ್ಲರಲ್ಲೂ ಕರೋನ ಭಯವನ್ನು,  ನಡುಕವನ್ನು ಉಂಟು ಮಾಡಿದ ವರ್ಷ ಇದು. ಆದರೆ, ರಾಜಕೀಯವಾಗಿ ಮಾತ್ರ ಈ ವರ್ಷ ವರ್ಣರಂಜಿತ....

ಪ್ರಮುಖ ಸುದ್ದಿ

ದಾವಣಗೆರೆ: ಜಿಲ್ಲೆಯಲ್ಲಿ ಸೋಮವಾರ 04 ಜನರಿಗೆ ಕರೋನಾ ದೃಢಪಟ್ಟಿದ್ದು, ಗುಣಮುಖರಾದ 12 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಈವರೆಗೆ 21,991 ಜನರಿಗೆ ಸೋಂಕು ತಗುಲಿದಂತಾಗಿದ್ದು, 21,612 ಸೋಂಕಿತರು ಗುಣಮುಖ ಕಂಡಂತಾಗಿದೆ. 264 ಜನರು ಸೋಂಕಿಗೆ...

ಪ್ರಮುಖ ಸುದ್ದಿ

ಚೀನಾ: ಚೀನಾ ದೇಶ ಕೊರೊನಾ ವಿಚಾರವಾಗಿ ಅಂದಿನಿಂದ ಇಂದಿನವರೆಗೆ ತನ್ನ ತಪ್ಪನ್ನು ಮುಚ್ಚಿಟ್ಟುಕೊಂಡೆ ಬರುತ್ತಿದೆ. ಅದರ ತಪ್ಪನ್ನು ಯಾರಾದ್ರೂ ಹೇಳಿದ್ರೆ ಅವರನ್ನೇ ಶಿಕ್ಷಿಸುತ್ತಿದೆ. ಅದಕ್ಕೆ ಉದಾಹರಣೆ ಕೊರೊನಾ ಬಗ್ಗೆ ವರದಿ ಬಿಚ್ಚಿಟ್ಟಿದ್ದ ಪತ್ರಕರ್ತೆಗೆ...

ಪ್ರಮುಖ ಸುದ್ದಿ

ದಾವಣಗೆರೆ: ಜಿಲ್ಲೆಯಲ್ಲಿ ಭಾನುವಾರ 15 ಜನರಿಗೆ ಕರೋನಾ ದೃಢಪಟ್ಟಿದ್ದು, ಗುಣಮುಖರಾದ 14 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಈವರೆಗೆ 21,987 ಜನರಿಗೆ ಸೋಂಕು ತಗುಲಿದಂತಾಗಿದ್ದು, 21,600 ಸೋಂಕಿತರು ಗುಣಮುಖ ಕಂಡಂತಾಗಿದೆ. 264 ಜನರು ಸೋಂಕಿಗೆ...

ಪ್ರಮುಖ ಸುದ್ದಿ

ಚಿತ್ರದುರ್ಗ :ಜಿಲ್ಲೆಯಲ್ಲಿ ಕೋವಿಡ್-19 ವೈರಸ್ ಸಂಬಂಧಿಸಿದಂತೆ ಭಾನುವಾರದ ವರದಿಯಲ್ಲಿ 21 ಜನರಿಗೆ ಸೋಂಕು ಇರುವುದು ದೃಢಪಟ್ಟಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 14,240 ಕ್ಕೆ ಏರಿಕೆಯಾಗಿದೆ. ಭಾನುವಾರ 13 ಜನರು ಗುಣಮುಖರಾಗಿದ್ದಾರೆ....

ಪ್ರಮುಖ ಸುದ್ದಿ

ನವದೆಹಲಿ : 9 ಕೋಟಿಗೂ ಹೆಚ್ಚು ರೈತರಿಗೆ 18,000 ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಿದ ಪ್ರಧಾನಿ ನರೇಂದ್ರ ಮೋದಿ ರೈತರೊಂದಿಗೆ ಸಂವಾದ ನಡೆಸಿದರು. ಬಳಿಕ ರೈತರನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಪ್ರಧಾನ್ ಮಂತ್ರಿ ಕಿಸಾನ್...

error: Content is protected !!