ನವದೆಹಲಿ: ಉಕ್ರೇನ್ ಸಂಪೂರ್ಣವಾಗಿ ಯುದ್ಧಭೂಮಿಯಾಗಿದೆ. ಬಾಂಬ್ ಗಳ ಸದ್ದು ಕೇಳಿಸುತ್ತಲೇ ಇದೆ. ಅಲ್ಲಿನ ಜನ ಆತಂಕದಲ್ಲಿದ್ದಾರೆ. ರಾಷ್ಟ್ರ ರಕ್ಷಣೆಗೆ ಉಕ್ರೇನ್ ಅಧ್ಯಕ್ಷ ಕೂಡ ಸೈನಿಕರ ಜೊತೆಗೆ ನಿಂತಿದ್ದಾರೆ. ಈ ಮಧ್ಯೆ ವಿದ್ಯಾಭ್ಯಾಸಕ್ಕಾಗಿ ಹೋಗಿರುವ ಕನ್ನಡಿಗರನ್ನ ತಮ್ಮ ದೇಶಕ್ಕೆ ಕರೆತರುವ ಕೆಲಸ ಮಾಡ್ತಿದೆ ಭಾರತ ಸರ್ಕಾರ. ಈಗಾಗಲೇ ಮೂರು ದಿನದಿಂದ ಈ ಕಾರ್ಯಾಚರಣೆ ನಡೆಯುತ್ತಿದೆ.

ಈ ಮಧ್ಯೆ ಇಂದು ಪ್ರಧಾನಿ ಮೋದಿ ಮಹತ್ವದ ನಿರ್ಧಾರವನ್ನ ತೆಗೆದುಕೊಂಡಿದ್ದಾರೆ. ಉನ್ನತಮಟ್ಟದ ಸಭೆ ಕರೆದಿರುವ ಪ್ರಧಾನಿ ಮೋದಿ, ಉಕ್ರೇನ್ ಗೆ ಸಚಿವರನ್ನ ಕಳಿಸುವ ಬಗ್ಗೆ ಚರ್ಚೆ ನಡೆಸಿದ್ದಾರೆ. ವಿ ಕೆ ಸಿಂಗ್ ನೇತೃತ್ವದಲ್ಲಿ ಸಚಿವರನ್ನ ಉಕ್ರೇನ್ ಗೆ ಕಳುಹಿಸಲಿದ್ದಾರೆ.

ಕೇಂದ್ರದ ಹಲವು ಸಚಿವರು ಯುದ್ಧ ಭೂಮಿಗೆ ನೇರವಾಗಿ ಹೋಗಲಿದ್ದಾರೆ. ಹರ್ದೀಪ್ ಸಿಂಗ್ ಪುರಿ, ಜ್ಯೋತಿರಾದಿತ್ಯ ಸಿಂದ್ಯಾ, ವಿ ಕೆ ಸಿಂಗ್ ತೆರಳಲಿದ್ದು, ಸಚಿವರಿಗೆ ಭಾರತೀಯರನ್ನ ಕರೆ ತರುವ ಹೊಣೆ ನೀಡಲಾಗಿದೆ. ಇನ್ನು ಕೇಂದ್ರ ಸಚಿವರು ಉಕ್ರೇನ್ ಪಕ್ಕದ ರಾಷ್ಟ್ರಗಳಿಂದ ಕಾರ್ಯಾಚರಣೆ ನಡೆಸಲಿದ್ದಾರೆ. 4 ದೇಶಗಳ ಜೊತೆ ಸಚಿವರು ಸಂಪರ್ಕದಲ್ಲಿರುತ್ತಾರೆ. ಒಟ್ಟಾರೆ ಯುದ್ಧಭೂಮಿಯಲ್ಲಿ ಸಿಲುಕಿರುವ ಭಾರತೀಯರನ್ನ ಸುರಕ್ಷಿತವಾಗಿ ಕರೆತರುವಲ್ಲಿ ಭಾರತ ಸರ್ಕಾರ ನಿರತವಾಗಿದೆ.


