in

ಇಷ್ಟು ದಿನ ಡ್ರಗ್ಸ್ ಸಿಕ್ತಾ ಇತ್ತು..ಇದೀಗ ಡ್ರಗ್ಸ್ ಫ್ಯಾಕ್ಟರಿಯೇ ಪತ್ತೆ..!

suddione whatsapp group join

ಬೆಂಗಳೂರು: ಹಿಂದೆಂದು ಭೇಟೆಯಾಡದ ದೊಡ್ಡ ಜಾಲವನ್ನೇ ಸಿಸಿಬಿ ಪೊಲೀಸರು ಜಾಲಾಡಿದ್ದಾರೆ. ಇಷ್ಟು ದಿನ ಪೆಡ್ಲರ್, ಸೇಲರ್ ಗಳನ್ನ ಹಿಡಿಯುತ್ತಿದ್ದ ಪೊಲೀಸರು, ಇತಿಹಾಸದಲ್ಲೇ ಮೊದಲ ಬಾರಿಗೆ ಎಲ್ಲರು ತಿರುಗಿ ನೋಡುವಂತ ಜಾಲ ಪತ್ತೆ ಮಾಡಿದ್ದಾರೆ. ಅದು ಡ್ರಗ್ಸ್ ತಯಾರಿಸುತ್ತಿದ್ದ ಫ್ಯಾಕ್ಟರಿ.

ಎಸ್, ಇದೊಂದು ಸಿಂಥೆಟಿಕ್ ಡ್ರಗ್ಸ್ ಫ್ಯಾಕ್ಟರಿ. ವಿದೇಶದಲ್ಲಿ ತಯಾರಾಗುತ್ತಿದ್ದ ಡ್ರಗ್ಸ್ ಫ್ಯಾಕ್ಟರಿ ಇದೀಗ ಬೆಂಗಳೂರಿನಲ್ಲೇ ಆರಂಭವಾಗಿದೆ. ನಗರದ ಎಲೆಕ್ಟ್ರಾನಿಕ್ ಸಿಟಿಯ ಮನೆಯೊಂದರಲ್ಲಿ ಈ ಡ್ರಗ್ಸ್ ತಯಾರು ಮಾಡುತ್ತಿದ್ದ ಘಟನೆ ಬೆಳಕಿಗೆ ಬಂದಿದೆ.

ಡ್ರಗ್ಸ್ ಫ್ಯಾಕ್ಟರಿಯಲ್ಲಿ ಐದು ಮಾದರಿಯ ಡ್ರಗ್ಸ್ ತಯಾರಿ ಮಾಡಿ ಬೆಂಗಳೂರಿನ ಸುತ್ತಮುತ್ತಲೆಲ್ಲಾ ಮಾರಾಟ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಈ ಸಂಬಂಧ ಜಾನ್ ಎಂಬ ಆರೋಪಿಯನ್ನ ಬಂಧಿಸಲಾಗಿದೆ. ಎಲೆಕ್ಟ್ರಾನಿಕ್ ಸಿಟಿಯಲ್ಲಿ ವಯಸ್ಸಾದ ದಂಪತಿಯ ಮನೆಯೊಂದರಲ್ಲಿ ಬಾಡಿಗೆ ಪಡೆದು, ವಾಸವಿದ್ದು ಅಲ್ಲಿಯೇ ಡ್ರಗ್ಸ್ ತಯಾರು ಮಾಡ್ತಿದ್ದ ಎನ್ನಲಾಗಿದೆ. ಪೊಲೀಸರು ಆತನನ್ನ ಅರೆಸ್ಟ್ ಮಾಡಿ ಐದು ಕೋಟಿ ಮೌಲ್ಯದ್ದಷ್ಟು ಡ್ರಗ್ಸ್ ವಶಕ್ಕೆ ಪಡೆದಿದ್ದಾರೆ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಆಪ್ತ ಸ್ನೇಹಿತ ನಿಧನ : ಬಿಕ್ಕಿ ಬಿಕ್ಕಿ ಅತ್ತ ಸಿಎಂ ಬೊಮ್ಮಾಯಿ..!

ಚಳ್ಳಕೆರೆಯಲ್ಲಿ ಹಿಂದೂ ಮಹಾಗಣಪತಿ ವಿಸರ್ಜನೆ ಕಾರ್ಯಕ್ರಮಕ್ಕೆ ಚಾಲನೆ